ETV Bharat / state

ಹುಬ್ಬಳ್ಳಿ: 75 ಕಿ.ಮೀ ಹಿಮ್ಮುಖವಾಗಿ ಟ್ರ್ಯಾಕ್ಟರ್​ ಓಡಿಸಿ ಯಲ್ಲಮ್ಮ ದೇವಿಗೆ ಹರಕೆ ತೀರಿಸಿದ ಯುವಕ - ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಟ್ರ್ಯಾಕ್ಟರ್​ವೊಂದನ್ನು ರಿವರ್ಸ್​ ಡ್ರೈವ್​ ಮಾಡಿಕೊಂಡು ಬಂದು ದೇವಿ ದರ್ಶನ ಪಡೆದಿದ್ದಾನೆ.

ಟ್ರ್ಯಾಕ್ಟರ್​ ರಿವರ್ಸ್ ಓಡಿಸಿ ಯಲ್ಲಮ್ಮ ದೇವಿಗೆ ಹರಕೆ

author img

By ETV Bharat Karnataka Team

Published : Sep 4, 2023, 11:36 AM IST

ಹುಬ್ಬಳ್ಳಿ: ಟ್ರ್ಯಾಕ್ಟರ್​ವೊಂದನ್ನು ರಿವರ್ಸ್​ ಡ್ರೈವ್​ ಮಾಡಿಕೊಂಡು ಯುವಕನೋರ್ವ ತಮ್ಮ ಮನೆದೇವರು ಯಲ್ಲಮ್ಮದೇವಿಗೆ ಹರಕೆ ತೀರಿಸಿದ್ದಾನೆ. ತಾಲೂಕಿನ ಮಂಟೂರ ಗ್ರಾಮದ 22 ವರ್ಷದ ಯುವಕ ಬಾಬುಗೌಡ ಚಂದ್ರುಗೌಡ ಪರ್ವತಗೌಡ್ರ ಎಂಬಾತನೇ ಈ ಸಾಧನೆ ಮಾಡಿದಾತ.

ವೃತ್ತಿಯಿಂದ ಕೃಷಿಕನಾಗಿರುವ ಬಾಬುಗೌಡ ಅವರು ಐದಾರು ವರ್ಷದಿಂದ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದಾನೆ. ಆದರೆ, ರಿವರ್ಸ್ ಗೇರ್​ನಲ್ಲಿ ವಾಹನ ಚಲಾಯಿಸುವುದು, ಅಲ್ಲದೆ ಬಹುದೂರದವರೆಗೆ ತೆಗೆದುಕೊಂಡು ಹೋಗುವುದನ್ನು ಮಾಡಿರಲಿಲ್ಲ. ಬಾಬುಗೌಡ ಟ್ರ್ಯಾಕ್ಟರ್ಅನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಹೋಗಿ ದೇವಿ ದರ್ಶನ ಪಡೆಯುತ್ತೇನೆ ಎಂದು ಹರಕೆ ಹೊತ್ತಿದ್ದನಂತೆ. ಅದರಂತೆ ಬಾಬುಗೌಡ ಯಲ್ಲಮ್ಮದೇವಿ ದರ್ಶನಕ್ಕಾಗಿ ಸೆಪ್ಟೆಂಬರ್ 2ರಂದು ಬೆಳಗ್ಗೆ 6.15ಕ್ಕೆ ಮಂಟೂರಿನ ವಲಂಬೇಶ್ವರ ದೇವಸ್ಥಾನದಿಂದ ಹಿಮ್ಮುಖ ಪ್ರಯಾಣ ಆರಂಭಿಸಿದ್ದ.

