ETV Bharat / state

ಅನುದಾನ ಬಾಕಿ ಇದ್ದುದರಿಂದ ಬಂದಿದ್ದೆ, ಸಿಎಂ ಭೇಟಿ ಆಗಲೇ ಇಲ್ಲ: ಶಾಸಕಿ ಶಿವಳ್ಳಿ ಅಸಮಾಧಾನ - ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ

ಗಂಟೆಗಳ ಕಾಲ ಸಿಎಂ ಮನೆಯಲ್ಲೇ ಕುಳಿತರೂ ಸಹ ಅವರು ಭೇಟಿ ಆಗಲೇ ಇಲ್ಲ ಎಂದು ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MLA Kusuma Shivalli went to meet CM
ಸಿಎಂ ಭೇಟಿ ಮಾಡಲು ಹೋಗಿದ್ದ ಶಾಸಕಿ ಕುಸುಮ ಶಿವಳ್ಳಿ
author img

By

Published : Mar 15, 2023, 1:14 PM IST

Updated : Mar 15, 2023, 1:44 PM IST

ಶಾಸಕಿ ಕುಸುಮಾವತಿ ಶಿವಳ್ಳಿ

ಹುಬ್ಬಳ್ಳಿ: ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತು ಮಾತನಾಡಲು ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಬಂದಿದ್ದರು. ಸತತ ಒಂದೂವರೆ ಗಂಟೆಗಳ ಕಾಲ ಕಳೆದರು ಕೂಡ ಬೊಮ್ಮಾಯಿ ಮಾತ್ರ ಭೇಟಿ ಮಾಡದೆ ತೆರಳಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇಂದು ಬೆಳಗ್ಗೆ ಹುಬ್ಬಳ್ಳಿಯ ಆದರ್ಶ ನಗರದಲ್ಲಿನ ಸಿಎಂ ನಿವಾಸಕ್ಕೆ ಆಗಮಸಿದ್ದ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ತಮ್ಮ ಕ್ಷೇತ್ರದ ಅಭಿವೃದ್ಧಿಯ ವಿಚಾರಕ್ಕೆ ಮಾತನಾಡಲು ಸಿಎಂ ಭೇಟಿ ಮಾಡಲು ಬಂದಿದ್ದರಂತೆ. ಆದರೆ ಸಿಎಂ ಬೊಮ್ಮಾಯಿ ಅವರು ಮನೆಗೆ ಬಂದರೂ ಕೂಡ ಭೇಟಿಯಾಗದೆ ಬೆಳಗಾವಿ ಕಡೆ ಪ್ರಯಾಣ ಬೆಳೆಸಿದ್ದಾರೆ. ಸತತ ಒಂದೂವರೆ ಗಂಟೆಗಳ ಕಾಲ ಕಾದು ಕುಳಿತರೂ ಸಹ ಅವರು ಭೇಟಿ ಅಗಲಿಲ್ಲ ಎಂದು ಕಾಂಗ್ರೆಸ್ ಶಾಸಕಿ ಶಿವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕಿ ಕುಸುಮಾವತಿ ಶಿವಳ್ಳಿ ಸ್ಪಷ್ಟನೆ: ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಬಂದಿದ್ದೆ. ಇದಕ್ಕೆ ಯಾವುದೇ ಬೇರೆ ಅರ್ಥ ಕಲ್ಪಿಸುವುದು ಬೇಡ. ಆದರೆ ಸಿಎಂ ಬೊಮ್ಮಾಯಿ ಅವರು ನನ್ನನ್ನು ಭೇಟಿ ಆಗಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಇದೇ ವೇಳೆ ಕುಂದಗೋಳ ಟಿಕೆಟ್ ಆಕಾಂಕ್ಷಿಗಳಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ಟಾಂಗ್ ಕೊಟ್ಟರು.

ಕುಂದಗೋಳ ಕ್ಯಾಂಡಿಡೇಟ್ ನಾನೇ. ಯಾರು ಏನೇ ಮಾಡಿದ್ರು ಟಿಕೆಟ್ ತಪ್ಪಿಸಲು ಆಗೋದಿಲ್ಲ. ಕುಂದಗೋಳ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಕುಂದಗೋಳ ಕಾಂಗ್ರೆಸ್ ಭಿನ್ನಮತವನ್ನು ಸಮರ್ಥಿಸಿಕೊಂಡ ಅವರು, ಭಿನ್ನಮತದಿಂದಾಗಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ರದ್ದಾಗಿಲ್ಲ. ಕಲಘಟಗಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಇಂದೇ ಆಯೋಜನೆ ಮಾಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಮಯದ ಅಭಾವ ಇದ್ದ ಕಾರಣ ಪ್ರಜಾಧ್ವನಿ ಕಾರ್ಯಕ್ರಮ ರದ್ದಾಗಿದೆ ಅಷ್ಟೇ ಎಂದು ಅವರು ಸ್ಪಷ್ಟನೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಾಧ್ಯಮಗಳ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಅಸಮಾಧಾನ: ಮಾಜಿ ಸಚಿವ ಆರ್. ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿಯ ಹಿಂದೆ ಬಿಜೆಪಿಯ ಯಾವುದೇ ಪಾತ್ರವಿಲ್ಲ. ಬಿಜೆಪಿ ಪ್ರೇರಿತ ದಾಳಿ ಅನ್ನೋದು ಸುಳ್ಳು. ತನಿಖಾ ಸಂಸ್ಥೆಗಳಿಗೆ ಎಷ್ಟು ಮುಕ್ತ ವಾತಾವರಣ ನೀಡಿದ್ದೇವೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ರೂ ಅವರನ್ನು ಶಿಕ್ಷಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಶಂಕರ್ ಪ್ರಕರಣದಲ್ಲಿಯೂ ತನಿಖಾ ಸಂಸ್ಥೆಗಳು ತಮ್ಮದೇ ಆದ ಕ್ರಮ ಕೈಗೊಳ್ಳುತ್ತವೆ ಎಂದರು.

ಇದೇ ವೇಳೆ ಸಿ ಟಿ ರವಿ ವರ್ಸಸ್ ವಿಜಯೇಂದ್ರ ಮಾತಿನ ಚಕಮಕಿ ವಿಚಾರದ ಪ್ರಶ್ನೆ ಕೇಳಿದ ಮಾಧ್ಯಮದವರ ವಿರುದ್ಧ ಸಿಎಂ ಅಸಮಾಧಾನಗೊಂಡರು. ಎಲ್ಲವೂ ಮಾಧ್ಯಮಗಳ ಸೃಷ್ಟಿ, ಸಚಿವ ಸೋಮಣ್ಣ ದೆಹಲಿಗೆ ಹೋಗ್ತಿರೋ ವಿಚಾರ ನನಗೆ ಗೊತ್ತಿದೆ ಎಂದು ಸಿಟ್ಟಿನಿಂದಲೇ ಹೇಳಿ ಬೊಮ್ಮಾಯಿ ಸ್ಥಳದಿಂದ ಹೊರಟು ಹೋದರು.

ಇದನ್ನೂ ಓದಿ: ಜೈನ ಧರ್ಮ ಪಾಲಿಸಿದ್ದರೆ ಜಗತ್ತಿನಲ್ಲಿ ಹಿಂಸೆಯೇ ಇರುತ್ತಿರಲಿಲ್ಲ: ಸಿಎಂ ಬೊಮ್ಮಾಯಿ

Last Updated : Mar 15, 2023, 1:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.