ETV Bharat / state

ಗದಗ ಜಿಲ್ಲೆಯ 75 ಅಂಧ ಮಕ್ಕಳಿಗೆ ಹುಬ್ಬಳ್ಳಿಯಲ್ಲಿ ಪುನರ್ವಸತಿ - ಹುಬ್ಬಳ್ಳಿ ನ್ಯೂಸ್

ಪ್ರವಾಹದಿಂದ ಕಂಗಾಲಾಗಿ ಧಾರವಾಡ ಸೇರಿದ್ದ ಗದಗ ಜಿಲ್ಲೆಯ ಹೊಳೆ ಆಲೂರಿನ ಜ್ಞಾನ ಸಿಂಧು ವಸತಿ ಶಾಲೆಯ 75 ಅಂಧ ಮಕ್ಕಳಿಗೆ ಹುಬ್ಬಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

75 ಅಂಧ ಮಕ್ಕಳಿಗೆ ಹುಬ್ಬಳ್ಳಿಯಲ್ಲಿ ಪುನರ್ವಸತಿ
author img

By

Published : Aug 22, 2019, 5:36 AM IST

ಹುಬ್ಬಳ್ಳಿ: ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹದಿಂದ ನೆಲೆ ಕಳೆದುಕೊಂಡಿದ್ದ ಗದಗ ಜಿಲ್ಲೆಯ ಹೊಳೆ ಆಲೂರಿನ ಜ್ಞಾನ ಸಿಂಧು ವಸತಿ ಶಾಲೆಯ 75 ಅಂಧ ಮಕ್ಕಳಿಗೆ ಹುಬ್ಬಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ಪತ್ರಿಕೆಯಲ್ಲಿ ಬಿತ್ತರವಾದ ವರದಿ ಆಧರಿಸಿ, ಜಿಲ್ಲಾ ವಿಕಲಚೇತನ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯಪ್ರವೃತ್ತರಾಗಿ ಧಾರವಾಡ ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ವಾಸವಾಗಿದ್ದ ಮಕ್ಕಳನ್ನು ಭೇಟಿಯಾದರು. ನಂತರ ಅವರನ್ನು ವಾಹನದಲ್ಲಿ ಹುಬ್ಬಳ್ಳಿಯ ಸರ್ಕಾರಿ ಅಂಧ ಮಕ್ಕಳ ವಸತಿ ಶಾಲೆಗೆ ಕರೆತಂದು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಪುನರ್ವಸತಿ ಕಲ್ಪಿಸಿದ್ದಾರೆ.

75 Blind childrens rehabilitated in Hubli
ಗದಗ ಜಿಲ್ಲೆಯ 75 ಅಂಧ ಮಕ್ಕಳಿಗೆ ಹುಬ್ಬಳ್ಳಿಯಲ್ಲಿ ಪುನರ್ವಸತಿ

ಜ್ಞಾನ ಸಿಂಧು ಸಂಸ್ಥೆಯ ಕಟ್ಟಡವು ಮಕ್ಕಳಿಗೆ ವಾಸಕ್ಕೆ ಯೋಗ್ಯವಾಗುವವರೆಗೂ ಮಕ್ಕಳಿಗೆ ವಸತಿ ಶಾಲೆಯಲ್ಲಿ ಪುನರ್ವಸತಿಯನ್ನು ಮುಂದುವರಿಸಲಾಗುವುದು. ಮಲಪ್ರಭಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದನ್ನು ಅರಿತು ಸಂಸ್ಥೆಯ ಮುಖ್ಯಸ್ಥರಿಗೆ, ಗದಗ ಕರ್ನಾಟಕ ಭವನಕ್ಕೆ ಮಕ್ಕಳನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿತ್ತು.

ಸಂಸ್ಥೆಯ ಮುಖ್ಯಸ್ಥರು ಗದಗ ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡದೆ ಧಾರವಾಡಕ್ಕೆ ಮಕ್ಕಳನ್ನು ಕರೆತಂದಿದ್ದಾರೆ. ದೂರವಾಣಿ ಕರೆಯ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಸಂಸ್ಥೆಯ ಮುಖ್ಯಸ್ಥರ ದೂರವಾಣಿ ಕಾರ್ಯನಿರತವಾಗಿರಲಿಲ್ಲ. ಸಂಸ್ಥೆಗೆ 2016 ರಿಂದ 2019ನೇ ಸಾಲಿನವರೆಗೆ ಇಲಾಖೆಯಿಂದ 60 ಲಕ್ಷ ಅನುದಾನ ನೀಡಲಾಗಿದೆ. ಬಾಕಿ ಇರುವ ಅನುದಾನ ಬಿಡುಗಡೆಗೆ ಸಂಸ್ಥೆಯವರು ಸೂಕ್ತ ದಾಖಲೆಗಳನ್ನು ಕೇಳಿದರು ಇಲಾಖೆ ಒದಗಿಸಿಲ್ಲ. ಸಂಸ್ಥೆಯಲ್ಲಿ ಮಕ್ಕಳಿಗೆ ನೀಡಿರುವ ಮೂಲಭೂತ ಸೌಕರ್ಯ ನಿಯಮಾನುಸಾರ ಇರದಿದ್ದರಿಂದ, ಸೂಕ್ತ ಸೌಕರ್ಯಗಳನ್ನು ನಿರ್ಮಿಸುವಂತೆ ಇಲಾಖೆಯಿಂದ ನಿರ್ದೇಶನ ನೀಡಲಾಗಿತ್ತು, ಎಂದು ಗದಗ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಆಶು ನದಾಫ್ ತಿಳಿಸಿದ್ದಾರೆ.

