ETV Bharat / state

ಪಾಲಿಕೆ ಚುನಾವಣೆಯಲ್ಲಿ ಕುರುಡು ಕಾಂಚಾಣದ ಸದ್ದು: ಹುಬ್ಬಳ್ಳಿಯಲ್ಲಿ 82.75 ಲಕ್ಷ ರೂ. ಹಣ ಜಪ್ತಿ

author img

By

Published : Aug 28, 2021, 3:21 PM IST

Updated : Aug 28, 2021, 3:51 PM IST

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಕೆಲವೆ ದಿನಗಳ ಬಾಕಿ ಉಳಿದಿದ್ದು, ಕೇಶ್ವಾಪುರ ಠಾಣೆ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 82.75 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.

Keshwapur Police Station
ಕೇಶ್ವಾಪುರ ಪೊಲೀಸ್​ ಠಾಣೆ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಈ ಮಧ್ಯೆ ಮತದಾರರನ್ನು ಸೆಳೆಯಲು ಪ್ರಮುಖ‌ ಪಕ್ಷಗಳು ಹಣ ಹಂಚಿಕೆ ಮಾಡುತ್ತಿವೆ ಎಂಬ ಆರೋಪಕ್ಕೆ ಪುರಾವೆ ಸಿಕ್ಕಿದೆ.

Hubli police seized car
ಪೊಲೀಸರು ವಶಕ್ಕೆ ಪಡೆದಿರುವ ಕಾರು

ನಿನ್ನೆ ರಾತ್ರಿ ಕುಸುಗಲ್ ರಸ್ತೆಯ ಆಕ್ಸ್​ಫರ್ಡ್​​ ಕಾಲೇಜಿನ ಬಳಿ ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಾಟ ನಡೆಸಲಾಗುತ್ತಿತ್ತು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಕೇಶ್ವಾಪುರ ಠಾಣೆ ಪೊಲೀಸರು, ಕಾರನ್ನು ತಡೆದು ತಪಾಸಣೆ ನಡೆಸಿದ್ದರು.

ಈ ವೇಳೆ ಕಾರಿನಲ್ಲಿದ್ದ ಸುಮಾರು 82.75 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದು, ಕಾರು ಚಾಲಕ ಗೋಕುಲರಾಮ ವೀರಾಮಾರಾಮ ರಬಾರಿ(34) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಚಾಲಕ ಮೂಲತಃ ರಾಜಸ್ಥಾನದವನಾಗಿದ್ದು, ಸದ್ಯ ಬಾಗಲಕೋಟೆಯಲ್ಲಿ ವಾಸವಾಗಿದ್ದಾನೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೇ ಭಾರಿ‌ ಹಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಓದಿ: Mysuru Gang Rape: ಮುಂಬೈಗೆ ತೆರಳಿದ ಸಂತ್ರಸ್ತೆಗೆ ಆರೋಪಿಗಳ ಫೋಟೋ ಕಳಿಸಿ ಖಚಿತಪಡಿಸಿಕೊಂಡ ಪೊಲೀಸರು!

Last Updated : Aug 28, 2021, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.