ETV Bharat / state

ಇಲ್ನೋಡ್ರೀ.. ಹುಬ್ಬಳ್ಳಿ ವಿಮಾನ ನಿಲ್ದಾಣವೂ ಖಾಸಗಿ ತೆಕ್ಕೆಗೆ.. ಕೇಂದ್ರಕ್ಕೆ 130 ಕೋಟಿ ರೂ. ಸಿಕ್ಕುವ ನಿರೀಕ್ಷೆ.. - ಹುಬ್ಬಳ್ಳಿ ವಿಮಾನ ನಿಲ್ದಾಣ

ದೇಶದ 25 ನಿಲ್ದಾಣಗಳನ್ನು ಎನ್‌ಎಂಪಿ ಯೋಜನೆ(ಎನ್‌ಎಂಪಿ-ರಾಷ್ಟ್ರೀಯ ನಗದೀಕರಣ ಯೋಜನೆ)ಗೆ ಒಳಪಡಿಸಲಾಗಿದೆ. ರಾಜ್ಯದ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೂ ಖಾಸಗಿ ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ..

Hubli Airport
ಹುಬ್ಬಳ್ಳಿ ವಿಮಾನ ನಿಲ್ದಾಣ
author img

By

Published : Aug 25, 2021, 7:03 PM IST

ಹುಬ್ಬಳ್ಳಿ : ಮೂಲಸೌಕರ್ಯ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲ ಹೊಂದಿಸಲು ಕೇಂದ್ರ ಸರ್ಕಾರ ರೂಪಿಸಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪ್​​ಲೈನ್​​​​ ಯೋಜನೆಯಡಿ ಜಿಲ್ಲೆಯ ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ವಹಿಸಲು ಸರ್ಕಾರ ಗುರುತಿಸಿದೆ.

ದೇಶದ 25 ನಿಲ್ದಾಣಗಳನ್ನು ಎನ್‌ಎಂಪಿ ಯೋಜನೆ(ಎನ್‌ಎಂಪಿ- ರಾಷ್ಟ್ರೀಯ ನಗದೀಕರಣ ಯೋಜನೆ)ಗೆ ಒಳಪಡಿಸಲಾಗಿದೆ. ರಾಜ್ಯದ ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿ ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ.

ನೀತಿ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ 25 ನಿಲ್ದಾಣಗಳಿಂದ 20,782 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹುಬ್ಬಳ್ಳಿ ನಿಲ್ದಾಣವನ್ನ 130 ಕೋಟಿ ರೂ.ಗಳಿಗೆ ಖಾಸಗಿ ತೆಕ್ಕೆಗೆ ನೀಡುವ ಉದ್ದೇಶಿಸಲಾಗಿದೆ.

information
ನೀತಿ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ

ನಾಲ್ಕು ಹಂತಗಳಲ್ಲಿ ಏರ್‌ಪೋರ್ಟ್‌ಗಳನ್ನು ಖಾಸಗಿಗೆ ವಹಿಸಿಕೊಡಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು 2023-24ನೇ ಸಾಲಿಗೆ ನಿಗದಿಪಡಿಸಲಾಗಿದೆ. ಮೊದಲ ಹಂತದಲ್ಲಿ (2021-22)ವಾರಾಣಸಿ, ನಾಗ್ಪುರ ಮತ್ತು ಭುವನೇಶ್ವರ, ಅಮೃತಸರ, ತಿರುಚಿ, ಇಂದೋರ್, ರಾಯಪುರ ನಿಲ್ದಾಣಗಳಿಂದ 3,600 ಕೋಟಿ ರೂ. ಹಾಗೂ 2022-23ರಲ್ಲಿ ಕ್ಯಾಲಿಕಟ್, ಕೊಯಿಮತ್ತೂರು, ನಾಗ್ಪುರ, ಪಾಟ್ನಾ, ಮಧುರೈ, ಸೂರತ್, ರಾಂಚಿ, ಜೋಧಪುರ ನಿಲ್ದಾಣಗಳಿಂದ 4,295 ಕೋಟಿ ರೂ., 2023-24ರಲ್ಲಿ ಚೆನ್ನೈ, ವಿಜಯವಾಡಾ, ತಿರುಪತಿ, ವಡೋದರಾ, ಭೋಪಾಲ, ಹುಬ್ಬಳ್ಳಿ ನಿಲ್ದಾಣಗಳಿಂದ 4,193 ಕೋಟಿ ರೂ. ಮತ್ತು 2024-25ರಲ್ಲಿ ಇಂಪಾಲ, ಅಗರ್ತಲಾ, ಉದಯಿಪುರ, ಡೆಹ್ರಾಡೂನ್, ರಾಜಮುದ್ರಿ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಿಂದ 1,857 ಕೋಟಿ ರೂ.ಗಳು ಸಂಗ್ರಹವಾಗುವ ನಿರೀಕ್ಷೆ ಹೊಂದಿದೆ.

ಆದರೆ, ವಿಮಾನ ನಿಲ್ದಾಣ ನಿರ್ವಹಣೆ ಖಾಸಗಿಯವರಿಗೆ ವಹಿಸುವ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್ ಠಾಕ್ರೆ ಈಟಿವಿ ಭಾರತಕ್ಕೆ ದೂರವಾಣಿ ಕರೆ ಮೂಲಕ ಸ್ಪಷ್ಟಪಡಿಸಿದ್ದಾರೆ.

ಓದಿ: ಮೈಸೂರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ.. ಆರೋಪಿಗಳ ಬಂಧನಕ್ಕೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.