ETV Bharat / state

ಪ್ರತಾಪ್​​ ಸಿಂಹಗೆ ಶಕ್ತಿ ಇದ್ರೆ ಡಿಸಿ ಬದಲಾವಣೆ ಮಾಡಿಕೊಳ್ಳಲಿ : ಡಿ.ಕೆ.‌ ಶಿವಕುಮಾರ್ - KPCC president DK Shivakumar slams

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ‌ ಬದಲಾವಣೆಯಾದ್ರೂ ಮಾಡಲಿ, ಸಿಎಂ ಜೊತೆಗಾದರೂ ಇರಲಿ. ಅದು ಅವರ ಪಕ್ಷದ ವಿಚಾರ. ವಿರೋಧ ಪಕ್ಷದವರನ್ನು ಕರೆದುಕೊಂಡು ಸರ್ಕಾರ ಮಾಡುತ್ತಾರೆ, ಏನು ಮಾಡೋಕಾಗುತ್ತೆ..

KPCC president DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್​​
author img

By

Published : May 31, 2021, 12:06 PM IST

ಧಾರವಾಡ: ಸಂಸದ ಪ್ರತಾಪ್​​ ಸಿಂಹ ಡಿಸಿ ವಿರುದ್ದ ವಾರ್ ನಡೆಸಿದ್ದಾರೆ. ಅವರಿಗೆ ಶಕ್ತಿ ಇದ್ರೆ ಡಿಸಿ ಬದಲಾವಣೆ ಮಾಡಿಕೊಳ್ಳಲಿ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ಕಿತ್ತಾಟ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ​​ಪ್ರತಿಕ್ರಿಯಿಸಿದ್ದಾರೆ.

ಡಿ.ಕೆ.‌ ಶಿವಕುಮಾರ್ ​​ಪ್ರತಿಕ್ರಿಯೆ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಸಚಿವರು ಸೇರಿ ಸಿಎಂ ಹತ್ತಿರ ಮಾತನಾಡಿ ಬದಲಾವಣೆ ಮಾಡಿಕೊಳ್ಳಲಿ. ಇದನ್ನೆಲ್ಲ ನೋಡಿ ಜನ ಉಗೀತಾ ಇದ್ದಾರೆ.

ಡಿಸಿ ಕೆಲಸ ಪ್ರತಾಪ್​​ ಸಿಂಹ ಮಾಡಲು ಆಗಲ್ಲ. ಪ್ರತಾಪ್​​ ಸಿಂಹ ಕೆಲಸ ಡಿಸಿ ಮಾಡಲು ಆಗಲ್ಲ. ಏನೇ ಅನುಷ್ಠಾನ ಇದ್ದರೆ ಡಿಸಿ ಅವರೇ ಮಾಡಬೇಕು ಎಂದರು.

ಸರಿಯೋ ತಪ್ಪೋ ಗೊತ್ತಿಲ್ಲ. ಆದ್ರೆ, ಇವರಿಗೆ ಸಮಸ್ಯೆ ಆದ್ರೆ ಬದಲಿಸಿಕೊಳ್ಳಲಿ. ಐದೈದು ನಿಮಿಷಕ್ಕೆ ಮಂತ್ರಿ ಅಧಿಕಾರಿಗಳನ್ನು ‌ಬದಲಿಸುತ್ತೀರಿ ಅಲ್ವಾ? ನಿಮಗೆ ಆಗದಿದ್ರೆ ಬದಲಿಸಿಕೊಳ್ಳಿ. ನಿಮಗೆ ಬೇಕಾದವರನ್ನು ತಲೆ ಮೇಲೆ ಕೂರಿಸಿಕೊಂಡು ಕೆಲಸ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ‌ ಬದಲಾವಣೆಯಾದ್ರೂ ಮಾಡಲಿ, ಸಿಎಂ ಜೊತೆಗಾದರೂ ಇರಲಿ. ಅದು ಅವರ ಪಕ್ಷದ ವಿಚಾರ. ವಿರೋಧ ಪಕ್ಷದವರನ್ನು ಕರೆದುಕೊಂಡು ಸರ್ಕಾರ ಮಾಡುತ್ತಾರೆ, ಏನು ಮಾಡೋಕಾಗುತ್ತೆ ಎಂದರು.

ಆಟೋ ಚಾಲಕರ ಸಮಸ್ಯೆ ಆಲಿಸಿದ ಡಿಕೆಶಿ:

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರ ಸಮಸ್ಯೆಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್​​ ಆಲಿಸಿದರು.

ಆಟೋ ಚಾಲಕರ ಸಮಸ್ಯೆ ಆಲಿಸಿದ ಡಿ.ಕೆ.‌ ಶಿವಕುಮಾರ್

ಧಾರವಾಡದ ಅಂಜುಮನ್ ಇಸ್ಲಾಂ‌ಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಆಟೋ ಚಾಲಕರ ಸಮಸ್ಯೆ ಆಲಿಸಿದರು. ಸರ್ಕಾರ ಕಳೆದ ವರ್ಷ ಘೋಷಣೆ ಮಾಡಿದ ಪರಿಹಾರ ಆಟೋ ಚಾಲಕರ ಕೈ ಸೇರಿಲ್ಲ.

ಕೇವಲ‌ 700ರಿಂದ 800 ಜನಕ್ಕೆ ಮಾತ್ರ ಪರಿಹಾರ ವಿತರಿಸಿದ್ದಾರೆ ಎಂದು ಡಿಕೆಶಿ ಅವರ ಮುಂದೆ ಆಟೋ ಚಾಲಕರು ತಮ್ಮ ಸಮಸ್ಯೆ ಹೇಳಿಕೊಂಡರು.

ಬೇರೆ ಬೇರೆ ರಾಜ್ಯದವರು ಬಿಪಿಎಲ್ ಕಾರ್ಡುದಾರರ ಖಾತೆಗೆ ಹಣ ಹಾಕುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಯಾಕಿಲ್ಲಾ?. ಪ್ರಜೆಗಳಿಂದ ಪ್ರಜಾಪ್ರಭುತ್ವ ಎಂದು ಹೇಳಿಕೊಂಡು ಹೋಗುವುದೇ ಆಗಿದೆ‌ ಹೊರತು ಆಟೋ ಚಾಲಕರಿಗೆ ಏನು ಪ್ರಯೋಜನವಾಗಲಿಲ್ಲ ಎಂದು‌ ಆಟೋ ಚಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.