ಧಾರವಾಡ: ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಕೆಲ ನಿಬಂಧನೆಗಳನ್ನು ಹಾಕಿ ಅವಕಾಶ ಕಲ್ಪಿಸಿಕೊಟ್ಟಿದೆ. ಅದರಂತೆ ಮೂರ್ತಿ ಪ್ರತಿಷ್ಠಾಪಿಸಿ, ನಿಮಜ್ಜನೆ ಮಾಡಲು ಗಣೇಶೋತ್ಸವ ಮಂಡಳಿಯೊಂದು ಮುಂದಾಗಿದೆ.
ಧಾರವಾಡ ಮಾಳಮಡ್ಡಿಯ ವೀರ ಸಾವರ್ಕರ ಗೆಳೆಯರ ಬಳಗ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಯನ್ನು ಮೊದಲು ಮೂರು ದಿನಕ್ಕೆ ನಿಮಜ್ಜನ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಒಂದೇ ದಿನಕ್ಕೆ ನಿಮಜ್ಜನ ಮಾಡುತ್ತಿದೆ. ಸರ್ಕಾರ ಬಾವಿ, ಕೆರೆ ಹಾಗೂ ಹೊಂಡಗಳಲ್ಲಿ ಮೂರ್ತಿ ನಿಮಜ್ಜನ ಮಾಡಬಾರದು ಎಂದು ತಿಳಿಸಿದೆ. ಹಾಗಾಗಿ ವೀರ ಸಾವರ್ಕರ್ ಗೆಳೆಯರ ಬಳಗ ತಮ್ಮ ಮಂಡಳಿಗೆ ಹಾಗೂ ಮಾಳಮಡ್ಡಿ ನಿವಾಸಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕೃತಕ ಬಾವಿಯೊಂದನ್ನು ನಿರ್ಮಿಸಿದೆ.
ಕೃತಕ ಬಾವಿ ನಿರ್ಮಿಸಿ ಅಲ್ಲಿಯೇ ಗಣೇಶ ಮೂರ್ತಿ ನಿಮಜ್ಜನ ಮಾಡಿ ಅಲ್ಲಿ ಉಳಿಯುವ ಮಣ್ಣನ್ನು ಮತ್ತೆ ಮುಂದಿನ ವರ್ಷಕ್ಕೆ ಗಣೇಶ ಮೂರ್ತಿ ತಯಾರಿಸಲು ಕಲಾವಿದರಿಗೆ ನೀಡಲು ಮುಂದಾಗಿದೆ. ಇದರಿಂದ ಪರಿಸರ ಕಾಳಜಿ ಜೊತೆಗೆ ಅರ್ಥಪೂರ್ಣ ಗಣೇಶೋತ್ಸವ ಆಚರಣೆಗೆ ಮಂಡಳಿ ಮುಂದಾಗಿದೆ.