ETV Bharat / state

ಬಿಜೆಪಿ ಜನಾಶೀರ್ವಾದ ಯಾತ್ರೆ ಹಾರ-ತುರಾಯಿಗೆ ಮಾತ್ರ ಸೀಮಿತ : ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

author img

By

Published : Aug 23, 2021, 4:04 PM IST

ಈದ್ಗಾ ಮೈದಾನದ ದೊಡ್ಡ ಸಮಸ್ಯೆಯನ್ನ ಬಗೆಹರಿಸಿದ್ದೆ ಜೆಡಿಎಸ್, ಸಿಎಂ ಆದ ಮೇಲೆ ನಾನು ನೀಡಿದ ಅನುದಾನವನ್ನ ಈಗ ಅದರಲ್ಲೇ ಕಡಿತ ಮಾಡಿದ್ದಾರೆ. ಆ ರೀತಿ ನಾನು ಯಾವತ್ತು ಮಾಡಿಲ್ಲ. ಮಹದಾಯಿಗೆ ನಾನು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗ್ತೀನಿ. 14 ತಿಂಗಳಲ್ಲಿ 24 ಸಾವಿರ ಕೋಟಿ ಹೊಂದಿಸಿ ಕೊಟ್ಟಿದ್ದೇವೆ. ಸಾಲ ಮನ್ನಾ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಬಂದಿದೆ. ನಾವು ಘೋಷಣೆಗೆ ಮಾತ್ರ ಸೀಮಿತವಾಗಲ್ಲ. ಕಾಂಗ್ರೆಸ್ ನಾಯಕರ ಒತ್ತಡದ ನಡುವೆಯೇ ನಾನು ಏನೇನು ನೀಡಿದ್ದೇನೆ ಅವರನ್ನೇ ಕೇಳಿ. ನಂಬಿಕೆ ವಿಶ್ವಾಸದ ಮೇಲೆ ಸರ್ಕಾರ ಆಗುತ್ತೆ..

h-d-kumaraswamy
ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ

ಹುಬ್ಬಳ್ಳಿ : ಬಿಜೆಪಿ ಕೇಂದ್ರ ನಾಯಕರು ಕೈಗೊಂಡಿರುವ ಜನಾರ್ಶೀವಾದ ಯಾತ್ರೆಯಲ್ಲಿ ಯಾವುದೇ ಸಂದೇಶವಿಲ್ಲ. ಅವರ ಆ ಯಾತ್ರೆ ಕೇವಲ ಹಾರ- ತುರಾಯಿ, ನಾಡ ಬಂದೂಕಿನ ಗುಂಡು ಹಾರಿಸುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಬಿಜೆಪಿ ಜನಾಶೀರ್ವಾದ ಯಾತ್ರೆಯನ್ನ ಲೇವಡಿ ಮಾಡಿದ ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಹಲವು ಕಡೆಗಳಲ್ಲಿ ಕೇಂದ್ರ ಬಿಜೆಪಿಯವರು ನಡೆಸುತ್ತಿರುವ ಜನಾರ್ಶೀವಾದ ಯಾತ್ರೆಯಲ್ಲಿ ಗುಂಡು ಹಾರಿಸಿ ಸ್ಥಳೀಯ ನಾಯಕರು ಸ್ವಾಗತ ಮಾಡಿದ್ದಾರೆ.

ಈ ಕುರಿತು ಜನಾರ್ಶೀವಾದ ಮಾಡಲು ಬಂದ ನಾಯಕರೇ ಅದನ್ನು ತಪ್ಪಾಗಿದೆ ಎಂದಿದ್ದಾರೆ. ಇದರಲ್ಲಿಯೇ ಅರ್ಥವಾಗುತ್ತದೆ ಯಾತ್ರೆಯಲ್ಲಿ ಯಾವ ರೀತಿಯ ಸಂದೇಶವಿದೆ ಎಂಬುದು ಎಂದು ಕುಟುಕಿದರು.

ಬಹಳ ದಿನಗಳ ನಂತರ ಪ್ರವಾಸ

ಬಹಳ ತಿಂಗಳ ನಂತರ ಹುಬ್ಬಳ್ಳಿಗೆ ಬಂದಿದ್ದೇನೆ. ಕಳೆದ ಹಲವು ದಿನಗಳಿಂದ ನಾನು ರಾಜ್ಯ ಪ್ರವಾಸ ಮಾಡಿಲ್ಲ. ಕಳೆದ ಒಂದು ವರ್ಷದಲ್ಲಿ ನನ್ನ ರಾಜಕೀಯ ಚಟುವಟಿಕೆ ನಿರಂತರ ನಡೆಯುತ್ತಿದೆ. ನಾನು ಯಾವ ಕಾರಣಕ್ಕೆ ಪ್ರವಾಸ ಮಾಡಿಲ್ಲ ಅನ್ನೋದು ನಿಮಗೂ ಗೊತ್ತಿದೆ. ಕೋವಿಡ್​ನಿಂದಾಗಿ ಹಲವಾರು ಜನ ಮೃತಪಟ್ಟಿದ್ದಾರೆ. ನಾವೇ ನಿಯಮಗಳನ್ನು ಮಾಡಿದ್ರೂ, ಅವುಗಳನ್ನು ನಾವೇ ಬ್ರೇಕ್ ಮಾಡಿದ್ದೇವೆ. ಕೋವಿಡ್ ನಿರ್ವಹಣೆಯಲ್ಲಿ ಎಷ್ಟು ಕೆಲಸ ಮಾಡಿದ್ದೇವೆ ಅನ್ನೋದನ್ನ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.‌

