ETV Bharat / state

ಹುಬ್ಬಳ್ಳಿಯಲ್ಲಿ ಈದ್ಗಾ ಗಣಪನಿಗೆ ಸಂಭ್ರಮದ ವಿದಾಯ: ಕುಣಿದು ಕುಪ್ಪಳಿಸಿದ ಕಾರ್ಯಕರ್ತರು - ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣಪತಿ ಇಂದು ಭಕ್ತರಿಂದ ಶಾಂತಿಯುತವಾಗಿ ನಿಮಜ್ಜನಗೊಂಡಿದೆ.

ಹುಬ್ಬಳ್ಳಿಯಲ್ಲಿ ಈದ್ಗಾ ಗಣಪನಿಗೆ ಸಂಭ್ರಮದ ವಿದಾಯ

author img

By

Published : Sep 2, 2022, 7:36 PM IST

ಹುಬ್ಬಳ್ಳಿ: ಹೈಕೋರ್ಟ್​ನಿಂದ ಮಧ್ಯ ರಾತ್ರಿ ಅನುಮತಿ ಪಡೆದು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ನೂತನ ಇತಿಹಾಸ ಬರೆದು ಪ್ರತಿಷ್ಠಾಪನೆಗೊಂಡಿದ್ದ ವಿಘ್ನೇಶನಿಗೆ ಇಂದು ಅದ್ದೂರಿ ನಿಮಜ್ಜನ ಕಾರ್ಯ ನಡೆದಿದೆ. ಸಂಘಟನೆಯ ಶಾಂತಿಯುತ ಹೆಜ್ಜೆ, ಪೊಲೀಸರ ಸರ್ಪಗಾವಲಿನಲ್ಲಿ ನಗರದಲ್ಲಿ ಸವಾರಿ ನಡೆಸಿದ ಗಜಾನನ ನಿರ್ವಿಘ್ನವಾಗಿ ತೆರಳಿದ್ದಾರೆ.

ಹುಬ್ಬಳ್ಳಿಯಲ್ಲಿ ಈದ್ಗಾ ಗಣಪನಿಗೆ ಸಂಭ್ರಮದ ವಿದಾಯ

ಇಡೀ ರಾಜ್ಯದ ತುಂಬಾ ಸುದ್ದಿ‌ ಮಾಡಿ ಹತ್ತಾರು ಸಂಘಟನೆಗಳಿಂದ ಸತತ ಪ್ರತಿಭಟನೆ, ಪರ ಮತ್ತು ವಿರೋಧದಿಂದ ಹೈಕೋರ್ಟ್ ಮೆಟ್ಟಿಲೇರಿ, ಮಧ್ಯ ರಾತ್ರಿಯಲ್ಲಿ ಅನುಮತಿ ಪಡೆದುಕೊಳ್ಳಲಾಗಿತ್ತು. ನಂತರ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡು ನೂತನ ಇತಿಹಾಸ ಬರೆದ ಗಣಪ ಭಕ್ತರಿಂದ ಶಾಂತಿಯುತ, ಅರ್ಥಪೂರ್ಣವಾಗಿ ಮೂರು ದಿನ ಸೇವೆ ಮಾಡಿಸಿಕೊಂಡು, ಇಂದು ನಿಯಮದಂತೆ ನಿಮಜ್ಜನ ಕಾರ್ಯ ಮಾಡಿಸಿಕೊಂಡಿದ್ದಾನೆ. ಐದರಿಂದ ಆರು ತಾಸು ಹುಬ್ಬಳ್ಳಿ ನಗರದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವಿನಾಯಕನನ್ನು ಹಿಂದೂಪರ ಸಂಘಟನೆಗಳು ಕಳುಹಿಸಿಕೊಟ್ಟಿವೆ.