ಕುಸುಗಲ್ಲ, ಬ್ಯಾಹಟ್ಟಿ, ತೀರ್ಲಾಪುರ, ಅಳಗವಾಡಿ, ಹಂಚಿನಾಳ, ಚಿಕ್ಕುಂಬಿ, ಹಿರೇಕುಂಬಿ ಹಾಗೂ ಉಗರಗೋಳ ಮೂಲಕ ಸವದತ್ತಿಗೆ ಹೋಗಿ, ಅಲ್ಲಿಂದ ಯಲ್ಲಮ್ಮನಗುಡ್ಡ ತಲುಪಿದ್ದ. ಮಧ್ಯಾಹ್ನ 1.30ಕ್ಕೆ ಯಲ್ಲಮ್ಮನ ಗುಡ್ಡ ಪ್ರವೇಶಿಸಿ ಹರಕೆ ತೀರಿಸಿದ. ಗುಡ್ಡದಲ್ಲಿ ಇವರನ್ನು ಸ್ವಾಗತಿಸಿದ ಗ್ರಾಮಸ್ಥರು, ಭಂಡಾರ ಹಚ್ಚಿ ಬರಮಾಡಿಕೊಂಡರು. ಸಾಧಕನಿಗೆ ಸನ್ಮಾನಿಸಿದರು. ಸುಮಾರು 75 ಕಿ.ಮೀ. ಅಂತರವನ್ನು ಒಟ್ಟು 7 ತಾಸು 30 ನಿಮಿಷದಲ್ಲಿ ಕ್ರಮಿಸುವ ಮೂಲಕ ದಾಖಲೆ ಬರೆದಿದ್ದಾನೆ.

ಟ್ರ್ಯಾಕ್ಟರ್ ಹಿಮ್ಮುಖ ಸ್ಪರ್ಧೆ: ಯಾದಗಿರಿಯಲ್ಲಿ ನಾಗರ ಪಂಚಮಿ ಹಬ್ಬದಂದು ಟ್ರ್ಯಾಕ್ಟರ್ ಅನ್ನು ಹಿಮ್ಮುಖವಾಗಿ ಚಲಾಯಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ದೋರನಹಳ್ಳಿ ಗ್ರಾಮದ ಬಸಲಿಂಗಪ್ಪ ಹುರಸಗುಂಡಗಿ ಎಂಬವರು ವಿಜಯಪುರ-ಹೈದರಾಬಾದ್ ಹೆದ್ದಾರಿಯಲ್ಲಿ ಬರುವ ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್‌ವರೆಗೆ ಟ್ರ್ಯಾಕ್ಟರ್ ಅನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಒಂದು ತಾಸು 43 ನಿಮಿಷದಲ್ಲಿ ಗುರಿ ತಲುಪಿದ್ದ. ಇನ್ನೋರ್ವ ಸ್ಪರ್ಧಿ ಪರಶುರಾಮ ಟೋಕಾಪುರ ಎಂಬವರು 1 ತಾಸು 45 ನಿಮಿಷದಲ್ಲಿ ಇದೇ ದೂರವನ್ನು ಕ್ರಮಿಸಿದ್ದ. ಸುಮಾರು 24 ಕಿ.ಮೀ ದೂರವನ್ನು ಬಸಲಿಂಗಪ್ಪ ಹುರಸಗುಂಡಗಿ ಅವರು ಅತ್ಯಂತ ತ್ವರಿತವಾಗಿ ತಲುಪಿ ಗೆಲುವಿನ ಕೇಕೆ ಹಾಕಿದ್ದರು. ಗೆದ್ದ ಸ್ಪರ್ಧಿಗೆ 1 ಲಕ್ಷ 45 ಸಾವಿರ ರೂ. ಸಿಕ್ಕಿತ್ತು.

ಸಾರ್ವಜನಿಕ ಸಂಚಾರಿ ರಸ್ತೆಗಳ ಮೇಲೆ ಇಂಥ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾರಿಗೆ ಬಸ್​ ಮತ್ತು ಲಾರಿ ಸೇರಿದಂತೆ ಇತರೆ ವಾಹನಗಳು ಓಡಾಡುವ ಮಾರ್ಗದಲ್ಲಿ ಈ ರೀತಿಯ ಸಾಹಸ ನಡೆಸಿರುವುದು ಅಪಾಯಕಾರಿ. ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವಾಗ ಸೂಕ್ತ ಪ್ರದೇಶಗಳನ್ನು ಆಯ್ದುಕೊಳ್ಳುವುದು ಒಳಿತು ಎಂದು ವಾಹನ ಸವಾರರು ಸಲಹೆ ನೀಡಿದ್ದರು.

ಇದನ್ನೂ ಓದಿ: ಯಾದಗಿರಿ: ಹಿಮ್ಮುಖವಾಗಿ 24 ಕಿ.ಮೀ ಟ್ರ್ಯಾಕ್ಟರ್ ಚಲಾಯಿಸಿ ₹1.45 ಲಕ್ಷ ಬಹುಮಾನ ಗೆದ್ದ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.