ETV Bharat / state

ಭಾರತ ಎ vs ನ್ಯೂಜಿಲೆಂಡ್‌ ಎ ಟೆಸ್ಟ್: ಹುಬ್ಬಳ್ಳಿಯಲ್ಲಿ ಪಂದ್ಯವಾಡಿದ್ದು ಸಂತಸ ತಂದಿದೆ- ಕೆ.ಎಸ್‌.ಭರತ್

author img

By

Published : Sep 12, 2022, 7:34 AM IST

ಹುಬ್ಬಳ್ಳಿಯಲ್ಲಿ ನಡೆದ ಎರಡನೇ ನ್ಯೂಜಿಲೆಂಡ್ ಎ ಮತ್ತು ಭಾರತ ಎ ನಡುವಣ 4 ದಿನಗಳ ಟೆಸ್ಟ್​ ಮಳೆಯಿಂದಾಗಿ ಡ್ರಾನಲ್ಲಿ ಕೊನೆಗೊಂಡಿತು.

india-a-and-new-zealand-a-teat-draw
ಭಾರತ ಎ ತಂಡದ ವಿಕೆಟ್‌ ಕೀಪರ್ ಕೆ ಎಸ್ ಭರತ್

ಹುಬ್ಬಳ್ಳಿ: "ಇಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯವಾಡಿದ್ದು ನನಗೆ ಸಂತಸ ತಂದಿದೆ. ಈ ಹಿಂದೆ ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ 116 ರನ್ ಗಳಿಸಿದ್ದೆ. ಈ ಮ್ಯಾಚ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಪಿಚ್​ ಸಹಕರಿಸಿತು" ಎಂದು ಭಾರತ ಎ ತಂಡದ ವಿಕೆಟ್‌ ಕೀಪರ್ ಕೆ.ಎಸ್.ಭರತ್ ಹೇಳಿದರು.

'ಹುಬ್ಬಳ್ಳಿಯಲ್ಲಿ ಪಂದ್ಯವಾಡಿದ್ದು ನನಗೆ ಸಂತಸ ತಂದಿದೆ'

ನ್ಯೂಜಿಲೆಂಡ್ ಎ ಮತ್ತು ಭಾರತ ಎ ನಡುವಣ 4 ದಿನಗಳ ಟೆಸ್ಟ್ ಭಾನುವಾರ​ ಡ್ರಾನಲ್ಲಿ ಮುಗಿದಿದೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಿಚ್ ಸಹ ಉತ್ತಮವಾಗಿತ್ತು. ನ್ಯೂಜಿಲೆಂಡ್ ಎ ತಂಡದವರ ಕರಾರುವಾಕ್ ದಾಳಿಯಿಂದ ನಮ್ಮ ನಾಲ್ಕು ವಿಕೆಟ್‌ಗಳು ಬೇಗನೆ ಉರುಳಿದವು. ಮಳೆಯಿಂದಾಗಿ ಮ್ಯಾಚ್ ಸಂಪೂರ್ಣವಾಗಲಿಲ್ಲ" ಎಂದರು.

ಆರ್​ಸಿಬಿ ತಂಡದಿಂದ ಹೊರಬಿದ್ದಿದ್ದಕ್ಕೆ ಬೇಜಾರಿಲ್ಲ. ಅವರವರ ತಂಡಗಳ ಲೆಕ್ಕಾಚಾರ ಬೇರೆಯೇ ಇರುತ್ತೆ. ಆರ್​ಸಿಬಿ ಒಂದೊಳ್ಳೆಯ ಫ್ರಾಂಚೈಸಿ. ಅದರ ಜೊತೆ ಕೆಲ ವರ್ಷ ಪಾಲುದಾರನಾಗಿರುವ ಹೆಮ್ಮೆ ಇದೆ ಎಂದು ಇದೇ ವೇಳೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಡ್ರಾನಲ್ಲಿ ಸಮಾಪ್ತಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.