ETV Bharat / state

ಗುರು-ಶಿಷ್ಯನ ಮಧ್ಯೆ ನೇರಾನೇರ ಫೈಟ್: ಯಾರಾಗುತ್ತಾರೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಧಿಪತಿ?

author img

By

Published : May 7, 2023, 5:12 PM IST

Updated : May 7, 2023, 6:36 PM IST

ಈ ಬಾರಿಯ ಚುನಾವಣೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಜಗದೀಶ್​​​ ಶೆಟ್ಟರ್​​ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದ್ದು, ಮತದಾರರು ಬಿಜೆಪಿ ತತ್ವ, ಸಿದ್ಧಾಂತಗಳಿಗೆ ಮತ ಹಾಕುತ್ತಾರಾ ಅಥವಾ ಶೆಟ್ಟರ್ ಅವರ ವೈಯಕ್ತಿಕ ವರ್ಚಸ್ಸಿಗೆ ಮತ ನೀಡುತ್ತಾರಾ ಎಂಬದನ್ನು ಕಾದು ನೋಡಬೇಕಿದೆ.

hubballi-dharwad-central-constituency
ಬಿಜೆಪಿ, ಜಗದೀಶ್ ಶೆಟ್ಟರ್ ‌ನಡುವೆ ನೇರ ಫೈಟ್: ಯಾರಗುತ್ತಾರೆ ಸೆಂಟ್ರಲ್ ಕ್ಷೇತ್ರದ ಅಧಿಪತಿ...!

ಗುರು-ಶಿಷ್ಯನ ಮಧ್ಯೆ ನೇರಾನೇರ ಫೈಟ್: ಯಾರಾಗುತ್ತಾರೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಧಿಪತಿ?

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ರಾಜ್ಯ, ರಾಷ್ಟ್ರ ಗಮನ ಸೆಳೆದಿದೆ. ಈ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲ್ಲುವುದು ಯಾರು? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಒಂದು ಕಡೆ ಶೆಟ್ಟರ್ ಸೋಲಿಸಲು ಬಿಜೆಪಿ ಪಣತೊಟ್ಟು ನಿಂತರೆ, ಇತ್ತ ಕಾಂಗ್ರೆಸ್ ಮತ್ತು ಜಹದೀಶ್​​ ಶೆಟ್ಟರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಈ ಬಾರಿಯ ಚುನಾವಣೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಜಗದೀಶ್ ಶೆಟ್ಟರ್, ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಮತ್ತು ಜೆಡಿಎಸ್‌ನಿಂದ ಸಿದ್ದಲಿಂಗೇಶ್ವರ ಗೌಡ ಮಹಾಂತ ಒಡೆಯರ್ ಅಭ್ಯರ್ಥಿಗಳಾಗಿದ್ದಾರೆ. ಚುನಾವಣೆಯಲ್ಲಿ ನೇರಾನೇರ ಫೈಟ್‌ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇದೆ. ಆದರೆ, ಇಲ್ಲಿ ಕಾಂಗ್ರೆಸ್ ನೆಪ ಮಾತ್ರ. ನೇರವಾದ ಸ್ಪರ್ಧೆ ಜಗದೀಶ್ ಶೆಟ್ಟರ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ಮಾತ್ರ.

ಕ್ಷೇತ್ರದಲ್ಲಿ 1994 ರಿಂದ 2018ರ ತನಕ 6 ಚುನಾವಣೆಯನ್ನು ಗೆದ್ದಿರುವ ಜಗದೀಶ್ ಶೆಟ್ಟರ್‌ಗೆ ಇದು ಇಲ್ಲಿ ಏಳನೇ ಚುನಾವಣೆ. ಆದರೆ, ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಲ್ಲ ಎಂಬುದು ಗಮನಿಸಬೇಕಾದ ಅಂಶ. ಬಿಜೆಪಿ ಜಗದೀಶ್‌ ಶೆಟ್ಟರ್‌ಗೆ ಟಿಕೆಟ್ ನೀಡುವುದಿಲ್ಲ ಎಂದು ಘೋಷಣೆ ಕೂಗಿದಾಗ ಅವರು ಸಿಡಿದೆದ್ದರು. ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.