ರಾಜ್ಯ ಪ್ರವಾಸ ಮಾಡದಿರೋದಕ್ಕೆ ಕಾರಣ ಹೇಳಿದ ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ

ಪಾಲಿಕೆ ಚುನಾವಣೆಗೆ ಆಕ್ಷೇಪ

ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಆಗಿದೆ. ಪ್ರಚಾರದ ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಕೋವಿಡ್ 3ನೇ ಅಲೆಗೆ ನಾವೇ ದಾರಿ ಮಾಡಿ ಕೊಡುತ್ತಿದ್ದೇವೆ ಎಂದರು.

ಪಾಲಿಕೆ ಚುನಾವಣೆ : ಹೊರಟ್ಟಿ ಸ್ಥಾನ ಕೋನರೆಡ್ಡಿ ತುಂಬಿದ್ದಾರೆ

ಬಸವರಾಜ ಹೊರಟ್ಟಿ ಅವರು ಈಗ ವಿಧಾನ ಪರಿಷತ್ ಸಭಾಪತಿ ಆಗಿದ್ದಾರೆ. ಆದ್ರೆ, ಈಗ ಕೋನರೆಡ್ಡಿಯವರೇ ಅವರ ಸ್ಥಾನ ತುಂಬಿದ್ದಾರೆ. ಉತ್ತಮವಾದ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದಾರೆ. ಬೆಳಗಾವಿ ನಗರದಲ್ಲಿ ನಮಗೆ ಹಿನ್ನಡೆ ಇದೆ. 55ರಲ್ಲಿ 22 ಸ್ಥಾನಗಳನ್ನ ನೇಮಿಸಲಾಗಿದೆ. 55 ಜನರ ಪಟ್ಟಿ ಬಿಡುಗಡೆಯಾಗಿದೆ.

ಮೊದಲಿಂದಲೂ ನಮಗೆ ಅಷ್ಟೊಂದು ದೊಡ್ಡ ಶಕ್ತಿ ಈ ಭಾಗದಲ್ಲಿ ಇಲ್ಲ. ನಾನು ಸಿಎಂ ಇದ್ದಾಗ ಶಿರಹಟ್ಟಿ ಭಾಗದಲ್ಲಿ ಹಲವಾರು ಕಾರ್ಯಕ್ಕೆ ಚಾಲನೆ ಕೊಟ್ಟಿದ್ದೆ. ಬಜೆಟ್ ನಲ್ಲಿ 10 ಕೋಟಿ ಮೀಸಲಿಟ್ಟಿದ್ದೆ. ರೈತರಿಗೆ ಸಾಲ ಮನ್ನಾ ಮಾಡಿದ್ದೆ ಅನ್ನೋದಕ್ಕೆ ಮಾತ್ರ ಸೀಮಿತವಾಗಿಲ್ಲ. ನಾನು ಯಾವುದೇ ಭೇದ ಭಾವ ಇಲ್ಲದೆ ಕೆಲಸ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ವಿರುದ್ದ ಗುಡುಗಿದ ಕುಮಾರಸ್ವಾಮಿ..

2014ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ನಡುಗೆ ಅಂತಾ ಪಾದಯಾತ್ರೆ ಮಾಡಿದ್ರು. ಆದ್ರೆ, ಅದು ಕಾಂಗ್ರೆಸ್ ನಡೆ ಆಂಧ್ರ ಕಡೆ ಅಂತಾ ನಾನು ಆಗಲೇ ಪ್ರಶ್ನೆ ಮಾಡಿದ್ದೆ. ಕಾವೇರಿಯ ನದಿ ನೀರಿನ ಹಂಚಿಕೆ ಇದ್ದಾಗಲೇ, ಗೆಜೆಟ್ ನೋಟಿಫಿಕೇಶನ್​ನ ಇದೇ ಪ್ರಧಾನಿ ಮೋದಿ ಮಾಡಿದ್ರು. ಮಹದಾಯಿ ತೀರ್ಪು ತಡೆ ಹಿಡಿದಿದ್ದು, ಕೇಂದ್ರ ಸರ್ಕಾರ ದ್ರೋಹ ಮಾಡಿದೆ.

