ಹುಬ್ಬಳ್ಳಿ : ಈ ಹಿಂದೆ ರಾಜ್ಯದ ಘನ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದು ಹೇಳಿತ್ತು. ಆ ಮಾತನ್ನ ಸರ್ಕಾರಕ್ಕೆ ಮರಳಿ ನೆನಪು ಮಾಡುವ ಉದ್ದೇಶದಿಂದ ನಾಳೆ ( ಆಗಸ್ಟ್ 12) ನಗರದ ಗೋಕುಲ್ ರಸ್ತೆಯ ಕ್ಯೂವಿಸ್ಕ್ ಹೋಟೆಲ್ನಲ್ಲಿ ಪಂಚಮಸಾಲಿ ಸಮಾಜದ ಬಾಂಧವರ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾತನಾಡಿದರು. ಬಿಜೆಪಿ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಆರು ತಿಂಗಳ ಸಮಯ ಪಡೆದಿತ್ತು. ಮರಳಿ ಆ ಬಗ್ಗೆ ಇನ್ನೂ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದರು.
ಈ ಕಾರಣದಿಂದ ನಾಳೆ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ. ಪಂಚಮಸಾಲಿ ಸಮಾಜದ ಎಲ್ಲ ನಗರ, ಪಟ್ಟಣ, ಗ್ರಾಮೀಣ ವಿಭಾಗದ ಎಲ್ಲ ಮುಖಂಡರು ಸೇರಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಓದಿ: ಬಿಬಿಎಂಪಿ ಸಭೆ-ಸಮಾರಂಭಗಳಲ್ಲಿ ಕಾಣಿಕೆ ಬದಲು ಕನ್ನಡ ಪುಸ್ತಕಗಳ ಬಳಕೆ : ಮುಖ್ಯ ಆಯುಕ್ತರಿಂದ ಸುತ್ತೋಲೆ