ಹುಬ್ಬಳ್ಳಿ: ಅವಳಿ ನಗರದಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದ್ದು, ಜನರನ್ನ ಆತಂಕಕ್ಕೀಡುಮಾಡಿದೆ.
ಹೌದು, ಕಳೆದ ತಿಂಗಳಲ್ಲಿ ಸುರಿದ ಮಳೆಗೆ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದೆಷ್ಟೋ ಕುಟುಂಬಗಳು ಬೀದಿಗೆ ಬಂದವು. ಅನಂತರ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ಕೊಟ್ಟಿತ್ತಾದರೂ ಮತ್ತೆ ಇದೀಗ ಮಳೆ ಸುರಿಯುತ್ತಿದ್ದು, ಇದರಿಂದ ಮತ್ತೆ ಜನತೆ ಆತಂಕಕ್ಕೀಡಾಗಿದ್ದಾರೆ.
ಇನ್ನು ರೈತನ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಹಿಂಗಾರು ಬೆಳೆಗಳಾದರೂ ಬರುವ ನೀರಿಕ್ಷೆಯಲ್ಲಿ ಹೊಲಗಳನ್ನು ಮತ್ತೆ ಹದಗೊಳಿಸಲು ಮುಂದಾಗಿದ್ದರು. ಆದರೆ, ಮತ್ತೆ ಕಳೆದ ಎರಡು ಮೂರು ದಿನಗಳಿಂದ ಅಗೊಮ್ಮೆ ಇಗೊಮ್ಮೆ ಸುರಿಯುತ್ತಿರುವ ಮಳೆಯಿಂದ ರೈತರು ಕಂಗಾಲಾಗಿದ್ದು, ಬಿಸಿಲು ಬಿದ್ರೆ ಮಾತ್ರ ಬೆಳೆಗಳು ಉಳಿಯಲು ಸಾಧ್ಯ. ಇಲ್ಲವಾದ್ರೆ ಯಾವುದೇ ಬೆಳೆಗಳು ನಮ್ಮ ಕೈಗೆ ಸಿಗುವುದಿಲ್ಲ ಎಂದು ಗೊಣಗಾಡುತ್ತಿದ್ದಾರೆ.