ಮಹದಾಯಿ ವಿವಾದದಲ್ಲಿ ರಾಜ್ಯಕ್ಕೆ ಕೇಂದ್ರ ದ್ರೋಹ ಮಾಡಿದೆ.. ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ

25 ವರ್ಷಗಳ ಹಿಂದೆ ದೇವೇಗೌಡರು ಪ್ರಧಾನಿ ಇದ್ದಾಗ 200 ಕೋಟಿ ರೂ. ನೀರಾವರಿ ಯೋಜನೆಗೆ ನೀಡಿದ್ರು. ಆಗ ಚಂದ್ರಬಾಬು ನಾಯ್ಡು ಪತ್ರದ ಮೂಲಕ ಬೆಂಬಲ ಹಿಂಪಡೆಯುತ್ತೇವೆ ಅಂತಾ ಬೆದರಿಸಿದ್ದರು. ಆಗ ನಾನೇನು ನಿಮ್ಮನ್ನ ಬೆಂಬಲ ನೀಡಿ ಅಂತಾ ಕೇಳಿಲ್ಲ ಎಂದು ದೇವೇಗೌಡರು ಹೇಳಿದ್ರು. ಕೇಂದ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ಮಾಡಿದ್ದನ್ನ ನೀವೇ ನೆನಪಿಸಿಕೊಳ್ಳಬೇಕು. ಮಹದಾಯಿ ಸೇರಿದಂತೆ ಪ್ರವಾಹಕ್ಕೂ ಹೆಚ್ಚಿನ ಅನುಕೂಲ ಮಾಡಿಲ್ಲ ಎಂದರು.

ಈದ್ಗಾ ಮೈದಾನದ ದೊಡ್ಡ ಸಮಸ್ಯೆಯನ್ನ ಬಗೆಹರಿಸಿದ್ದೆ ಜೆಡಿಎಸ್, ಸಿಎಂ ಆದ ಮೇಲೆ ನಾನು ನೀಡಿದ ಅನುದಾನವನ್ನ ಈಗ ಅದರಲ್ಲೇ ಕಡಿತ ಮಾಡಿದ್ದಾರೆ. ಆ ರೀತಿ ನಾನು ಯಾವತ್ತು ಮಾಡಿಲ್ಲ. ಮಹದಾಯಿಗೆ ನಾನು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗ್ತೀನಿ. 14 ತಿಂಗಳಲ್ಲಿ 24 ಸಾವಿರ ಕೋಟಿ ಹೊಂದಿಸಿ ಕೊಟ್ಟಿದ್ದೇವೆ.

ಸಾಲ ಮನ್ನಾ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಬಂದಿದೆ. ನಾವು ಘೋಷಣೆಗೆ ಮಾತ್ರ ಸೀಮಿತವಾಗಲ್ಲ. ಕಾಂಗ್ರೆಸ್ ನಾಯಕರ ಒತ್ತಡದ ನಡುವೆಯೇ ನಾನು ಏನೇನು ನೀಡಿದ್ದೇನೆ ಅವರನ್ನೇ ಕೇಳಿ. ನಂಬಿಕೆ ವಿಶ್ವಾಸದ ಮೇಲೆ ಸರ್ಕಾರ ಆಗುತ್ತೆ ಎಂದರು.

ಸಿದ್ದರಾಮಯ್ಯ ಈ ಪಕ್ಷವನ್ನ ಮುಗಿಸಬೇಕು ಅಂತಾ ತೀರ್ಮಾನ ಮಾಡಿದ್ದಾರೆ..

ನಿಖಿಲ್ ಮತ್ತು ಪ್ರಜ್ವಲ್ ಇನ್ನು ಟ್ರೈನ್ ಅಪ್ ಆಗಬೇಕಿದೆ. ಟ್ರೈನಿಂಗ್ ಇಲ್ಲದಿದ್ರೂ ಅನುಭವ ಮುಖ್ಯ. ಸಿದ್ದರಾಮಯ್ಯ ಅವರು ನಾನು ಜನತಾ ಪರಿವಾರದವರು ಅಂತಾ ಹೇಳಲಿಲ್ಲ. ಆದರೆ, ಸಿಎಂ ಬಸವರಾಜ ಬೊಮ್ಮಾಯಿಗೆ ಅದರ ಬಗ್ಗೆ ಹಳೆಯ ಅರಿವಿದೆ. ಸಿದ್ದರಾಮಯ್ಯ ಈ ಪಕ್ಷವನ್ನ ಮುಗಿಸಬೇಕು ಅಂತಾ ತೀರ್ಮಾನ ಮಾಡಿದ್ದಾರೆ.

ಇನ್ನು ಮುಂದೆ ಹೊಸ ಮುಖಗಳಿಗೆ ಆದ್ಯತೆ ನೀಡುತ್ತೇನೆ. ನಮಗೆ ಯಾರೂ ಶಾಕ್ ಕೊಡೋಕೆ ಆಗಲ್ಲ. ಜಿ ಟಿ ದೇವೇಗೌಡರದು ಹಳೆ ಕತೆ. ಸುಮಲತಾ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ದೊಡ್ಡವರು ಇದ್ದಾರೆ ಎಂದು ನುಣುಚಿಕೊಂಡರು.

ಓದಿ: ಬಂದೂಕು ಸ್ವಚ್ಛಗೊಳಿಸುತ್ತಿರುವಾಗ ಮಿಸ್ ಫೈರಿಂಗ್: ಕಾನ್ಸ್‌ಟೇಬಲ್ ಸಾವು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.