ETV Bharat / state

Cauvery water issue: ಕಾವೇರಿ ವಿಚಾರದಲ್ಲಿ ಸಂಕಷ್ಟ ಸೂತ್ರ ಆಗಬೇಕು ಎಂಬುದು ನಮ್ಮ ಬೇಡಿಕೆ: ಸಚಿವ ಹೆಚ್ ಕೆ ಪಾಟೀಲ್ - ಈಟಿವಿ ಭಾರತ್​ ಕನ್ನಡ ನ್ಯೂಸ್

ಸಂಕಷ್ಟ ಸೂತ್ರವಾಗಲೂ ಅದಷ್ಟು ಬೇಗ ಆಗಬೇಕು ಸುಪ್ರೀಂಕೋರ್ಟ್​ ವಿಶೇಷ ಕ್ರಮ ವಹಿಸಲಿ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.

ಸಚಿವ ಎಚ್.ಕೆ ಪಾಟೀಲ್
ಸಚಿವ ಎಚ್.ಕೆ ಪಾಟೀಲ್
author img

By ETV Bharat Karnataka Team

Published : Aug 27, 2023, 10:57 PM IST

ಸಚಿವ ಹೆಚ್.ಕೆ ಪಾಟೀಲ್ ಹೇಳಿಕೆ

ಹುಬ್ಬಳ್ಳಿ : ಕಾವೇರಿ ವಿವಾದ ಕುರಿತ ನಾವು ಈಗಾಗಲೇ ಸುಪ್ರೀಂ ಕೋರ್ಟ್​ಗೆ ಏನು ಮನವರಿಕೆ ಮಾಡಬೇಕೋ ಮಾಡಿದ್ದೇವೆ. ನಮ್ಮ ನಿಲುವು ಏನಿದೆ ಎಂಬುದನ್ನು ತಿಳಿಸಿದ್ದೇವೆ. ಸುಪ್ರೀಂಕೋರ್ಟ್ ಇನ್ನೊಂದು ಎರಡು ದಿನಗಳಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ನಮ್ಮ ವಾದ, ಬೇಡಿಕೆ ಏನೆಂದರೇ ಸಂಕಷ್ಟ ಸೂತ್ರ ಪಾಲನೆ ಆಗಬೇಕು. ಅದು ಅದಷ್ಟು ಬೇಗ ಆಗಬೇಕು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.

ನಗರದಲ್ಲಿಂದು ‌ಮಾತನಾಡಿದ ಅವರು, ಇದಕ್ಕೆ ಸುಪ್ರೀಂಕೋರ್ಟ್ ಸಂಕಷ್ಟ ಸೂತ್ರಕ್ಕೆ ಮನ್ನಣೆ ಮಾಡಬೇಕು. ಕಾವೇರಿ ಮ್ಯಾನೇಜ್ಮೆಂಟ್ ಹಾಗೂ ಕಾವೇರಿ ರಿವರ್ ವಾಟರ್ ಅಥಾರಿಟಿ ಅವರು 10 ಸಾವಿರ ಕ್ಯೂಸೆಕ್​ ನೀರು ಬಿಡಬೇಕು ಅಂತಾರೆ. ಅದನ್ನು ಕಡಿತ ಮಾಡಿ ಎಂದು ಕೇಳಿಕೊಂಡಿದ್ದೇವೆ. ಕಾನೂನಾತ್ಮಕವಾಗಿ ಸಹ ಹೋರಾಟ ನಡೆಸಿದ್ದೇವೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮ್ಮ ಅಧಿಕಾರಿಗಳು ನೀರು ಬಿಡುಗಡೆ ಮಾಡುವ ಮುನ್ನ ತಕಾರರು ಅರ್ಜಿ ಸಹ ಕೊಟ್ಟಿದ್ದರು ಎಂದರು.

