ಹುಬ್ಬಳ್ಳಿ : ಕೊರೊನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಸಾಕಷ್ಟು ಜನರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬಣ್ಣ ಹಚ್ಚಿ ಜನರನ್ನು ರಂಜಿಸುವ ಕಲಾವಿದರ ಬದುಕಿನ ಮೇಲೂ ಲಾಕ್‌ಡೌನ್ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಕಲಾವಿದರು ಒಂದೊತ್ತಿನ ಊಟಕ್ಕೂ ಪರಾಡುವ ಸ್ಥಿತಿ ನಿರ್ಮಾಣವಾಗಿದೆ.
ನಾಟಕ ಕಂಪನಿಗಳಲ್ಲಿ ಕೆಲಸ ಮಾಡುವ ನೂರಾರು ಕಲಾವಿದರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಹಾಯಕ್ಕೆ ಮೊರೆ ಹೋಗುತ್ತಿದ್ದಾರೆ. ಸರ್ಕಾರದಿಂದ ದೊರಕುವ ಮಾಸಾಶನ ಮೂರು ತಿಂಗಳಿಂದ ಬಂದಿಲ್ಲ. ಈಗ ನೋಡಿದರೆ ಲಾಕ್‌ಡೌನ ಜಾರಿಯಲ್ಲಿದೆ. ದುಡಿಮೆ ಇಲ್ಲದೆ ಬದುಕು ಸಾಗಿಸುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಜಾತ್ರೆ ನಡೆಯುವ ಊರುಗಳಿಗೆ ಹೋಗಿ ರಂಗ ಮಂದಿರ ರಚಿಸಿ ನಾಟಕ ಪ್ರದರ್ಶನಗೊಂಡು ಹೆಚ್ಚು ಜನ ವೀಕ್ಷಿಸಿದಾಗ ಮಾತ್ರ ನಾಟಕ ಕಂಪನಿಗಳ ಜೀವನ ಸುಗಮ. ಕೊರೊನಾ ಭೀತಿಯಿಂದ ಎಲ್ಲಾ ಜಾತ್ರೆಗಳು ರದ್ದಾಗಿವೆ. ಎಷ್ಟೋ ಕಲಾವಿದರೂ ಬೀದಿಗೆ ಬರುವಂತಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಸಾಶನ 2000 ರೂಪಾಯಿಗೆ ಹೆಚ್ಚಳ ಮಾಡುವುದಾಗಿ ಹೇಳಿತ್ತು. ಅದು ಕೂಡ ಈವರೆಗೂ ಸಾಕಾರಗೊಂಡಿಲ್ಲ ಎಂದು ಕಲಾವಿದರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಕಲಾವಿದರಿಗೆ ಯಾರಾದರೂ ನೆರವು ನೀಡಲು ಇಚ್ಚಿಸಿದರೆ, ಈ ಸಂಖ್ಯೆಗೆ ಮೊಬೈಲ್‌ಗೆ ಕರೆ ಮಾಡಬಹುದು - 9380319200