ETV Bharat / state

ಸ್ಮಾರ್ಟ್‌ ಯೋಜನೆಯಲ್ಲಿ ಅತ್ಯಾಧುನಿಕಗೊಳ್ಳಬೇಕಿದ್ದ ನೆಹರು ಮೈದಾನದ ಸ್ಥಿತಿ ಅಯ್ಯೋ, ಯಾಕ್‌ ಕೇಳ್ತೀರಾ... - Nehru stadium problem in hubballi

ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಸ್ಮಾರ್ಟ್ ಮಾಡಲು ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆ ತಕ್ಕಮಟ್ಟಿಗೆ ಇಲ್ಲಿನ ಜನರಿಗೆ ಉಪಯೋಗವಾಗಿದೆ. ಆದರೆ, ಹು-ಧಾ ಮಹಾನಗರ ಪಾಲಿಕೆಯ ನೆಹರು ಮೈದಾನಕ್ಕೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆ ನಿರ್ಲಕ್ಷ್ಯ ತೋರುತ್ತಿದೆ..

neharu-stadium-problem-in-hubballi
ಅವ್ಯವಸ್ಥೆಯ ಆಗರವಾದ ನೆಹರು ಮೈದಾನ
author img

By

Published : Mar 30, 2022, 5:21 PM IST

Updated : Mar 30, 2022, 6:44 PM IST

ಹುಬ್ಬಳ್ಳಿ : ನೆಹರೂ ಮೈದಾನ ಅವ್ಯವಸ್ಥೆಯಿಂದ ತಲೆ ತಗ್ಗಿಸುವಂತಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಮೈದಾನಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಬೇಕೆಂದು ನೀಲನಕ್ಷೆ ತಯಾರಿಸಲಾಗಿದೆ. ವಾಣಿಜ್ಯನಗರಿ ಖ್ಯಾತಿಗೆ ಕಿರೀಟ ಇಟ್ಟಂತೆ ಈ ಯೋಜನೆ ತಲೆ ಎತ್ತಲಿದೆ. ಆದರೆ, ಈ ಕಾಮಗಾರಿ ಮಾತ್ರ ಚುರುಕುಗೊಂಡಿಲ್ಲ.

ಅವ್ಯವಸ್ಥೆಯ ಆಗರವಾದ ನೆಹರು ಮೈದಾನ..

ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಸ್ಮಾರ್ಟ್ ಮಾಡಲು ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆ ತಕ್ಕಮಟ್ಟಿಗೆ ಇಲ್ಲಿನ ಜನರಿಗೆ ಉಪಯೋಗವಾಗಿದೆ. ಆದರೆ, ಹು-ಧಾ ಮಹಾನಗರ ಪಾಲಿಕೆಯ ನೆಹರು ಮೈದಾನಕ್ಕೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆ ನಿರ್ಲಕ್ಷ್ಯ ತೋರುತ್ತಿದೆ. ಹುಬ್ಬಳ್ಳಿ ಆಟಗಾರರ ಹಾಗೂ ಸಾರ್ವಜನಿಕರ ಬಹುನಿರೀಕ್ಷಿತ ನೆಹರು ಮೈದಾನದ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾಗಿ ಸುಮಾರು ದಿನಗಳೇ ಕಳೆದರೂ ಈವರೆಗೂ ಕಾಮಗಾರಿ ವೇಗ ಪಡೆದಿಲ್ಲ. ಹೀಗಾಗಿ, ಮೈದಾನ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.

ಸುಮಾರು 21.44 ಕೋಟಿ ವೆಚ್ಚದಲ್ಲಿ ನೆಹರು ಮೈದಾನವನ್ನು ಸ್ಮಾರ್ಟ್ ಮಾಡಿ ಸಿಂಥೆಟಿಕ್ ಗ್ರೌಂಡ್ ಆಗಿ ಮಾರ್ಪಡಿಸುವ ಕುರಿತು ಚಿಂತನೆ ನಡೆಸಲಾಗಿತ್ತು. ಮತ್ತೆ ಐದು ಕೋಟಿ ಹೆಚ್ಚುವರಿ ಹಣ ಬೇಕಿರುವ ಹಿನ್ನೆಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮಾಡುವ ನಿರ್ಧಾರವನ್ನು ಕೈಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ಆಗಬೇಕಿದ್ದ ನೆಹರು ಮೈದಾನ ಇಷ್ಟು ದಿನಗಳಾದರೂ ಸ್ಮಾರ್ಟ್ ಆಗಿಲ್ಲ. ಸುಮಾರು ದಿನಗಳಿಂದ ಕನಸು ಕಟ್ಟಿಕೊಂಡಿದ್ದ ಕ್ರೀಡಾಪಟುಗಳಿಗೆ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಓದಿ: ಪರಿಷತ್ ಶೂನ್ಯವೇಳೆಯಲ್ಲಿ ಕೈ-ಕಮಲ ಸದಸ್ಯರ ನಡುವೆ ಮಾತಿನ ಚಕಮಕಿ

Last Updated : Mar 30, 2022, 6:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.