ಧಾರವಾಡ: ಕೊರೊನಾ ಸೋಂಕಿನ ಅಟ್ಟಹಾಸದ ಹಿನ್ನೆಲೆ ಧಾರವಾಡದ ಪತ್ರಕರ್ತರಿಗೂ ಆರೋಗ್ಯ ತಪಾಸಣೆ ಮಾಡಲಾಯಿತು.
![Health check of journalists due to corona virus in Dharwad](https://etvbharatimages.akamaized.net/etvbharat/prod-images/kn-dwd-4-journalist-health-check-av-ka10001_23042020180027_2304f_1587645027_702.jpg)
ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರತ್ಯೇಕ ಕೊವೀಡ್-19 ಪ್ರಯೋಗಾಲಯದಲ್ಲಿ ವಿದ್ಯುನ್ಮಾನ, ಮುದ್ರಣ ಹಾಗೂ ವೆಬ್ ಮಾಧ್ಯಮದವರನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಈಚೆಗೆ ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಸೋಂಕು ತಗುಲಿದ್ದು, ಮಾಧ್ಯಮ ಕ್ಷೇತ್ರ ಬೆಚ್ಚಿಬೀಳುವಂತೆ ಮಾಡಿತ್ತು.
ಈ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದ್ದರು. ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಪತ್ರಕರ್ತರು, ಛಾಯಾಗ್ರಾಹಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.