ಈಗ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಎರಡು ಭಾಗವಾಗಿದೆ. ಒಂದು ಭಾಗ ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತ ನಂಬಿದ ಜನರು. ಮತ್ತೊಂದು ಶೆಟ್ಟರ್​​ಗೆ ಅನ್ಯಾಯವಾಗಿದೆ ಎಂಬ ಟೀಂ. ಬಿಜೆಪಿ ಜಗದೀಶ್‌ ಶೆಟ್ಟರ್‌ಗೆ ಎಷ್ಟು ಅವಕಾಶ ನೀಡಿದೆ. ಕೆಲಸ ಮಾಡಲು ಹಲವು ಸ್ಥಾನಮಾನಗಳನ್ನು ನೀಡಿತ್ತು. ಆದರೆ, ಕೇವಲ ಟಿಕೆಟ್ ವಿಚಾರ ಮುಂದಿಟ್ಟುಕೊಂಡು, ರಾಷ್ಟ್ರ ನಾಯಕರು ಮನೆಗೆ ಬಂದರೂ ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿದರಲ್ಲ ಎಂಬುದು ಒಂದು ಗುಂಪಿನ ಬೇಸರಕ್ಕೆ ಕಾರಣವಾಗಿದೆ.

ಇನ್ನು, ಮತ್ತೊಂದು ಗುಂಪು ವೈಯಕ್ತಿಕವಾಗಿ ಜಗದೀಶ್ ಶೆಟ್ಟರ್ ಬೆಂಬಲಿಸುವ ಗುಂಪು. ಅವರು ಯಾವುದೇ ಪಕ್ಷದಲ್ಲಿ ಇರಲಿ, ಅವರ ಸರಳತೆ ಸದಾ ಜನರ ಕೈಗೆ ಸಿಗುವ ರೀತಿ, ಮಾಡಿರುವ ಕೆಲಸ ನಂಬಿ ಅವರನ್ನು ಬೆಂಬಲಿಸುವುದು. ಅಲ್ಲದೇ ಶೆಟ್ಟರ್ ಅಂತಹ ಹಿರಿಯ ನಾಯಕರಿಗೆ ಬಿಜೆಪಿ ನಾಯಕರು ಟಿಕೆಟ್ ಕೊಡದೇ ಇಂತಹ ಅನ್ಯಾಯ ಮಾಡಿದರಲ್ಲ ಎಂದು ಅನುಕಂಪ ಹೊಂದಿರುವ ಗುಂಪು ಇದೆ.

ಯುವ ಮತದಾರರ ಒಲವು ಮಹೇಶ ಟೆಂಗಿನಕಾಯಿ ಕಡೆ ಇದೆ. ಉತ್ತಮ ವಾಗ್ಮಿ ಹಾಗೂ ಸ್ನೇಹ ಜೀವಿಯಾಗಿರುವ ಮಹೇಶ ಟೆಂಗಿನಕಾಯಿಗೆ ಒಂದು ಅವಕಾಶ ನೀಡಬೇಕು ಎಂಬುದು ಯುವ ಮತದಾರರ ಅನಿಸಿಕೆಯಾಗಿದೆ. ಆದರೆ ಕೆಲವರು ಹಿರಿಯರಾದ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣವಿಲ್ಲದೆ ಜಗದೀಶ್ ಶೆಟ್ಟರ್​​​ಗೆ ಟಿಕೆಟ್ ಕೈ ತಪ್ಪಿಸಿದ್ದು ತಪ್ಪು ಎಂದು ವಾದಿಸುತ್ತಿದ್ದಾರೆ. ಇದು ಜಗದೀಶ್ ಶೆಟ್ಟರ್ ಮೇಲೆ ಅನುಕಂಪದ ಅಲೆಯನ್ನು ಎಬ್ಬಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಹೋರಾಟಕ್ಕೆ ಅಣಿಯಾಗಿದೆ.

ಶೆಟ್ಟರ್‌ ಸೋಲಿಸಲು ಬಿಜೆಪಿ ನಾಯಕರ ದಂಡು: ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರಬಹುದು. ಆದರೆ, ಇಲ್ಲಿ ಜಗದೀಶ್ ಶೆಟ್ಟರ್ ವರ್ಸಸ್‌ ಬಿಜೆಪಿ ಎಂಬುದು ಎಲ್ಲರ ಲೆಕ್ಕಾಚಾರ. ಜಗದೀಶ್ ಶೆಟ್ಟರ್ ಸೋಲಿಸಬೇಕು ಎಂದು ರಾಷ್ಟ್ರೀಯ ನಾಯಕರು ಸೂಚನೆ ನೀಡಿದ್ದಾರೆ. ಬಿಎಲ್ ಸಂತೋಷ್, ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಅಮಿತ್ ಶಾ, ಜೆಪಿ ನಡ್ಡಾ ಮುಂತಾದ ನಾಯಕರ ದಂಡೇ ಶೆಟ್ಟರ್ ಸೋಲಿಸಲು ತಂತ್ರ ರೂಪಿಸುತ್ತಿದೆ. ಅದಕ್ಕಾಗಿಯೇ ವೈಯಕ್ತಿಕ ಪ್ರತಿಷ್ಠೆಯೂ ಚುನಾವಣಾ ಫಲಿತಾಂಶದಲ್ಲಿ ಅಡಗಿದೆ.

