ಧಾರವಾಡ: 65ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಗರದಲ್ಲಿ ಏರ್ಪಡಿಸಿದ್ದ ಛಾಯಾಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನವನ್ನು ಶಾಸಕಿ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯೆ ಸೌಮ್ಯಾ ರೆಡ್ಡಿ ಉದ್ಘಾಟಿಸಿದರು.
ಇಂದು ಅರಣ್ಯ ಇಲಾಖೆ ಸೃಜನಾ ರಂಗಮಂದಿರದಲ್ಲಿ ಛಾಯಾಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ಇದನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ, ಜಗತ್ತಿನಾದ್ಯಂತ ಉದ್ಭವಿಸಿರುವ ನೀರು, ಶಬ್ದ, ಪರಿಸರ ಮಾಲಿನ್ಯಗಳ ಸಮಸ್ಯೆಗಳಿಗೆ ಮನುಷ್ಯನ ಅಪರಿಮಿತ ದುರಾಶೆ ಕಾರಣವಾಗಿದೆ. ವನ್ಯಜೀವಿ, ಪ್ರಾಣಿಗಳ ಹಕ್ಕುಗಳನ್ನು ನಾವು ಪರಿಗಣಿಸದೆ ಮುಂದೆ ಸಾಗುತ್ತಿರುವುದು ಪ್ರಾಕೃತಿಕ ಅಸಮತೋಲನ ಉಂಟು ಮಾಡಿದೆ. ಈ ಬಗ್ಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿಕೊಂಡರು.
ಬಳಿಕ ವನ್ಯ ಜೀವಿ ಸಪ್ತಾಹದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಛಾಯಾಚಿತ್ರಗಳನ್ನು ವೀಕ್ಷಿಸಿದರು. ಈ ವೇಳೆ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಆರ್ ಚವ್ಹಾಣ,ಗುಂಗರಗಟ್ಟಿ ಅರಣ್ಯ ಅಕಾಡೆಮಿಯ ಅಧಿಕಾರಿ ದೀಪ ಜೆ. ಕಂಟ್ರಾಕ್ಟರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್, ಇ.ಎಸ್.ಡಿಸೋಜ , ಪಿ.ವಿ.ಹಿರೇಮಠ, ಓಟಿಲಿ, ಅಪೂರ್ವ, ಆರ್.ಜಿ. ತಿಮ್ಮಾಪುರ ಮೊದಲಾದವರೂ ಉಪಸ್ಥಿತರಿದ್ದರು.