ETV Bharat / state

ಮಳೆರಾಯನ ಅಬ್ಬರಕ್ಕೆ ಹುಬ್ಬಳ್ಳಿ ತತ್ತರ: ವಿದ್ಯಾನಗರದಲ್ಲಿ ತಪ್ಪಿದ ಭಾರಿ ಅನಾಹುತ - ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮಳೆಯಿಂದ ತಪ್ಪಿದ ಭಾರೀ ಅನಾಹುತ

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮಳೆಯಿಂದ ವಿದ್ಯುತ್ ಕಂಬಕ್ಕೆ ತಗುಲಿದ ಮರಗಳಿಂದ ಕೆಲಕಾಲ ಕಾಂಪೌಂಡ್​ ಹಾಗೂ ಮರಗಳಲ್ಲಿ ವಿದ್ಯುತ್ ಪ್ರವಹಿಸಿದ್ದು, ಜನರು ಆತಂಕಗೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

author img

By

Published : May 4, 2022, 8:08 PM IST

Updated : May 4, 2022, 9:07 PM IST

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯಾನಗರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿಯಾಗಿದ್ದು, ಸಂಭವಿಸಬಹುದಾದ ದೊಡ್ಡಮಟ್ಟದ ಅನಾಹುತ ತಪ್ಪಿದಂತಾಗಿದೆ.

ವಿದ್ಯಾನಗರದಲ್ಲಿ ಮಳೆಯಿಂದ ವಿದ್ಯುತ್ ಕಂಬಕ್ಕೆ ಕರೆಂಟ್​ ತಗುಲಿದ ಮರಗಳಿಂದ ಕೆಲಕಾಲ ಕಾಂಪೌಂಡ್​ ಹಾಗೂ ಮರಗಳಲ್ಲಿ ವಿದ್ಯುತ್ ಪ್ರವಹಿಸಿದ್ದು, ಜನರು ಆತಂಕಗೊಂಡಿದ್ದಾರೆ. ಧಾರಾಕಾರ ಮಳೆಗೆ ಕೆಲವು ಮನೆಯ ಮೇಲ್ಛಾವಣಿ ಕುಸಿದಿದ್ದು, ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೇ ಅಕಾಲಿಕ ಮಳೆಗೆ ಜನರು ಆತಂಕಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಳೆರಾಯನ ಅಬ್ಬರಕ್ಕೆ ಹುಬ್ಬಳ್ಳಿ ಜನ ತತ್ತರ: ವಿದ್ಯಾನಗರದಲ್ಲಿ ತಪ್ಪಿದ ಭಾರೀ ಅನಾಹುತ

ಇದನ್ನೂ ಓದಿ: ಮೇ 20ರಂದು ಒಟಿಟಿಗೆ ಆರ್​ಆರ್​ಆರ್​ ಸಿನಿಮಾ : ಆದರೆ..?

ಧರೆಗೆ ಉರುಳಿದ ಮರ: ರೋಟರಿ ಸ್ಕೂಲ್ ಗೇಟ್ ಬಳಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ದೇಶಪಾಂಡೆ ನಗರದ ರೋಟರಿ ಸ್ಕೂಲ್​ಗೆ ಹೋಗುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಮೂಲಕ ಬೇಸಿಗೆಯ ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದ ವಾಣಿಜ್ಯ ನಗರಿಯ ಜನಕ್ಕೆ ವರುಣ ತಂಪೆರೆದಿದ್ದಾನೆ.

ಕಾರಿನ ಮೇಲೆ ಬಿದ್ದ ಮರ
ಕಾರಿನ ಮೇಲೆ ಬಿದ್ದ ಮರ

ಕಾರಿನ ಮೇಲೆ ಬಿದ್ದ ಮರ: ತತ್ವದರ್ಶ ಆಸ್ಪತ್ರೆ ರಸ್ತೆಯ ವಿಟಮಿನ್ಸ್ ಎಸ್ ಹೋಟೆಲ್ ಎದುರಿಗೆ ಬಿರುಗಾಳಿ ಸಹಿತ ಮಳೆಗೆ ಕಾರ್​ ಮೇಲೆ ಬಿದ್ದಿದೆ. ಪರಿಣಾಮ ಕಾರು ಜಖಂ ಆಗಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಕಾರು ಸಂಚರಿಸುತ್ತಿದ್ದಾಗಲೇ ಮರ ಬಿದ್ದಿದೆ.

Last Updated : May 4, 2022, 9:07 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.