ETV Bharat / state

ಜ. 31ಕ್ಕೆ 'ಲವ್ ಮಾಕ್‍ಟೆಲ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ - ಲವ್ ಮಾಕ್‍ಟೆಲ್ ಸಿನಿಮಾ

ನಟ ಕೃಷ್ಣ ಅಭಿನಯಿಸಿ, ನಿರ್ದೇಶನ ಮಾಡಿರುವ ಲವ್ ಮಾಕ್​ಟೆಲ್ ಸಿನಿಮಾ ರಾಜ್ಯಾದ್ಯಂತ  ಇದೇ 31ರಂದು ಬಿಡುಗಡೆಗೊಳ್ಳಲಿದೆ.

Love mocktail movie will release on Jan.31
'ಲವ್ ಮಾಕ್‍ಟೆಲ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ
author img

By

Published : Jan 22, 2020, 8:15 PM IST

ಹುಬ್ಬಳ್ಳಿ: ಮದರಂಗಿ, ಚಾರ್ಲಿ, ರುದ್ರತಾಂಡವ, ಹುಚ್ಚ-2 ಹೀಗೆ ವಿಭಿನ್ನ ಚಿತ್ರಗಳಲ್ಲಿ ನಾಯಕ ಕೃಷ್ಣ ಅಭಿನಯಿಸಿದ್ದು, ಈಗ ಅವರೇ ನಿರ್ಮಾಣ ಮಾಡಿರುವ ಚಿತ್ರ ಲವ್ ಮಾಕ್​ಟೆಲ್ ಸಿನಿಮಾ ರಾಜ್ಯಾದ್ಯಂತ ಇದೇ 31ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕಿ ಮಿಲನ್ ನಾಗರಾಜ್​ ಹೇಳಿದರು.

'ಲವ್ ಮಾಕ್‍ಟೆಲ್' ಚಿತ್ರತಂಡದ ಪತ್ರಿಕಾಗೋಷ್ಠಿ

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದರಂಗಿ ಚಿತ್ರದ ಡಾರ್ಲಿಂಗ್, ಡಾರ್ಲಿಂಗ್ ಹಾಡಿನ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈಗ ಕೃಷ್ಣ ಲವ್ ಮಾಕ್‍ಟೆಲ್ ಎನ್ನುವ ಚಿತ್ರಕ್ಕೆ ನಾಯಕನಾಗಿ ಅಭಿನಯಿಸುವುದರ ಜೊತೆಗೆ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದಾರೆ. ನಾಯಕನ ಜೀವನದ ಹಲವಾರು ವಿಭಿನ್ನವಾದ ರೀತಿಯ ಸನ್ನಿವೇಶ ಹಾಗೂ ಲವ್ ಸ್ಟೋರಿಗಳನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು, ಕೊನೆಗೆ ಯಾವ ಪ್ರೀತಿ ನಾಯಕನಿಗೆ ಉಳಿಯುತ್ತದೆ ಎಂಬ ಕಥಾ ಹಂದರದಲ್ಲಿ ಚಿತ್ರ ಮೂಡಿಬಂದಿದೆ.

ಈ ಚಿತ್ರಕ್ಕೆ ರಘು ದೀಕ್ಷಿತ್ ರಾಗ ಸಂಯೋಜನೆ ಮಾಡಿದ್ದು, ಈಗಾಗಲೇ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಅತಿ ಹೆಚ್ಚು ವೀಕ್ಷಣೆ ಗಳಿಸಿದೆ. ಇದೇ ತಿಂಗಳ 31ಕ್ಕೆ ಲವ್ ಮಾಕ್‍ಟೆಲ್ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದರು.

ಬಳಿಕ ನಟ ಕೃಷ್ಣ ಮಾತನಾಡಿ, ಈ ಹಿಂದೆ ಮಾಡಿರುವ ಚಿತ್ರಕ್ಕಿಂತ ಈ ಚಿತ್ರ ವಿಭಿನ್ನವಾಗಿದೆ. ಈ ಚಿತ್ರ ಮನೋರಂಜನೆ ನೀಡುತ್ತದೆ. ಎಲ್ಲರ ಜೀವನದಲ್ಲಿ ಬರುವಂತಹ ಸನ್ನಿವೇಶಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡ್ರು.