ಮಕ್ಕಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಅಂಗವಿಕಲ ಸಂಘದ ಅಮರನಾಥ ಸೇರಿದಂತೆ ಇಲಾಖೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

Intro:ಹುಬ್ಬಳ್ಳಿ-06

ಅತಿವೃಷ್ಟಿಯಿಂದ ಮಲಪ್ರಭಾ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ನೆಲೆ ಕಳೆದುಕೊಂಡ, ಗದಗ ಜಿಲ್ಲೆಯ ಹೊಳೆಆಲೂರಿನ ಜ್ಞಾನ ಸಿಂಧು ವಸತಿ ಶಾಲೆಯ 75 ಅಂದ ಮಕ್ಕಳಿಗೆ ಹುಬ್ಬಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. 
ಪತ್ರಿಕೆಯಲ್ಲಿ ಬಿತ್ತರವಾದ ವರದಿ ಆಧರಿಸಿ,  ಜಿಲ್ಲಾ ವಿಕಲಚೇತನ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯಪ್ರವೃತ್ತರಾಗಿ ಧಾರವಾಡ ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ವಾಸವಾಗಿದ್ದ ಮಕ್ಕಳನ್ನು ಭೇಟಿಯಾದರು. ನಂತರ ಅವರನ್ನು ವಾಹನದಲ್ಲಿ ಹುಬ್ಬಳ್ಳಿಯ ಸರ್ಕಾರಿ ಅಂದ ಮಕ್ಕಳ ವಸತಿ ಶಾಲೆಗೆ ಕರೆತಂದು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ಜ್ಞಾನ ಸಿಂಧು ಸಂಸ್ಥೆಯ ಕಟ್ಟಡವು ಮಕ್ಕಳಿಗೆ ವಾಸಯೋಗ್ಯವಾಗುವರೆಗೂ ಮಕ್ಕಳಿಗೆ ವಸತಿ ಶಾಲೆಯಲ್ಲಿ ಪುನರ್ವಸತಿಯನ್ನು ಮುಂದುವರಿಸಲಾಗುವುದು. 

ಮಲಪ್ರಭಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದನ್ನು ಅರಿತು ಸಂಸ್ಥೆಯ ಮುಖ್ಯಸ್ಥರಿಗೆ, ಗದಗ ಕರ್ನಾಟಕ ಭವನಕ್ಕೆ ಮಕ್ಕಳನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿತ್ತು. ಸಂಸ್ಥೆಯ ಮುಖ್ಯಸ್ಥರು ಗದಗ ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡದೆ ಧಾರವಾಡಕ್ಕೆ ಮಕ್ಕಳನ್ನು ಕರೆತಂದಿದ್ದಾರೆ. ದೂರವಾಣಿ ಕರೆಯ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಸಂಸ್ಥೆಯ ಮುಖ್ಯಸ್ಥರ ದೂರವಾಣಿಯ ಕಾರ್ಯನಿರತವಾಗಿರಲಿಲ್ಲ. ಸಂಸ್ಥೆಗೆ 2016 ರಿಂದ 2019 ಸಾಲಿನ ವರೆಗೆ ಇಲಾಖೆಯಿಂದ 60 ಲಕ್ಷ ಅನುದಾನ ನೀಡಲಾಗಿದೆ. ಬಾಕಿ ಇರುವ ಅನುದಾನ ಬಿಡುಗಡೆಗೆ ಸಂಸ್ಥೆಯವರು ಸೂಕ್ತ ದಾಖಲೆಗಳನ್ನು ಕೇಳಿದರು ಇಲಾಖೆ ಒದಗಿಸಿಲ್ಲ. ಸಂಸ್ಥೆಯಲ್ಲಿ ಮಕ್ಕಳಿಗೆ ನೀಡಿರುವ ಮೂಲಭೂತ ಸೌಕರ್ಯ ನಿಯಮಾನುಸಾರ ಇರದಿದರಿಂದ, ಸೂಕ್ತ ಸೌಕರ್ಯಗಳನ್ನು ನಿರ್ಮಿಸುವಂತೆ ಇಲಾಖೆಯಿಂದ ನಿರ್ದೇಶನ ನೀಡಲಾಗಿತ್ತು ಎಂದು ಗದಗ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಆಶು ನದಾಫ್ ತಿಳಿಸಿದ್ದಾರೆ. 

ಮಕ್ಕಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಅಂಗವಿಕಲ ಅಮರನಾಥ ಸೇರಿದಂತೆ ಇಲಾಖೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. Body:H B GaddadConclusion:Hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.