ಹುಬ್ಬಳ್ಳಿ: ಹುಬ್ಬಳ್ಳಿ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಮತ್ತು ಕರ್ನಾಟಕ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಜಂಟಿ ಸಂಯೋಗದೊಂದಿಗೆ ಇದೇ ತಿಂಗಳ 12, 13 ರಂದು ಎರಡು ದಿನಗಳಕಾಲ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮಾರಾಟ ಮೇಳ ಹಾಗೂ ಡಿಜಿ ಫೋಟೋ ಎಕ್ಸ್ಪೋ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಫೋಟೋ ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ಕಿರಣ ಬಾಕಳೆ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಗೋಕುಲ ರಸ್ತೆಯಲ್ಲಿನ ವಾಸವಿ ಮಹಲ್ನಲ್ಲಿ 2 ದಿನಗಳ ಕಾಲ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ, ಹಾಗೂ ಮಾರಾಟ, ಎಕ್ಸ್ಪೋವನ್ನು ಆಯೋಜನೆ ಮಾಡಲಾಗಿದೆ ತಿಳಿಸಿದ್ದಾರೆ.
ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ ವಿವಿಧ ಕಂಪನಿಗಳಿಂದ 80ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ವಿವಿಧ ರೀತಿಯ ಕ್ಯಾಮೆರಾಗಳು ಅತ್ಯುತ್ತಮ ಛಾಯಾಚಿತ್ರ ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ಫೋಟೋಶಾಪ್ ಕುರಿತು ಕ್ಯಾಮರಾ ಸರ್ವಿಸ್ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ ಎಂದರು. ಇದೇ ವೇಳೆ, ಛಾಯಾಗ್ರಾಹಕರ ಹಾಗೂ ವಿವಿಧ ಕಂಪನಿ ರೀಟೇಲ್ ಮಾಲೀಕರು ಭಾಗಿಯಾಗಿದ್ದರು.