ಧಾರವಾಡ: ಜಿಲ್ಲಾ ಆರೋಗ್ಯ ಅಧಿಕಾರಿ ಕುರ್ಚಿಗೆ ಗುದ್ದಾಟ ಶುರುವಾಗಿದೆ. ಬಸನಗೌಡ ಕರಿಗೌಡರ್ ಈಗ ಮತ್ತೆ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿದ್ದಾರೆ.
ಅ. 1 ರಂದು ಕರ್ತವ್ಯಲೋಪ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿದ್ದ ಅವರನ್ನು ತಾಲೂಕು ಆರೋಗ್ಯ ಅಧಿಕಾರಿಯಾಗಿ ಸರ್ಕಾರ ನೇಮಿಸಿತ್ತು. ಈ ಹಿನ್ನೆಲೆ ಶಶಿ ಪಾಟೀಲ್ ಅಧಿಕಾರ ವಹಿಸಿಕೊಂಡಿದ್ದರು. ಇದನ್ನು ಕರಿಗೌಡರ್ ಕೆಎಟಿಯಲ್ಲಿ ಪ್ರಶ್ನಿಸಿದ್ದರು. ನಂತರ ಕರಿಗೌಡರ್ ಪರವಾಗಿ ಕೆಎಟಿ ಆದೇಶ ಮಾಡಿತ್ತು. ಹೀಗಾಗಿ ಕರಿಗೌಡರ್ ಮತ್ತೆ ಧಾರವಾಡ ಡಿಎಚ್ಒ ಕಚೇರಿಗೆ ಬಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಇದನ್ನೂ ಓದಿ: ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆ ಕುರಿತು ವರದಿ ಪಡೆದು, ಸೂಕ್ತ ಕ್ರಮ: ಸಚಿವ ಮುನೇನಕೊಪ್ಪ