ಚಿತ್ರಕ್ಕೆ ಕೃಷ್ಣ ಅವರು ಸಂಭಾಷಣೆ, ನಿರ್ದೇಶನ ಮಾಡಿದ್ದು, ಛಾಯಾಗ್ರಹಣ ಕ್ರೇಜಿ ಮೈಂಟ್ಸ್​ ಮಾಡಿದ್ದಾರೆ. ಕೃಷ್ಣ, ಮಿಲನ ನಾಗರಾಜ್, ಅಮೃತ ಅಯ್ಯಂಗಾರ್, ರಚನಾ ಸೇರಿದಂತೆ ದೊಡ್ಡ ತಾರಾಗಣವೇ ಸಿನಿಮಾದಲ್ಲಿದ್ದು, ಕಿಚ್ಚ ಸುದೀಪ್ ಅವರು ಬ್ಯಾಂಗ್ರೌಂಡ್​ ಧ್ವನಿ ನೀಡಿರುವುದು ಸಿನಿಮಾದ ಮತ್ತೊಂದು ವಿಶೇಷವಾಗಿದೆ.

Intro:HubliBody:ಜ. 31ಕ್ಕೆ ಲವ್ ಮಾಕ್‍ಟೆಲ್ ರಾಜ್ಯಾದ್ಯಂತ ಬಿಡುಗಡೆ

ಹುಬ್ಬಳ್ಳಿ:ಮದರಂಗಿ, ಚಾರ್ಲಿ, ರುದ್ರತಾಂಡವ, ಹುಚ್ಚ-2 ಹೀಗೆ ವಿಭಿನ್ನ ಜಾನರ್‍ನ ಚಿತ್ರಗಳ ನಾಯಕ ಡಾರ್ಲಿಂಗ್ ಅಭಿನಯಿಸಿ ನಿರ್ಮಾಣ ಮಾಡಿರುವ ಚಿತ್ರ ಲವ್ ಮಾಕ್ ಟೆಲ್ ಚಿತ್ರ ರಾಜ್ಯಾದ್ಯಂತ ಇದೇ 31ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕಿ ಮಿಲನ್ ನಾಗರಾಜ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮದರಂಗಿ ಚಿತ್ರದ “ಡಾರ್ಲಿಂಗ್, ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್” ಹಾಡಿನ ಮೂಲಕ ಜನಪ್ರಿಯತೆ ಪಡೆದುಕೊಂಡು. ನಂತರ ಮುಂದೆ ಡಾರ್ಲಿಂಗ್ ಕೃಷ್ಣ ಎಂದೇ ಖ್ಯಾತರಾಗಿದ್ದಾರೆ. ಈಗಾಗಲೇ ಪುನೀತ್ ರಾಜಕುಮಾರ್ ಜೊತೆಗೆ ದೊಡ್ಡಮನೆ ಹುಡುಗ ಚಿತ್ರದಲ್ಲಿ ಸಹ ಅಭಿಯಿಸಿರುವ ಡಾರ್ಲಿಂಗ್ ಕೃಷ್ಣ “ಲವ್ ಮಾಕ್‍ಟೆಲ್” ಎನ್ನುವ ಚಿತ್ರಕ್ಕೆ ನಾಯಕನಾಗಿ ಅಭಿನಯಿಸುವುದರ ಜೊತೆಗೆ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದಾರೆ ಎಂದರು.ನಾಯಕನ ಜೀವನದ ಹಲವಾರು ವಿಭಿನ್ನವಾದ ರೀತಿಯ ಸನ್ನಿವೇಶ ಹಾಗೂ ಲವ್ ಸ್ಟೋರಿಗಳನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು ಕೊನೆಗೆ ಯಾವ ಪ್ರೀತಿ ನಾಯಕನಿಗೆ ಉಳಿಯುತ್ತದೆ ಎಂಬುವ ಕಥಾ ಹಂದರದಲ್ಲಿ ಚಿತ್ರ ಮೂಡಿಬಂದಿದೆ ಎಂದು ಅವರು ಹೇಳಿದರು.ಈ ಚಿತ್ರಕ್ಕೆ ರಘು ದೀಕ್ಷಿತ್ ಅವರ ರಾಗ ಸಂಯೋಜನೆಯು ಹಾಡುಗಳು ಈ ಚಿತ್ರದಲ್ಲಿದ್ದು,ಒಟ್ಟು ಐದು ಹಾಡುಗಳು ಚಿತ್ರದಲ್ಲಿದೆ ಎಂದು ಅವರು ಹೇಳಿದರು.