ಇದನ್ನೂ ಓದಿ : ಮೇಕೆದಾಟು ಯೋಜನೆಯೊಂದೇ ಕಾವೇರಿ ನದಿ ನೀರು ಸಮಸ್ಯೆಗೆ ಪರಿಹಾರ: ಡಿಸಿಎಂ ಡಿ.ಕೆ.ಶಿವಕುಮಾರ್

ಬಿಜೆಪಿ ಅಧಿಕಾರಾವಧಿಯಲ್ಲಿ ಆದ ಹಗರಣ ತನಿಖೆಗೆ ಹೊಸ ಸಮಿತಿ ರಚನೆ ಮಾಡಲಾಗಿದೆ. ನಿವೃತ್ತ ನ್ಯಾಯಾಧೀಶ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಹೊಸ ಸಮಿತಿ ರಚನೆ ಮಾಡಲಾಗಿದೆ. ನೀತಿ, ಕರಾರು ಯಾವ ವೇಳೆಯಲ್ಲಿ ಆಗಿದೆ, ಏನೆಲ್ಲಾ ಆಗಿದೆ, ಎಷ್ಟು ಆಗಿದೆ ಎಂಬ ಕುರಿತು ತನಿಖೆಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸತ್ಯಾನ್ವೇಷಣೆ ಮಾಡುವ ನಿಟ್ಟಿನಲ್ಲಿ ತನಿಖೆ ಮಾಡಬೇಕು. ಕೋವಿಡ್ ನಂತಹ ಸಂದರ್ಭದಲ್ಲಿ‌ ಮಾನವೀಯತೆಗೆ ಸವಾಲು ಆಗಿ ಬಂದಿತ್ತು. ಜನರು ಹಾದಿ ಬೀದಿಯಲ್ಲಿ ಸಾವನ್ನಪ್ಪಿದ್ದರು. ಅಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಅಂದರೆ ಏನು. ಅಂದು ಭ್ರಷ್ಟಾಚಾರ ಮಾಡಿದವರ ಮನಸ್ಥಿತಿ ಹೇಗೆ ಇತ್ತು ಅಂತಾ ಊಹಿಸಬೇಕು. ಅಂತಹ ಸಂದರ್ಭದಲ್ಲಿ ಮಾಡಿದ ಭ್ರಷ್ಟಾಚಾರ ಅತ್ಯಂತ ಕೀಳುತನದ್ದು. ಅತ್ಯಂತ ಪ್ರಾಮಾಣಕವಾಗಿ ಸತ್ಯವನ್ನು ಹೊರಗೆ ತರುವ ಕೆಲಸ ಆಗಲಿ. ಯಾರು ಅದಕ್ಕೆ ಕಾರಣವೋ ಅವರಿಗೆ ಶಿಕ್ಷೆ ಆಗಲಿ ಎಂದು ಸಚಿವರು ಹೇಳಿದರು.

ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು : ಮತ್ತೊಂದೆಡೆ ಕೃಷ್ಣರಾಜಸಾಗರ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಈ ಬಾರಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಕಳೆದ ಹಲವು ದಿನಗಳಿಂದ ಕೆಆರ್​ಎಸ್ ಜಲಾಶಯದಿಂದ ಕಾವೇರಿ ನದಿಯ ಮೂಲಕ ತಮಿಳುನಾಡಿಗೆ ಪ್ರತಿನಿತ್ಯ 10 ರಿಂದ 12 ಸಾವಿರ ಕ್ಯೂಸೆಕ್​ ನೀರನ್ನು ಹರಿಬಿಡಲಾಗುತ್ತಿದೆ ಎಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಕೆಆರ್​​ಎಸ್​ ಜಲಾಶಯಕ್ಕೆ ಮುತ್ತಿಗೆಗೆ ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಇದನ್ನೂ ಓದಿ : ಧರಣಿ ನಡೆಸುತ್ತಿದ್ದ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ರೈತರು.. ಡಿಸಿ, ಎಸ್ಪಿ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.