ETV Bharat / state

ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ: ಹೀಗಂದ್ರು ಹುಬ್ಬಳ್ಳಿ ಧಾರವಾಡ ಪಾಲಿಕೆ ಕಮೀಷನರ್ - ಹುಬ್ಬಳ್ಳಿ ಧಾರವಾಡ ಪಾಲಿಕೆ ಕಮೀಷನರ್

ಆದಷ್ಟು ಶೀಘ್ರವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲಾ ಇಲಾಖೆ ಒಳಗೊಂಡು ಏಕಗವಾಕ್ಷಿಯನ್ನು ಆರಂಭಿಸುತ್ತೇವೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಮೀಷನರ್ ಡಾ ಗೋಪಾಲಕೃಷ್ಣ ಹೇಳಿದರು.

ಡಾ. ಗೋಪಾಲಕೃಷ್ಣ
ಡಾ. ಗೋಪಾಲಕೃಷ್ಣ
author img

By

Published : Aug 22, 2022, 4:58 PM IST

ಹುಬ್ಬಳ್ಳಿ: ಈದ್ಗಾ ‌ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳದ ವಸ್ತು ಸ್ಥಿತಿ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗುವುದು. ಅಲ್ಲಿಯವರೆಗೆ ಸಂಘಟನೆಗಳು ಮೊದಲಿನಂತೆ ಎಲ್ಲಾ ಇಲಾಖೆಯ ಪೂರ್ವಾನುಮತಿ ಪಡೆಯಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಮೀಷನರ್ ಡಾ ಗೋಪಾಲಕೃಷ್ಣ ಹೇಳಿದರು.

ನಗರದಲ್ಲಿಂದು ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಅವಕಾಶ ನೀಡಬೇಕು ಎಂದು ಮನವಿ ಕುರಿತು ಮಾತನಾಡಿದ ಅವರು, ಆದಷ್ಟು ಶೀಘ್ರವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲಾ ಇಲಾಖೆ ಒಳಗೊಂಡು ಏಕಗವಾಕ್ಷಿಯನ್ನು ಆರಂಭಿಸುತ್ತೇವೆ. ಇದರಿಂದಲೇ ಎಲ್ಲಾ ಸಮಿತಿಗಳು ಅನುಮತಿ ಪಡೆಯಬೇಕು ಎಂದರು.

ಮಹಾನಗರ ಪಾಲಿಕೆ ಕಮೀಷನರ್ ಡಾ. ಗೋಪಾಲಕೃಷ್ಣ ಅವರು ಮಾತನಾಡಿದರು

ನ್ಯಾಯಾಲಯದಿಂದ ಸ್ಪಷ್ಟ ನಿರ್ದೇಶನವಿದ್ದರೂ ಆ ಜಾಗ ವಿವಾದಿತ ಸ್ಥಳವಾಗಿದೆ. ಹೀಗಾಗಿ, ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಅಗತ್ಯವಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಆ ಬಳಿಕ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮಹಾಣಗರ ಪಾಲಿಕೆ ಆಯುಕ್ತರು ಹೇಳಿದರು.

ಓದಿ: ಸಿಲಿಕಾನ್ ಸಿಟಿಯಲ್ಲಿ ವ್ಹೀಲಿಂಗ್ ಹಾವಳಿ: ಪುಂಡನ ಶೋಕಿಗೆ ಯುವತಿ ಸಾಥ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.