ETV Bharat / state

ಹುಬ್ಬಳ್ಳಿ: ಮನೆಯಲ್ಲಿ ಕೂಡಿ ಹಾಕಿ ಯುವಕನಿಗೆ ಹಲ್ಲೆ - ಹುಬ್ಬಳ್ಳಿ

ಪುಡಿರೌಡಿಗಳು ಯುವಕನನ್ನು ಮನೆಯಲ್ಲಿ ‌ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

miscreants attacked  young man  trivial reason  ಕ್ಷುಲಕ‌ ಕಾರಣ  ಯುವಕನ ಮೇಲೆ ಹಲ್ಲೆ
ಕ್ಷುಲಕ‌ ಕಾರಣಕ್ಕೆ ಯುವಕನ ಮೇಲೆ ಹಲ್ಲೆ
author img

By ETV Bharat Karnataka Team

Published : Jan 17, 2024, 9:18 AM IST

ಹುಬ್ಬಳ್ಳಿ: ಯುವಕನನ್ನು ಮನೆಯೊಂದರಲ್ಲಿ ಕೂಡಿ ಹಾಕಿದ ಪುಡಿರೌಡಿಗಳು ಮನಬಂದಂತೆ ಥಳಿಸಿರುವ ಘಟನೆ ವಿದ್ಯಾನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ವಿವಿನ ರಿಚರ್ಡ್ ಎಂದು ಗುರುತಿಸಲಾಗಿದೆ. ವಿಜಯ ಬಿಜವಾಡ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಜನವರಿ 15ರ ಮಧ್ಯರಾತ್ರಿ ಎರಡು ಗಂಟೆಗೆ ಆರೋಪಿಗಳು ಊಟಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಹೋಟೆಲ್ ಹೊರಗಡೆ ರಿಚರ್ಡ್‌ ಜೊತೆಗೆ ಸಿಗರೇಟ್ ವಿಚಾರವಾಗಿ ಜಗಳ ಆರಂಭಿಸಿದ್ದಾರೆ. ಈ ಜಗಳ ವಿಕೋಪಕ್ಕೆ ತಿರುಗಿ ರಿಚರ್ಡ್ ಮೇಲೆ ಹಲ್ಲೆ ನಡೆಸಿ, ತಮ್ಮ ಕಾರ್‌ನಲ್ಲೇ ಕರೆದೊಯ್ದಿದ್ದಾರೆ. ಬಳಿಕ ಮನೆಯೊಂದರಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ರಿಚರ್ಡ್​ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ರಿಚರ್ಡ್‌ ತಲೆ, ಮುಖ, ಬೆನ್ನು ಹಾಗು ಹೊಟ್ಟೆಗೆ ಗಂಭೀರ ಗಾಯಗಳಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಾಗಿ ಎರಡು ದಿನಗಳಾದರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂದು ರಿಚರ್ಡ್‌​ ಮತ್ತು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪೈಲಟ್​ ಮೇಲೆ ಹಲ್ಲೆ ಪ್ರಕರಣ: ಪ್ರಯಾಣಿಕ ಸಾಹಿಲ್​ ಕಟಾರಿಯಾಗೆ ಜಾಮೀನು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.