ಈಗಾಗಲೇ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಅತಿ ಹೆಚ್ಚು ವೀಕ್ಷಣೆ ಗಳಿಸಿದೆ. ಇದೇ ತಿಂಗಳ 31ಕ್ಕೆ ಲವ್ ಮಾಕ್‍ಟೆಲ್ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ.
ಚಿತ್ರದ ಕಥೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನವನ್ನು          ಕೃಷ್ಣ ಅವರು ಮಾಡಿದ್ದು,ಛಾಯಾಗ್ರಹಣ          ಕ್ರೇಜಿ ಮೈಂಡ್ಸ್ ಮಾಡಿದ್ದಾರೆ ಎಂದರು.
ಚಿತ್ರದಲ್ಲಿ ಕೃಷ್ಣ, ಮಿಲನ ನಾಗರಾಜ್, ಅಮೃತ ಅಯ್ಯಂಗಾರ್, ರಚನಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿ ಇದೆ.
ಚಿತ್ರವು ಮೈಸೂರು, ಬೆಂಗಳೂರು, ಉಡುಪಿ, ಮಂಗಳೂರು, ಕಳಸ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.ಇನ್ನೊಂದು ವಿಶೇಷತೆ ಕಿಚ್ಚಾ ಸುದೀಪ್ ಅವರು ಚಿತ್ರಕ್ಕೆ ಬ್ಯಾಕಗ ವಾಯ್ಸ್ ನೀಡಿದ್ದಾರೆ, ಮತ್ತು ಸಿನಿಮಾ ನೋಡಿ ಶುಭಾಶಯ ತಿಳಿಸಿದ್ದಾರೆ ಎಂದರು..
ನಂತರ ನಟ ಕೃಷ್ಣ ಮಾತನಾಡಿ ಈ ಹಿಂದೆ ಮಾಡಿರುವ ಚಿತ್ರಕ್ಕಿಂತ ಈ ಚಿತ್ರ ವಿಭಿನ್ನವಾಗಿದೆ.ಲವ್ ಕಮ್ ಎಂಟರ್ಟೈನ್ಮೆಂಟ್ ಇದೆ.ಎಲ್ಲರ ಜೀವನದಲ್ಲಿ ಬರುವಂತಹ ಸನ್ನಿವೇಶಗಳನ್ನ ಆದರಿಸಿ ಸಿನಿಮಾ ಮಾಡಲಾಗಿದೆ, ಇದೇ ತಿಂಗಳ 31 ಕ್ಕೆ ಬಿಡುಗಡೆಯಾಗುತ್ತಿದ್ದು ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಸದ್ಗುರು ಸಿದ್ದರೂಡರ ಭಾವಚಿತ್ರ ನೀಡಿ ಸನ್ಮಾನ ಮಾಡಿದ್ರು....

ಬೈಟ್:- ಮಿಲನ್ ಮೇಗರಾಜ್ ( ನಿರ್ಮಾಪಕಿ)

ಬೈಟ್:- ಕೃಷ್ಣ ( ನಟ)Conclusion:Yallappa kundagl
ETV Bharat Logo

Copyright © 2025 Ushodaya Enterprises Pvt. Ltd., All Rights Reserved.