ETV Bharat / state

ಗಲಭೆಕೋರರ ಸನ್ಮಾನ ವಿಚಾರ: ಜಮೀರ್​ ವಿರುದ್ಧ ಕ್ರಮಕ್ಕೆ ಶಾಸಕ ಬೆಲ್ಲದ್​ ಆಗ್ರಹ - ಜಮೀರ್​ ವಿರುದ್ದ ಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ ಆಗ್ರಹ

ಪುಂಡರಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿದ ಜಮೀರ್ ಅಹ್ಮದ್​  ವಿರುದ್ದ ಸಿಎಂ ಮತ್ತು ಗೃಹ ಸಚಿವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅರವಿಂದ್​ ಬೆಲ್ಲದ ಒತ್ತಾಯಿಸಿದ್ದಾರೆ.

ML A Aravind Bellad demand
ಜಮೀರ್ ಅಹ್ಮದ್​ ವಿರುದ್ದ ಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ ಆಗ್ರಹ
author img

By

Published : Jun 6, 2020, 11:41 PM IST

ಧಾರವಾಡ: ಪಾದರಾಯನಪುರ ಗಲಭೆಕೋರರಿಗೆ ಸನ್ಮಾನ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್​ ಅಹ್ಮದ ವಿರುದ್ಧ ಕ್ರಮಕ್ಕೆ ಶಾಸಕ ಅರವಿಂದ್​ ಬೆಲ್ಲದ ಆಗ್ರಹಿಸಿದ್ದಾರೆ.

ಜಮೀರ್ ಅಹ್ಮದ್​ ವಿರುದ್ದ ಕ್ರಮಕ್ಕೆ ಶಾಸಕ ಅರವಿಂದ್​ ಬೆಲ್ಲದ ಆಗ್ರಹ

ಧಾರವಾಡದ ಹೊಸ ಸರ್ಕಿಟ್ ಹೌಸ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಮೀನಿನ ಮೇಲೆ ಬಂದವರಿಗೆ ಜಮೀರ್ ಸನ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಸಹ ಅಸಹ್ಯ ಆಗುವಂತೆ ನಡೆದುಕೊಂಡಿದ್ದಾರೆ. ಆಶಾ ಕಾರ್ಯಕರ್ತರು ಮತ್ತು ಪೊಲೀಸರಿಗೆ ಹೊಡೆದವರಿಗೆ ಸನ್ಮಾನ ಮಾಡಿದ್ದು, ಇದೊಂದು ರೀತಿ ವೋಟ್ ಬ್ಯಾಂಕ್ ರಾಜಕಾರಣ. ಪುಂಡರಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿದ ಜಮೀರ್ ಅಹ್ಮದ್​ ವಿರುದ್ದ ಸಿಎಂ ಮತ್ತು ಗೃಹ ಸಚಿವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬಿಆರ್​ಟಿಎಸ್​ ರಸ್ತೆ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಕೂಡ ಪ್ರಶ್ನಿಸಲಾಗಿದೆ. ಕಾಮಗಾರಿ ಸರಿಯಾಗಿ ನಿರ್ವಹಣೆ ಮಾಡದೇ ಇರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್​ ಹಾಕಬೇಕು. ಈ‌ ಬಗ್ಗೆ ಸಿಎಂ ಹಾಗೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಸಚಿವರಿಗೆ ಗುತ್ತಿಗೆದಾರರ ಬಿಲ್ ತಡೆ ಹಿಡಿಯುವಂತೆ ಪತ್ರ ಬರೆಯಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.