ETV Bharat / state

ಸೋಂಕಿತನೊಂದಿಗೆ ಆರೋಗ್ಯವಂತನ ಫೋಟೋ : ಇಬ್ಬರು ಅರೆಸ್ಟ್​​

ಕೊರೊನಾ ಪೀಡಿತನೊಂದಿಗೆ ಆರೋಗ್ಯವಂತ ವ್ಯಕ್ತಿಯ ಫೋಟೋ ಹಾಕಿ ವಾಟ್ಸ್​ಆ್ಯಪ್​ ನಲ್ಲಿ ಸುಳ್ಳುಸುದ್ದಿ ಹರಿಬಿಟ್ಟಿದ್ದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ.

hubli police arrest two for spreading fake news
ಇಬ್ಬರು ಅರೆಸ್ಟ್​​
author img

By

Published : Mar 25, 2020, 11:53 PM IST

ಹುಬ್ಬಳ್ಳಿ: ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಆರೋಗ್ಯವಂತ ವ್ಯಕ್ತಿಯ ಫೋಟೋವೊಂದನ್ನು ವಾಟ್ಸ್​ಆ್ಯಪ್​​ನಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಇಬ್ಬರನ್ನು ಬಂಧಿಸಲಾಗಿದೆ.

ಇಲ್ಲಿನ ಹೊಸಯಲ್ಲಾಪುರ ಪ್ರದೇಶದ ಓರ್ವ ವ್ಯಕ್ತಿಗೆ ಕೋವಿಡ್- 19 ಪಾಸಿಟಿವ್ ವರದಿ ಬಂದಿದ್ದ ವೇಳೆ, ಕೆಲವರು ಬೇರೊಬ್ಬ ಆರೋಗ್ಯವಂತ ವ್ಯಕ್ತಿಯ ಫೋಟೋವೊಂದನ್ನು ವಾಟ್ಸ್​ಆ್ಯಪ್​ನಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹು- ಧಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿದ ಮತ್ತು ಫಾರ್ವರ್ಡ್ ಮಾಡಿದ ಇಬ್ಬರು ಕಿಡಿಗೇಡಿಗಳ‌ನ್ನು ಬಂಧಿಸಿದ್ದಾರೆ.

ಬಂಧಿತರಿಬ್ಬರು ಧಾರವಾಡ ನಿವಾಸಿಗಳು ಎನ್ನಲಾಗಿದೆ. ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಈತನನ್ನು ಧಾರವಾಡದ ಶಹರ ಪೊಲೀಸರು ಬಂಧಿಸಿದ್ರೆ, ಇನ್ನೊಬ್ಬ ಬಿಕಾಂ ವಿದ್ಯಾರ್ಥಿಯಾಗಿದ್ದು, ಈತನನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.