ಧಾರವಾಡ: ಜೂನ್ 25ರಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆ, ಪರೀಕ್ಷೆ ಎದುರಿಸುವ ಪರೀಕ್ಷಾರ್ಥಿಗಳಿಗೆ ಜಿಲ್ಲೆಯಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಉಚಿತವಾಗಿ ಮಾಸ್ಕ್ ನೀಡುವ ಉದ್ದೇಶದಿಂದ ಸಾವಿರಾರು ಮಾಸ್ಕ್ಗಳನ್ನು ತಯಾರಿಸಲಾಗಿದೆ.
ಜಿಲ್ಲೆಯಲ್ಲಿನ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಯಾರಿಸಿರುವ ಮಾಸ್ಕಗಳನ್ನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ 28 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ ಮಾಡಲಾಗುತ್ತದೆ.
ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರು ಈ ಸಂಸ್ಥೆಗೆ ಮಾಸ್ಕ್ ತಯಾರಿಸುವಂತೆ ಹೇಳಿದ್ದರು. ಆ ಪ್ರಕಾರ ಸಂಸ್ಥೆ ಮುಖಗವಸುಗಳನ್ನು ತಯಾರಿಸಿದೆ. ಕೆಲ ಶಿಕ್ಷಕರು ಖುದ್ದು ಮಾಸ್ಕ್ ತಯಾರಿಸಿದ್ರೆ, ಇನ್ನೂ ಕೆಲ ಶಿಕ್ಷಕರು ಮಾಸ್ಕ್ ಖರೀದಿಸಿ ಕೊಟ್ಟಿದ್ದಾರೆ. ಒಟ್ಟು ಇದೀಗ ಜಿಲ್ಲೆಯಲ್ಲಿ 28 ಸಾವಿರ ಮಾಸ್ಕ್ಗಳು ತಯಾರಾಗಿವೆ.
ನಾಳೆಯ ದಿನ ಈ ಎಲ್ಲಾ ಮಾಸ್ಕ್ಗಳನ್ನು ಡಿಡಿಪಿಐ ಅವರಿಗೆ ಹಸ್ತಾಂತರ ಮಾಡಲಾಗುತ್ತದೆ. ನಂತರ ಡಿಡಿಪಿಐ ಅವರ ಮೂಲಕ ತಾಲೂಕು ಮಟ್ಟದಲ್ಲಿ ಹಂಚಿಕೆ ಮಾಡಲಾಗುತ್ತದೆ.
ಮೂರು ಪದರವುಳ್ಳ ಮಾಸ್ಕ ತಯಾರಿಸಲಾಗಿದ್ದು, ಇದಕ್ಕಾಗಿ ತಾಲೂಕು ಕಾರ್ಯದರ್ಶಿಗಳ ಸಂಘಟಕರು, ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ತರಬೇತಿ ಪಡೆದುಕೊಂಡ ಶಿಕ್ಷಕರು ಶ್ರಮವಹಿಸಿದ್ದಾರೆ.