ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಜಾತಿ ಮುಂದಿಟ್ಟುಕೊಂಡು ಚುನಾವಣೆ ಮಾಡುವುದು ಸರಿಯಲ್ಲ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಕುರಿತು ಮಾತನಾಡಿದ ಅವರು, ಜಾತಿ ಹೆಸರಲ್ಲಿ ಓಟ್ ಪಡೆಯೋಕೆ ಶಕ್ತಿ ಬೇಕು. ಜಾತಿ ಮೇಲೆ ವೋಟು ಕೇಳೊ ಪರಿಸ್ಥಿತಿ ಇವತ್ತು ಇಲ್ಲ. ಈಗ ದಿನಮಾನಗಳು ಬದಲಾಗಿವೆ. ಕೆಲವರು ಸ್ವಾರ್ಥಕ್ಕಾಗಿ ಜಾತಿಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಖಿಲ ಭಾರತ ವೀರಶೈವ ಮಹಾ ಸಭಾ ಕೂಡ ಇಂಥವರಿಗೆ ಮತ ಹಾಕಿ ಎಂದು ಎಲ್ಲೂ ಹೇಳಿಲ್ಲ. ನನ್ನ ಜಾತಿಯನ್ನ ಎಂದೂ ರಾಜಕೀಯಕ್ಕೆ ಬಳಸಿಲ್ಲ ಎಂದು ಕುಲಕರ್ಣಿ ವಿರುದ್ಧ ಮಾತಿನಿ ಚಾಟಿ ಬೀಸಿದರು.