ಲಿಂಗಾಯತ, ಮುಸ್ಲಿಂ ಮತಗಳು ನಿರ್ಣಾಯಕ: ಅಂದಾಜು 2,42,736 ಮತದಾರರು ಕ್ಷೇತ್ರದಲ್ಲಿದ್ದಾರೆ. ವಿವಿಧ ಪಂಗಡಗಳು ಸೇರಿ ಸುಮಾರು 70 ಸಾವಿರ ಲಿಂಗಾಯತ ಮತಗಳು. ಅಂದಾಜು 40 ಸಾವಿರ ಮುಸ್ಲಿಮರ ಮತಗಳಿವೆ. ಎಸ್‌ಸಿ-ಎಸ್‌ಟಿ 35 ಸಾವಿರ, ಬ್ರಾಹ್ಮಣರು 26 ಸಾವಿರ ಇದ್ದು, ಜಗದೀಶ್ ಶೆಟ್ಟರ್ ಅವರ ವೈಯಕ್ತಿಕ ವರ್ಚಸ್ಸಿನ ಮತಗಳು, ಕಾಂಗ್ರೆಸ್‌ ಬೆಂಬಲಿಸುವ ಮುಸ್ಲಿಮರ ಮತಗಳು ಮತ್ತು ಬಹು ಸಂಖ್ಯಾತ ಲಿಂಗಾಯತರು ಶೆಟ್ಟರ್‌ ಅವರನ್ನು ಬೆಂಬಲಿಸಿದರೆ ಜಗದೀಶ್‌ ಶೆಟ್ಟರ್ ಗೆಲುವು ಸುಲಭವಾಗಲಿದೆ.

1999 ರಿಂದ 2018ರ ತನಕ ಜಗದೀಶ್ ಶೆಟ್ಟರ್ ಎದುರಾಳಿಯಾದ ಯಾವುದೇ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. 25 ಸಾವಿರ, 26 ಸಾವಿರ, 17 ಸಾವಿರ, 21 ಸಾವಿರ ಮತಗಳ ಅಂತರದಲ್ಲಿ ಜಗದೀಶ್ ಶೆಟ್ಟರ್ ಗೆದ್ದು ಬಂದಿದ್ದಾರೆ. ಈ ಗೆಲುವಿಗೆ ಶೆಟ್ಟರ್ ಅವರ ವೈಯಕ್ತಿಕ ವರ್ಚಸ್ಸು ಕಾರಣವಾ ಅಥವಾ ಬಿಜೆಪಿ ಸಂಘ ಪರಿವಾರ ಕಾರಣ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕು.

ಆದರೆ ಕ್ಷೇತ್ರದಲ್ಲಿ ಹೊಸ ಮುಖ ಹಾಗೂ ಸಂಘಟನಾ ಚತುರ ಎಂದು ಖ್ಯಾತ ಗಳಿಸಿರುವ ಮಹೇಶ ಟೆಂಗಿನಕಾಯಿಯೂ ಕೂಡ ಜಗದೀಶ್ ಶೆಟ್ಟರ್ ಅವರಿಗೆ ವೈಯಕ್ತಿಕವಾಗಿ ಟಫ್ ಫೈಟ್ ನೀಡುತ್ತಿದ್ದಾರೆ. ಗಟ್ಟಿಯಾದ ಬಿಜೆಪಿ ಕಾರ್ಯಕರ್ತರೆ ಬಿಜೆಪಿಗೆ ಆಸರೆಯಾಗಿದ್ದಾರೆ. ಆದರೆ ಜಯದ ಮಾಲೆ ಯಾರಿಗೂ ಸುಲಭವಿಲ್ಲ. ಮತದಾರರು ಯಾರಿಗೆ ಅಭಯ ನೀಡುತ್ತಾರೋ ಅವರೇ ಸೆಂಟ್ರಲ್ ಕ್ಷೇತ್ರದ ಅಧಿಪತಿಯಾಗಲಿದ್ದಾರೆ.

ಇದನ್ನೂ ಓದಿ: ನವಲಗುಂದ ಕ್ಷೇತ್ರದಲ್ಲಿ 'ಧಮ್ ಪಾಲಿಟಿಕ್ಸ್': ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ವಾಕ್ಸಮರ

Last Updated : May 7, 2023, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.