ETV Bharat / state

ಬಿಕೋ ಅಂತಿದೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಗುತ್ತಿಗೆ ಕಾರ್ಮಿಕರ ಸಂಕಷ್ಟ ಕೇಳೋರ್‍ಯಾರು? - railway emplyees

ಲಾಕ್​​​ಡೌನ್​ನಿಂದ ರೈಲ್ವೆ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾದ ಕಾರಣದಿಂದಾಗಿ ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ನೈರುತ್ಯ ರೈಲ್ವೆ ನಿಲ್ದಾಣ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಎರಡು ಹಂತದ ಲಾಕ್ ಡೌನ್ ಆದೇಶದಿಂದ 250ಕ್ಕೂ ಅಧಿಕ ರೈಲುಗಳ ಸಂಚಾರ ಸ್ಥಗಿತವಾಗಿದೆ.

hubli railway station
ಹುಬ್ಬಳ್ಳಿ ರೈಲ್ವೆ ನಿಲ್ದಾಣ
author img

By

Published : Apr 29, 2020, 5:38 PM IST

Updated : Apr 29, 2020, 5:46 PM IST

ಹುಬ್ಬಳ್ಳಿ: ನಿತ್ಯ ಸಾವಿರಾರು ಪ್ರಯಾಣಿಕರು, ಕೂಲಿ ಕಾರ್ಮಿಕರು, ರೈಲ್ವೆ ಸಿಬ್ಬಂದಿಯಿಂದ ತುಂಬಿ ತುಳುಕುತ್ತಿದ್ದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಲಾಕ್​ಡೌನ್​ನಿಂದ ಬಿಕೋ ಅಂತಿದೆ. ಉತ್ತರ ಕರ್ನಾಟಕ ಭಾಗದ ವಾಣಿಜ್ಯ ರಾಜಧಾನಿ ಎನಿಸಿಕೊಂಡಿರುವ ಇಲ್ಲಿಗೆ ನಿತ್ಯ ಹಾವೇರಿ, ಗದಗ, ಸೇರಿದಂತೆ ಹುಬ್ಬಳ್ಳಿ ತಾಲೂಕಿನ ಸುತ್ತಮುತ್ತಲಿನ ರೈತರು,‌ಕೂಲಿ ಕಾರ್ಮಿಕರು ಆಗಮಿಸುತ್ತಿದ್ದರು. ಅವರಲ್ಲಿ ಶೇಕಡಾ 80ರಷ್ಟು ಜನ ರೈಲ್ವೆಯನ್ನೇ ಅವಲಂಬಿಸಿದ್ದರು.

ಹುಬ್ಬಳ್ಳಿ ರೈಲ್ವೆ ನಿಲ್ದಾಣ
ನಿತ್ಯ ಆಗಮಿಸುವ ಕಾರ್ಮಿಕರು ಕಟ್ಟಡ ಕೆಲಸ, ಕಾರ್ಖಾನೆ ಸೇರಿದಂತೆ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದರಿಂದ ಸಣ್ಣ ಪುಟ್ಟ ಹೋಟೆಲ್​​​ ಉದ್ಯಮ, ಲಾಡ್ಜ್, ಪಾನ್ ಶಾಪ್, ಬೇಕರಿ ಉದ್ಯಮ ನಡೆಯುತ್ತಿತ್ತು. ಆದರೆ ಈಗ ಎಲ್ಲದಕ್ಕೂ ಕೊಕ್ಕೆ ಬಿದ್ದಿದೆ.‌ ರೈಲು ಸಂಚಾರ ಸ್ಥಗಿತಗೊಂಡಾಗಿನಿಂದ ರೈಲು ನಿಲ್ದಾಣ ಬಿಕೋ ಎನ್ನುತ್ತಿದೆ. ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಕೆಲಸ ಮಾಡುವ ಕಾರ್ಮಿಕರನ್ನು ನಂಬಿಕೊಂಡಿದ್ದ ರೈಲ್ವೆ ನಿಲ್ದಾಣದ ಬಳಿಯ ನೂರಾರು ಸಣ್ಣ ಪುಟ್ಟ ಅಂಗಡಿಗಳಿಗೂ ಬೀಗ ಬಿದ್ದಿದೆ.
ರೈಲ್ವೆ ಸಂಚಾರ ಸಂಪೂರ್ಣವಾಗಿ ನಿಲ್ಲಿಸಲಾದ ಕಾರಣ ಪ್ರತಿನಿತ್ಯ ಜನಜಂಗುಳಿಯಿಂದ ಕೂಡಿರುತಿದ್ದ ನೈರುತ್ಯ ರೈಲ್ವೆ ನಿಲ್ದಾಣ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಎರಡು ಹಂತದ ಲಾಕ್ ಡೌನ್ ಆದೇಶದಿಂದ 250ಕ್ಕೂ ಅಧಿಕ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ದಿನಕ್ಕೆ 15 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗುತ್ತಿದೆ. ಪ್ರಯಾಣಿಕರಿಗಾಗಿ ವಿಶೇಷ ರಿಫಂಡ್ ನಿಯಮ ಜಾರಿಗೊಳಿಸಿ ಪ್ರಯಾಣಿಕರ ಹಣವನ್ನು ಕೂಡ ಮರಳಿ ನೀಡುತ್ತಿದೆ. ಇದಲ್ಲದೆ ಹುಬ್ಬಳ್ಳಿ ರೈಲು‌ ನಿಲ್ದಾಣದಲ್ಲಿ‌ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಇದರ ಬಿಸಿ ತಟ್ಟಿದೆ. ನೂರಾರು ಜನರು ಕೆಲಸ ಮಾಡುತ್ತಿದ್ದ ಸಫಾಯಿ ಕರ್ಮಚಾರಿಗಳ ಸಂಖ್ಯೆಯನ್ನು ಇಳಿಸಲಾಗಿದೆ‌. ಒಟ್ಟಿನಲ್ಲಿ ಜನರ ಸಂಪರ್ಕ ಸೇತುವಾಗಿದ್ದ ರೈಲ್ವೆ ಸಂಚಾರ ಸ್ಥಗಿತ‌ವಾದ ಪರಿಣಾಮ ರೈಲು‌ ನಿಲ್ದಾಣಗಳು ಸ್ತಬ್ಧವಾಗಿದ್ದು ಇದನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರು‌ ಹಾಗೂ ವ್ಯಾಪಾರಿಗಳು ಪರದಾಡುವ ಸ್ಥಿತಿ‌ ನಿರ್ಮಾಣವಾಗಿದೆ.

Last Updated : Apr 29, 2020, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.