ETV Bharat / state

ಕೊಲೆ ಆರೋಪಿಗೂ ಕೊರೊನಾ ದೃಢ: 15  ಪೊಲೀಸ್​​​​ ಸಿಬ್ಬಂದಿಗೆ ಕ್ವಾರಂಟೈನ್! - ಇನ್ಸ್​ಪೆಕ್ಟರ್ ಸೇರಿ 15 ಜನರಿಗೆ ಕ್ವಾರಂಟೈನ್

ಬಂಡಿವಾಡ ಕ್ರಾಸ್ ಬಳಿ ಪತ್ನಿ ಶಾರವ್ವ ಎಂಬಾಕೆಯನ್ನು ಕೊಲೆ ಮಾಡಿದ್ದ ಆರೋಪಿಯನ್ನ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ಆರೋಪಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಈತನನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದ್ದ ಹಾಗೂ ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನ ಪೊಲೀಸರನ್ನು ಕ್ವಾರೆಂಟೈನ್​ನಲ್ಲಿ ಇಡಲಾಗಿದೆ.

Hubli
ಕೊಲೆ
author img

By

Published : Jul 2, 2020, 12:09 PM IST

ಹುಬ್ಬಳ್ಳಿ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಪತಿಯಿಂದಲೇ ಕೊಲೆಯಾಗಿರುವ ಶಾರವ್ವ

ಬಂಡಿವಾಡ ಕ್ರಾಸ್ ಬಳಿ ಪತ್ನಿ ಶಾರವ್ವ ಎಂಬಾಕೆಯನ್ನು ಕೊಲೆ ಮಾಡಿದ್ದ. ಈ‌ ಕೊಲೆ ಪ್ರಕರಣದ ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದ್ದ 15 ಪೊಲೀಸರನ್ನು ಕ್ವಾರೆಂಟೈನ್​ನಲ್ಲಿ ಇರಿಸಲಾಗಿದೆ.

ಗ್ರಾಮೀಣ ಠಾಣೆಯ ಇನ್ಸ್​ಪೆಕ್ಟರ್ ರಮೇಶ ಗೋಕಾಕ್ ಸೇರಿ 15 ಜನ ಪೊಲೀಸ್ ಸಿಬ್ಬಂದಿ ಕ್ವಾರಂಟೈನ್​ನಲ್ಲಿದ್ದಾರೆ. ಒಂದೇ ವಾರದಲ್ಲಿ ಮಿನಿ ವಿಧಾನಸೌಧದಲ್ಲಿ ಎರಡು ಕೊರೊನಾ ಪ್ರಕರಣ ದೃಢಪಟ್ಟಿವೆ.‌ ಇದೇ ಕಟ್ಟಡದ ತಾಲೂಕು ಪಂಚಾಯಿತಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲೇ ಈಗ ಕೊಲೆ ಆರೋಪಿಯನ್ನು ಬಂಧಿಸಿ ತಂದು ವಿಚಾರಣೆ ನಡೆಸಿದ ಗ್ರಾಮೀಣ ಠಾಣೆ ಪೊಲೀಸರಿಗೂ ಆತಂಕ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.