ETV Bharat / state

ಹುಬ್ಬಳ್ಳಿ ಚಾಲಕನಿಂದ ಭಾರತಾಂಬೆ ಪುತ್ರರಿಗೆ ಉಚಿತ ಸೇವೆ... ಏನೀ ಫ್ರೀ ಸರ್ವೀಸ್​

ದೇಶ ಕಾಯುವ ಸೈನಿಕರಿಗೆ ಸೇವೆ ಸಲ್ಲಿಸಬೇಕೆಂಬ ಮಹದಾಸೆಯಿಂದ ಹುಬ್ಬಳ್ಳಿಯ ಚಾಲಕನೊಬ್ಬ ಯೋಧರಿಗೆ ಉಚಿತ ಸೇವೆ ನೀಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾನೆ.

author img

By

Published : Sep 16, 2019, 3:29 PM IST

ಚಾಲಕನಿಂದ ಯೋಧರಿಗೆ ಉಚಿತ ಸೇವೆಅ

ಹುಬ್ಬಳ್ಳಿ: ಕ್ಯಾಬ್​​ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ ಅವರು ಸೈನಿಕರಿಗಾಗಿ ಕಳೆದ ಹಲವು ವರ್ಷಗಳಿಂದ ತಮ್ಮ ವಾಹನದಲ್ಲಿ ಉಚಿತ ಸೇವೆ ನೀಡುತ್ತಿದ್ದಾರೆ.

ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿಯಾಗಿರುವ ರಮೇಶ ಅವರು ಕಳೆದೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಹಲವು ವರ್ಷಗಳಿಂದ ತಮ್ಮ ವಾಹನದಲ್ಲಿ ಸೈನಿಕರಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ. ಭಾರತಾಂಬೆಯ ಸೇವೆ ಸಲ್ಲಿಸುವ ಯೋಧರಿಗೆ ನನ್ನ ಚಿಕ್ಕ ಅಳಿಲು ಸೇವೆ ಇದಯಾಗಿದೆ ಎನ್ನುತ್ತಾರೆ ರಮೇಶ.

ಚಾಲಕನಿಂದ ಯೋಧರಿಗೆ ಉಚಿತ ಸೇವೆ

ತಮ್ಮ ವಾಹನದ ಹಿಂದೆ ಸೈನಿಕರಿಗೆ ಉಚಿತ ಸೇವೆ ಎಂದು ಬರೆಸಿದ್ದು, ಅದರ ಜೊತೆಗೆ ಅವರ ದೂರವಾಣಿ ಸಂಖ್ಯೆ ಕೂಡ ನಮೂದಿಸಿದ್ದಾರೆ. ಸೈನಿಕರು ಯಾವುದೇ ಸಮಯದಲ್ಲಿ ಕೂಡ ಕರೆ ಮಾಡಿ ಉಚಿತ ವಾಹನ ಸೇವೆಯನ್ನು ಪಡೆಯಬಹುದಾಗಿದೆ.

ವಿಮಾನ ನಿಲ್ದಾಣದಲ್ಲಿ ವಾಹನವನ್ನು ನೋಡಿ ಸೈನಿಕರು ಕೇಳಲು ಹಿಂದೇಟು ಹಾಕುತ್ತಾರೆ. ಸ್ವತಃ ರಮೇಶ ಅವರೇ ಹೋಗಿ ಸೈನಿಕರನ್ನು ಕರೆತಂದು ಉಚಿತ ವಾಹನ ಸೇವೆ ನೀಡುತ್ತಾರೆ. ಸೈನಿಕರು ಯಾವುದೇ ಸಂದರ್ಭದಲ್ಲಾದ್ರು ಕೂಡ ಅವರ ವಾಹನದ ಸೇವೆ ಪಡೆಯಬಹುದು.

Intro:ಹುಬ್ಬಳ್ಳಿ-03

ದೇಶ ಕಾಯುವ ಸೈನಿಕರಿಗೆ ಸೇವೆ ಸಲ್ಲಿಸುವ ಎಂಬ ಮಹದಾಸೆಯಿಂದ ಚಾಲಕನೊಬ್ಬ ವಿಶಿಷ್ಟವಾದ ರೀತಿಯಲ್ಲಿ ತನ್ನ ವಾಹನವನ್ನು ದೇಶ ಕಾಯುವ ಯೋಧರಿಗೆ ಉಚಿತ ಸೇವೆ ನೀಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾನೆ.

