ETV Bharat / state

ಆಮ್​ ಆದ್ಮಿ ಪಕ್ಷದಿಂದ 'ಐ ಲವ್ ಹುಬ್ಬಳ್ಳಿ-ಧಾರವಾಡ' ಬೃಹತ್ ಪಾದಯಾತ್ರೆ - ಧಾರವಾಡ ಆಮ್ ಆದ್ಮಿ ಪಕ್ಷ

ಎಲ್ಲರೂ ಒಗ್ಗೂಡಿ ಹು-ಧಾ ಮಹಾನಗರವನ್ನು ದೆಹಲಿ ಮಾದರಿಯಲ್ಲಿ ಕಟ್ಟಿ ಅತ್ಯುತ್ತಮ ನಗರಗಳ ಸಾಲಿನಲ್ಲಿ ನಿಲ್ಲಿಸಲು ಸಂಕಲ್ಪ ಮಾಡಬೇಕಿದೆ ಎಂದು ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಕರೆ ನೀಡಿದ್ದಾರೆ.

I Love Hubli-Dharwad Huge Hike by Aam Aadmi Party in Hubli
ಹುಬ್ಬಳ್ಳಿಯಲ್ಲಿ ಆಪ್​ ವತಿಯಿಂದ ಐ ಲವ್ ಹುಬ್ಬಳ್ಳಿ-ಧಾರವಾಡ ಬೃಹತ್ ಪಾದಯಾತ್ರೆ
author img

By

Published : Feb 14, 2021, 2:48 PM IST

ಹುಬ್ಬಳ್ಳಿ: ವಿಶ್ವದರ್ಜೆಯ ಹು-ಧಾ ಕಟ್ಟುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷದ ವತಿಯಿಂದ ಐ ಲವ್ ಹುಬ್ಬಳ್ಳಿ-ಧಾರವಾಡ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಹುಬ್ಬಳ್ಳಿಯಲ್ಲಿ ಆಪ್​ ವತಿಯಿಂದ ಐ ಲವ್ ಹುಬ್ಬಳ್ಳಿ-ಧಾರವಾಡ ಬೃಹತ್ ಪಾದಯಾತ್ರೆ

ನಗರದಲ್ಲಿ ಪಾದಯಾತ್ರೆ ಮೂಲಕ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಪ್ರೀತಿ ಎಂಬುದು ಕೇವಲ ವ್ಯಕ್ತಿಗಳ ಮಧ್ಯೆ ಸೀಮಿತವಲ್ಲ. ಹಾಗಾಗಿ ನಮ್ಮ ದೇಶದ ಮಹಾನ್ ವ್ಯಕ್ತಿಗಳು ತಿಳಿಸಿರುವಂತೆ ಇಂದು ನಾವು ಜಾತಿ, ಮತ, ಕುಲ, ಭೇದ ಮರೆತು ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಎಲ್ಲೆಡೆ ಸಾರಬೇಕಾಗಿದೆ. ಈ ಮಹತ್ತರ ಕಾರ್ಯಕ್ಕೆ ಆಮ್ ಆದ್ಮಿ ಪಕ್ಷ ಮುಂದಾಗಿದ್ದು ಇದಕ್ಕೆ ಅವಳಿನಗರದ ಎಲ್ಲ ಜನತೆ ಕೈಜೋಡಿಸಬೇಕು.

ನಮ್ಮ ರಾಷ್ಟ್ರ ಇಂದು ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ಬಂದು ನಿಂತಿದೆ. ಈ ವೇಳೆ ದೇಶದ ಮತ್ತು ರಾಜ್ಯದ ಬುದ್ದಿವಂತ ನಾಗರಿಕರು ಸಾಂಪ್ರದಾಯಿಕ ಪಕ್ಷಗಳ ದ್ವೇಷ, ವಿಭಜನೆಯ ರಾಜಕೀಯ ಹಾಗೂ ಆಮ್ ಆದ್ಮಿ ಪಕ್ಷದ ಪ್ರೀತಿ ಮತ್ತು ಬಂಧುತ್ವದ ಕಾಯಕದ ರಾಜಕೀಯದ ನಡುವೆ ಆರಿಸಬೇಕಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.