ETV Bharat / state

ಚಿನ್ನದ ಸರ ಮರಳಿಸಿದ ಬಸ್ ಚಾಲಕ, ನಿರ್ವಾಹಕರಿಗೆ ಸನ್ಮಾನ - hubli Gold chain returned news

ಮನೋಜ್ ಎಂಬುವವರು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ 12 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದರು. ಇದನ್ನು ನೋಡಿದ ಚಾಲಕ ಮತ್ತು ನಿರ್ವಾಹಕ ಚಿನ್ನದ ಸರವನ್ನು ಮೇಲಧಿಕಾರಿಗಳಿಗೆ ಒಪ್ಪಿಸಿದ್ದರು.

ಚಿನ್ನದ ಸರ ಮರಳಿಸಿದ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನ

author img

By

Published : Jan 19, 2021, 9:54 PM IST

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಬೆಲೆ ಬಾಳುವ ಚಿನ್ನದ ಸರವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕರನ್ನು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಗೌರವಿಸಿ ಸನ್ಮಾನಿಸಿದ್ದಾರೆ.

ಅಥಣಿ ಮೂಲದ ನಗರದ ಗೋಕುಲರಸ್ತೆಯ ಡಾಲರ್ಸ್ ಕಾಲೋನಿ ನಿವಾಸಿ ಮನೋಜ್ ಎಂಬುವವರೇ ಕಳೆದುಕೊಂಡಿದ್ದ ಚಿನ್ನದ ಸರ ಮರಳಿ ಪಡೆದ ಅದೃಷ್ಟವಂತ. ಅವರು ಭಾನುವಾರ ಕಾರ್ಯನಿಮಿತ್ತ ಬೆಳಗಾವಿಗೆ ಹೋಗಿದ್ದರು. ಅಲ್ಲಿಂದ ರಾತ್ರಿ ಹುಬ್ಬಳ್ಳಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಇಳಿದು ಮನೆಗೆ ತೆರಳಿದ್ದಾರೆ. ಮರುದಿನ ಬೆಳಗ್ಗೆ ಕತ್ತಿನಲ್ಲಿದ್ದ ಚಿನ್ನದ ಸರ ಕಾಣದಿರುವ ಬಗ್ಗೆ ಅವರ ಪತ್ನಿ ಪ್ರಶ್ನಿಸಿದಾಗಲೇ ಸರ ಕಳೆದಿರುವುದು ಅರಿವಿಗೆ ಬಂದಿದೆ. ಕಳೆದುಕೊಂಡದ್ದು ಸಣ್ಣಪುಟ್ಟ ವಸ್ತುವಲ್ಲ. 12ಗ್ರಾಂ ಚಿನ್ನದ ಸರವೆಂದು ಗಾಬರಿಗೊಂಡ ಅವರು ಕೂಡಲೇ ತಮ್ಮ ಬಸ್ ಟಿಕೆಟ್ ಹಿಡಿದುಕೊಂಡು ಬಸ್ ಡಿಪೋಗೆ ಧಾವಿಸಿದ್ದಾರೆ.

ಇದನ್ನೂ ಓದಿ: ತುಕ್ಕು ಹಿಡಿಯುತ್ತಿದೆ ಹುಬ್ಬಳ್ಳಿ ಗ್ಲಾಸ್ ಹೌಸ್​ನಲ್ಲಿರುವ ಮಕ್ಕಳ ಚುಕುಬುಕು ರೈಲು

ವಾ.ಕ.ಸಾ ಸಂಸ್ಥೆ ಹುಬ್ಬಳ್ಳಿ ವಿಭಾಗದ ಗ್ರಾಮಾಂತರ 3ನೇ ಘಟಕದ ಕೆ.ಎ. 25 ಎಫ್ 3200 ಸಂಖ್ಯೆಯ ತಡೆರಹಿತ ಸಾರಿಗೆ ಬಸ್ಸಿನಲ್ಲಿ ಚಾಲಕರಾಗಿ ಕೆ.ಎಂ. ಹವಾಲ್ದಾರ ಹಾಗೂ ನಿರ್ವಾಹಕರಾಗಿ ಪಿ. ಎಚ್. ಚವ್ಹಾಣ ಬೆಳಗ್ಗೆಯಿಂದ ಹುಬ್ಬಳ್ಳಿ- ಬೆಳಗಾವಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ರಾತ್ರಿ 8ಕ್ಕೆ ಕೊನೆಯ ಟ್ರಿಪ್ಪಿನಲ್ಲಿ ಬೆಳಗಾವಿಯಿಂದ ಹೊರಟು ರಾತ್ರಿ 10ಕ್ಕೆ ಹುಬ್ಬಳ್ಳಿಗೆ ಬಂದಿದ್ದಾರೆ. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲರನ್ನು ಇಳಿಸಿದ್ದಾರೆ. ಬಸ್​ನನ್ನು ಡಿಪೋಗೆ ತೆಗೆದುಕೊಂಡು ಹೋಗುವುದಕ್ಕೆ ಮುನ್ನ ನಿರ್ವಾಹಕ ತನ್ನ ಪಕ್ಕದ ಆಸನದ ಕೆಳಗೆ ಚಿನ್ನದ ಸರ ಇರುವುದನ್ನು ಗಮನಿಸಿದ್ದಾರೆ. ಕೂಡಲೇ ಸಹೋದ್ಯೋಗಿ ಚಾಲಕರಿಗೆ ತಿಳಿಸಿದ್ದಾರೆ. ಇಬ್ಬರೂ ಸೇರಿ ಚಿನ್ನದ ಸರವನ್ನು ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹೀಗಾಗಿ ಕಳೆದುಕೊಂಡಿದ್ದ ಚಿನ್ನದ ಸರ ಮತ್ತೆ ವಾರಸುದಾರರಿಗೆ ಸಿಗಲು ಸಾಧ್ಯವಾಗಿದೆ.

ವಿಭಾಗೀಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮ ಚಿನ್ನದ ಸರವನ್ನು ಚಾಲಕ- ನಿರ್ವಾಹಕರ ಮೂಲಕ ವಾರಸುದಾರರಿಗೆ ಮರಳಿಸಲಾಯಿತು. ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕರನ್ನು ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಚಾಲಕ ಮತ್ತು ನಿರ್ವಾಹಕರ ಪ್ರಾಮಣಿಕತೆ ಇತರರಿಗೆ ಮಾದರಿಯಾಗಿದೆ. ಸಾರ್ವಜನಿಕರ ವಲಯದಲ್ಲಿ ಸಂಸ್ಥೆಯ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಶ್ಲಾಘಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.