ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವಳಿ ನಗರಗಳಿಗೆ ಮಂಜೂರಾದ ಒಟ್ಟು 57 ಯೋಜನೆಗಳ ಪೈಕಿ 43 ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಅಂಶದಿಂದಾಗಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಪ್ರಕಟಿಸಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ರಾಜ್ಯದಲ್ಲಿ ಅಗ್ರ ಸ್ಥಾನ ಪಡೆದಿದೆ. ರಾಷ್ಟ್ರೀಯ ಮಟ್ಟದಲ್ಲಿ 13ನೇ ಸ್ಥಾನ ಲಭಿಸಿದೆ.
ಒಟ್ಟು 57 ಯೋಜನೆಗಳಲ್ಲಿ 10 ಕಾಮಗಾರಿಗಳು ಪೂರ್ಣಗೊಂಡಿದ್ದು, ನಾಲ್ಕು ಯೋಜನೆಗಳು ಟೆಂಡರ್ ಹಂತದಲ್ಲಿವೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಡಿಯಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ಕಾರ್ಯಾದೇಶ ನೀಡಲಾಗಿದೆ. ಈ ಕಾರ್ಯದಿಂದ ಹೆಚ್ಚು ಅಂಕಗಳು ಲಭ್ಯವಾಗಿವೆ. ಈ ವಾರದಲ್ಲಿ ಮೂರು ಯೋಜನೆಗಳ ಯೋಜನಾ ವೆಚ್ಚವಾದ 54.24 ಕೋಟಿ ರೂ.ಗೆ ಟೆಂಡರ್ ಆಹ್ವಾನಿಸಲಾಗಿದ್ದು, ಹುಬ್ಬಳ್ಳಿ ಹೊರವಲಯದ ತಾರಿಹಾಳ ಸಮೀಪ 150 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಟೆಂಡರ್ ಕರೆಯುವುದು ಮಾತ್ರ ಬಾಕಿಯಿದೆ. ಇನ್ನೂ ಕೆಲವೇ ದಿನಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಉತ್ತಮ ಸೇವೆ ಲಭ್ಯವಾಗಲಿದೆ.
![hubli-darwad got 13th rank in Smart City project](https://etvbharatimages.akamaized.net/etvbharat/prod-images/9643643_hubli.jpg)
ಚಾಲ್ತಿಯಲ್ಲಿರುವ 10 ಯೋಜನೆಗಳ ಅಂದಾಜು ಮೊತ್ತ 96 ಕೋಟಿಯಾಗಿದ್ದು, 2021ರ ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರವಿ ಕುಮಾರ್ ಸುರಪುರ ಅವರು ನಡೆಸಿದ ಸಭೆಯಲ್ಲಿ ಯೋಜಿತ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಮುಗಿಸಬೇಕು ಎಂದು ಸೂಚಿಸಿದ್ದರು.
![hubli-darwad got 13th rank in Smart City project](https://etvbharatimages.akamaized.net/etvbharat/prod-images/9643643_hhhubl.jpg)
ಸುಧಾಗೆ ಮತ್ತೆ ಶಾಕ್ ನೀಡಿದ ಎಸಿಬಿ: 9 ಕಡೆ ಏಕಕಾಲಕ್ಕೆ ದಾಳಿ
ಈ ಹಿನ್ನೆಲೆ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ. ಜನವರಿಯಲ್ಲಿ ಮುಗಿಯಬೇಕಿದ್ದ ಕಾಮಗಾರಿಗಳನ್ನು ಡಿಸೆಂಬರ್ ವೇಳೆಗೆ ಮುಗಿಸಲು ಯೋಜನೆ ರೂಪಿಸಲಾಗಿದೆ.