ಹೌದು.
ಸೈನಿಕರಿಗಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಇವರ ಹೆಸರು
ರಮೇಶ ಮುಖಿ. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿಯಾಗಿರುವ ರಮೇಶ ಕಳೆದೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ತಮ್ಮ ವಾಹನದಲ್ಲಿ ಸೈನಿಕರಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ. ತಮ್ಮ ವಾಹನದ ಹಿಂದೆ ಸೈನಿಕರಿಗೆ ಉಚಿತ ಸೇವೆ ಎಂದು ಬರೆಸಿದ್ದು ಅದರ ಜೊತೆಗೆ ತನ್ನ ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸಿದ್ದಾರೆ.ಸೈನಿಕರು ಯಾವುದೇ ಸಮಯದಲ್ಲಿ ಕೂಡ ಕರೆ ಮಾಡಿ ಉಚಿತ ವಾಹನ ಸೇವೆಯನ್ನು ಪಡೆಯಬಹುದಾಗಿದೆ.

ವಿಮಾನ ನಿಲ್ದಾಣದಲ್ಲಿ ವಾಹನವನ್ನು ನೋಡಿ ಸೈನಿಕರು ಕೇಳಲು ಹಿಂದೇಟು ಹಾಕುತ್ತಾರೆ. ಸ್ವತಃ ರಮೇಶ ಅವರೇ ಹೋಗಿ ಸೈನಿಕರನ್ನು ಕರೆತಂದು ಉಚಿತ ವಾಹನ ಸೇವೆ ನೀಡುತ್ತಾರೆ. ಸೈನಿಕರು ಯಾವುದೇ ಸಂದರ್ಭದಲ್ಲಿ ಕೂಡ ನಮ್ಮ ವಾಹನದ ಸೇವೆಯನ್ನು ಪಡೆಯಬಹುದು. ಭಾರತಾಂಭೆಯ ಸೇವೆ ಸಲ್ಲಿಸುವ ಯೋಧರಿಗೆ ನನ್ನ ಅಳಿಲು ಸೇವೆಯಾಗಿದೆ.‌ನಾನು ಸಂಗೊಳ್ಳಿ ರಾಯಣ್ಣನವರ ಭಕ್ತ ನನಗೆ ದೇಶದ ಮೇಲಿರುವ ಭಕ್ತಿ ಸೈನಿಕರ ಮೇಲಿದೆ. ಅವರು ತಮ್ಮ ಜೀವನವನ್ನು ಪಣಕ್ಕಿಟ್ಟು ಹೋರಾಟ ಮಾಡಿ ನಮಗೆಲ್ಲ ರಕ್ಷಣೆ ನೀಡುತ್ತಿದ್ದಾರೆ ಅವರಿಗೆ ನಾನು ಹೇಗಾದರೂ ಮಾಡಿ ಸೇವೆ ಸಲ್ಲಿಸುವ ಮೂಲಕ ಭಾರತ ಮಾತೆಯ ಋಣ ತಿರಿಸಬೇಕೆಂದು ಚಿಂತಿಸುತ್ತಿದ್ದಾಗ ನನ್ನ ಚಿಂತನೆಗೆ ಬಂದಿದ್ದು, ಉಚಿತವಾಗಿ ವಾಹನವನ್ನು ಸೈನಿಕರ ಸೇವೆಗೆ ಬಳಸಬೇಕು.ಇದರಿಂದ ನನಗೆ ತುಂಬಾ ಸಂತೋಷವಾಗುತ್ತದೆ.
ಸೈನಿಕರನ್ನು ನನ್ನ ವಾಹನದಲ್ಲಿ ಕರೆದೊಯ್ಯುವಾಗ ನನಗೆ ಹೆಮ್ಮೆ ಎನಿಸುತ್ತದೇ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಸಂಬಂಧಗಳಿಗೆ ಬೆಲೆ ಕೊಡದಿರುವಂತ ಸಂದರ್ಭದಲ್ಲಿ ಈ ಚಾಲಕ ತನ್ನ ಕರ್ತವ್ಯದ ನಡುವೆಯೂ ಇಂತಹದೊಂದು ಸೇವೆಗೆ ಕೈ ಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ.‌

ಬೈಟ್ - ರಮೇಶ, ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಚಾಲಕBody:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.