ಗಣಪನಿಗೆ ಸಂಭ್ರಮದ ವಿದಾಯ ಹೇಳಲಾಯಿತು
ಗಣಪನಿಗೆ ಸಂಭ್ರಮದ ವಿದಾಯ ಹೇಳಲಾಯಿತು

ಪಾಲಿಕೆ ನೀಡಿದ ಅನುಮತಿಯ ಕರಾರಿನಂತೆ ಇಂದು ಬೆಳಗ್ಗೆ 12 ಗಂಟೆಗೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕೊನೆ ಗುಡುವಾಗಿತ್ತು. ಪಾಲಿಕೆ ನಿಯಮಕ್ಕೆ ಗೌರವ ಕೊಟ್ಟ ಉತ್ಸವ ಸಮಿತಿ 12ಕ್ಕೆ ಸರಿಯಾಗಿ ಗಣೇಶ ಮೂರ್ತಿಯ ಮೆರವಣಿ ಆರಂಭಿಸಿದರು. ಮೆರವಣಿಗೆಯಲ್ಲಿ ಭಾಗ್ವ ಧ್ವಜಗಳು ರಾರಾಜಿಸಿದವು. ಜೈ ಶ್ರೀರಾಮ ಘೋಷಣೆ, ಗಜಾನನ ಜಯಘೋಷಗಳನ್ನು ಮೊಳಗಿಸಿ, ಸ್ಪೀಕರ್​ಗಳಲ್ಲಿ ಬನಾಯೇಂಗೆ ಮಂದಿರ ಹಾಡು ಹಾಕಿ, ಸಾವಿರಾರು ಹಿಂದೂ ಕಾರ್ಯಕರ್ತರು ಹೆಜ್ಜೆ ಹಾಕಿ ಸಂಭ್ರಮಪಟ್ಟರು.

ಗಣೇಶನಿಗೆ ವಿದಾಯದ ಪೂಜೆ : ಇನ್ನು ಬೃಹತ್ ಗಾತ್ರದ ಗೊಂಬೆಗಳು, ಜಾಂಜ್ ಮೇಳ, ಡೋಲು ವಾದ್ಯಗಳು ಮೆರವಣಿಗೆ ಉದ್ದಕ್ಕೂ ಗಣಪನಿಗೆ ಸಾಥ್ ನೀಡಿದವು.‌ ಇದರ ಜೊತೆಗೆ ಸದ್ಯ ಬಿಸಿ ಬಿಸಿ ಚರ್ಚೆಯಲ್ಲಿರುವ ಸಾವರ್ಕರ್ ಭಾವ ಚಿತ್ರ ಪ್ರದರ್ಶನ ಜೊತೆಗೆ ಅವರ ಜಯಘೋಷವನ್ನು, ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲ ಯುವಕರು ಮಾಡಿದರು. ಇದಕ್ಕೂ ಮೊದಲು ಶ್ರೀರಾಮಸೇನೆಯ ಪರವಾಗಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಗಣೇಶನಿಗೆ ವಿದಾಯದ ಪೂಜೆ ಸಲ್ಲಿಸಿ, ವಾದ್ಯಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪ್ಯಾರಾ ಮಿಲಿಟರಿ ಪಡೆಯ ಶ್ರಮ ಅಪಾರ: ಇನ್ನು ಮೆರವಣಿಗೆಯಲ್ಲಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಜೊತೆಗೆ ಜಿಲ್ಲಾ ಬಿಜೆಪಿ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮರಾಠ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿದವು. ಇನ್ನೂ ಮೂರು ದಿನ ಇಷ್ಟು ಶಾಂತಿ ರೀತಿಯಲ್ಲಿ ಗಣೇಶ ಉತ್ಸವ ನೆರವೇರಲು ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಯ ಶ್ರಮ ಅಪಾರವಾಗಿದೆ.

ಭದ್ರತೆಯಲ್ಲಿ ಸವಾರಿ ನಡೆಸಿದ ಗಣಪತಿ: ಕೊನೆಯ ದಿನವೂ ಮೈದಾನ ಸೇರಿದಂತೆ ಮೆರವಣಿಗೆ ಉದ್ದಕ್ಕೂ ಪೊಲೀಸ್​ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಸವಾರಿ ನಡೆಸಿದ ಗಣಪತಿ, ಇಂದಿರಾ ಗಾಂಧಿ ಗ್ಲಾಸ್‌ ಹೌಸ್ ಉದ್ಯಾನದ ಕೆರೆಯಲ್ಲಿ ನಿಮಜ್ಜನೆಗೊಂಡಿದ್ದಾರೆ. ಒಟ್ಟಿನಲ್ಲಿ ವಿರೋಧದಿಂದ ಇತಿಹಾಸವಾಗಿ ಎಂಟ್ರಿ ನೀಡಿದ ಗಣಪತಿ ಶಾಂತಿಯುತವಾಗಿ ಮರಳಿದ್ದಾರೆಂಬುದು ಸಂತಸದ ವಿಷಯ.

ಓದಿ: ಈದ್ಗಾ ಮೈದಾನದ ಗಣೇಶೋತ್ಸವ ಯಶಸ್ವಿ: ಪ್ರಮೋದ್ ಮುತಾಲಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.