ಹುಬ್ಬಳ್ಳಿ: ಗೋವಾ ಸರ್ಕಾರ ಮಹದಾಯಿ ವಿಚಾರದಲ್ಲಿ ಹಲವು ವರ್ಷಗಳಿಂದ ಕ್ಯಾತೆ ತೆಗೆಯುತ್ತಲೇ ಬಂದಿದೆ. ಆದರೆ ಇದೀಗ ಗೋವಾ ಕಾಂಗ್ರೆಸ್ ಪಕ್ಷ ಇದೀಗ ಹೊಸ ವಿಚಾರವಾಗಿ ತಕರಾರು ಮಾಡಿದೆ.
ಗೋವಾ ಮತ್ತು ಹುಬ್ಬಳ್ಳಿ-ಧಾರವಾಡದ ಸಂಪರ್ಕ ಕಲ್ಪಿಸುವ ವಾಸ್ಕೋ ಡಿ ಗಾಮಾ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡುತ್ತಿದೆ. ಹುಬ್ಬಳ್ಳಿಯಿಂದ ಲೋಂಡಾದ ಮೂಲಕ ಗೋವಾಗೆ ತೆರಳುವ ರೈಲುಗಳ ಸಂಚಾರಕ್ಕಾಗಿ ಡಬಲ್ ಟ್ರ್ಯಾಕ್ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಇದಕ್ಕೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಮಾಜಿ ಸಿಎಂ ದಿಗಂಬರ ಕಾಮತ್ ಅವರ ನೇತೃತ್ವದಲ್ಲಿ ಯೋಜನೆ ಕೈಬಿಡಲು ಹೋರಾಟ ನಡೆಸಿದೆ.
ಹುಬ್ಬಳ್ಳಿಯಿಂದ ಹೊರಡುವ ವಾಸ್ಕೋ ಡಿ ಗಾಮಾ ರೈಲು ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಡಬಲ್ ಟ್ರ್ಯಾಕ್ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಹೊಸಪೇಟೆಯಿಂದ ಗೋವಾದವರೆಗೆ ಡಬಲ್ ಟ್ರ್ಯಾಕ್ ನಿರ್ಮಿಸುವುದರಿಂದ ಗೋವಾದ ಪ್ರಮುಖ ಸ್ಥಳಗಳು, ರೈತರ ಜಮೀನುಗಳು ಹಾಗೂ ಪಶ್ಚಿಮ ಘಟ್ಟದ ಪ್ರದೇಶಕ್ಕೂ ಹಾನಿಯಾಗುತ್ತದೆ ಎಂದು ಅರೋಪಿಸಿ ಗೋವಾ ಪ್ರದೇಶ ಕಾಂಗ್ರೆಸ್, ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಪಿ.ಕೆ ಮಿಶ್ರಾ ಅವರನ್ನು ಭೇಟಿ ಮಾಡಿ ದೂರು ನೀಡಿದೆ. ಗೋವಾದ ಮನವಿ ಸ್ವೀಕರಿಸಿದ ಪಿ.ಕೆ.ಮಿಶ್ರಾ, ಇದರ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ.