ETV Bharat / state

ಹೊಸ ಬಾಂಬ್​​ ಸಿಡಿಸಿದ ಮಾಜಿ ಸಚಿವ ರೇವಣ್ಣ

ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ರೇವಣ್ಣ ಮತ್ತೊಂದು ತಿರುವು ನೀಡಿದ್ದಾರೆ. ಈ ಪ್ರಕರಣ ಸಿಬಿಐಗೆ ಒಪ್ಪಿಸಿದ್ದಕ್ಕೆ ನಾವು ತಲೆ ಕೆಡಿಸಿಕೊಂಡಿಲ್ಲ. ಈ ಹಿಂದೆ ಆಪರೇಷನ್​​ ಕಮಲದ ವೇಳೆ ತನಿಖೆ ಮಾಡಬೇಡಿ ಎಂದು ಕೆಲವರು ಮನವಿ ಮಾಡಿದ್ದರು ಎಂದಿದ್ದಾರೆ.

ಮಾಜಿ ಸಚಿವ ಎಚ್.ಡಿ.ರೇವಣ್ಣ
author img

By

Published : Aug 20, 2019, 1:32 PM IST

ಹುಬ್ಬಳ್ಳಿ: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದಕ್ಕೆ ನಾವು ತಲೆ ಕೆಡಿಸಿಕೊಂಡಿಲ್ಲ. ಆದರೆ ಈ ಹಿಂದೆ ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಈ‌ ಕುರಿತು ತನಿಖೆ ಮಾಡದಂತೆ ಮನವಿ ಮಾಡಿದ್ದರು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ವಿಚಾರವಾಗಿ ತನಿಖೆ ಆಗಲಿ. ತಪ್ಪಿತಸ್ಥರನ್ನು ಜೈಲಿಗೆ ಹಾಕಲಿ. ಆ ಬಗ್ಗೆ ಯಾವುದೇ ತನಿಖೆ ನಡೆದರು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ. ಹಿಂದೆಂದೂ ಕಾಣದಂತಹ ಪ್ರವಾಹವನ್ನು ರಾಜ್ಯ ಕಂಡಿದ್ದು, ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ.‌ ಈ ವಿಚಾರವಾಗಿ ರಾಜಕೀಯ ಮಾಡಬಾರದು. ನಾನು ಸಹ ಮಾಡುವುದಿಲ್ಲ. ರಾಜ್ಯದ ಜನ ಇಷ್ಟೆಲ್ಲಾ ಸಂಕಷ್ಟಕ್ಕೆ ಸಿಲುಕಿದರೂ ಸಹ ಕೇಂದ್ರದಿಂದ ಈವರೆಗೆ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಅನೇಕ ಸಂಘ ಸಂಸ್ಥೆಗಳು ನೆರೆ ಪರಿಹಾರ ಒದಗಿಸುತ್ತಿವೆ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ಕೇವಲ ಇಪ್ಪತ್ತು ದಿನಗಳಲ್ಲಿ ಶಿಕಾರಿಪುರಕ್ಕೆ 2 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಕುಮಾರಸ್ವಾಮಿಯನ್ನು ಕೇವಲ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಷ್ಟೇ ಸಿಎಂ ಎಂದು ಹೇಳುತ್ತಿದ್ದವರು ಇದೀಗ ಏನು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.

ಮಾಜಿ ಸಚಿವ ಹೆಚ್.ಡಿ.ರೇವಣ್ಣ

ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ನೆರೆ ಪ್ರದೇಶಗಳಿಗೆ ಏಕಾಂಗಿ ಪ್ರವಾಸ ಮಾಡಿದ್ದಾರೆ‌ ನಿಜ. ಆದರೆ ಕೇಂದ್ರದಿಂದ ನೆರೆ ಪರಿಹಾರ ಮಾತ್ರ ಬಿಡುಗಡೆಯಾಗಲಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿದೆ‌. ಜನರಿಗೆ ಸಹಾಯ ಮಾಡಬೇಕು. ಆದರೆ ಈವರೆಗೆ ರಾಜ್ಯ ಸರ್ಕಾರದಿಂದ ಯಾವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮುಳುಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅವುಗಳನ್ನು ಲೆಕ್ಕಿಸದೆ ನಾವು ದಡ ಸೇರುವೆವು. ಹೀಗಾಗಿ ದಡ ಸೇರಲು ಯಾವ ಯಾವ ತಯಾರಿ ಬೇಕೋ ಅದನ್ನು ಮಾಡಲಾಗುವುದು ಎಂದರು.

Intro:ಹುಬ್ಬಳಿBody:ಸ್ಲಗ್: ಆಪರೇಷನ್ ಕಮಲ ಪೋನ ಕದ್ದಾಲಿಕೆ ತನಿಖೆ ಮಾಡದಂತೆ ಬಿಜೆಪಿ ಮುಖಂಡರು ಹಿಂದೆ ಮನವಿ ಮಾಡಿದ್ದರು ಹೋಸ ಬಾಂಬ್ ಸಿಡಿಸಿದ ರೇವಣ್ಣ..

ಹುಬ್ಬಳ್ಳಿ:- ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದಕ್ಕೆ ನಾವು ತಲೆನೆ ಕೆಡಿಸಿಕೊಂಡಿಲ್ಲ. ಆದರೆ ಈ ಹಿಂದೆ ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಈ‌ ಕುರಿತು ತನಿಖೆ ಮಾಡದಂತೆ ಮನವಿ ಮಾಡಿದ್ದರು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ವಿಚಾರವಾಗಿ ತನಿಖೆ6 ಆಗಲಿ ತಪ್ಪಿತಸ್ಥರನ್ನು ಜೈಲಿಗೆ ಹಾಕಲಿ, ಆ ಬಗ್ಗೆ ಯಾವುದೇ ತನಿಖೆ ನಡೆದರು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ ಹಿಂದೆಂದೂ ಕಾಣದಂತಹ ಪ್ರವಾಹವನ್ನು ರಾಜ್ಯ ಕಂಡಿದ್ದು, ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ.‌ ಈ ವಿಚಾರವಾಗಿ ರಾಜಕೀಯ ಮಾಡಬಾರದು ನಾನು ಮಾಡುವದಿಲ್ಲ. ರಾಜ್ಯದ ಜನ ಇಷ್ಟೇಲ್ಲಾ ಸಂಕಷ್ಟಕ್ಕೆ ಸಿಲುಕಿದರು ಕೇಂದ್ರದಿಂದ ಈವ ಈವರೆಗೆ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಅನೇಕ ಸಂಘ ಸಂಸ್ಥೆಗಳು ನೆರೆ ಪರಿಹಾರ ಒದಗಿಸುತ್ತಿವೆ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ಕೇವಲ ಇಪ್ಪತ್ತು ದಿನಗಳಲ್ಲಿ ಶಿಕಾರಿಪುರಕ್ಕೆ 2 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಕುಮಾರಸ್ವಾಮಿಯನ್ನು ಕೇವಲ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಷ್ಟೇ ಸಿಎಂ ಎಂದು ಹೇಳುತ್ತಿದ್ದವರು ಇದೀಗ ಏನು ಹೇಳುತ್ತಾರೆ ಎಂದು ದೂರಿದರು.
(ಬಿಎಸ್ ವೈ ಏಕಾಂಗಿ ಪ್ರವಾಸ ವೆಸ್ಟ್) ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ನೆರೆ ಪ್ರದೇಶಗಳಿಗೆ ಏಕಾಂಗಿ ಪ್ರವಾಸ ಮಾಡಿದ್ದಾರೆ‌ ನಿಜಾ ಆದರೆ ಕೇಂದ್ರದಿಂದ ನೆರೆ ಪರಿಹಾರ ಮಾತ್ರ ಬಿಡುಗಡೆಯಾಗಲಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅವರದ್ದೇ ಸರ್ಕಾರವಿದೆ‌. ಜನರಿಗೆ ಸಹಾಯ ಮಾಡಬೇಕು. ಈವರೆಗೆ ರಾಜ್ಯ ಸರ್ಕಾರದಿಂದ ಯಾವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದರು.
(ಜೆಡಿಎಸ್ ಮತ್ತೆ ಬಲಗೊಳುವುದು) ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮುಳುಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅವುಗಳನ್ನು ಗಮನಿಸದೇ ನಾವು ದಡಾ ಸೇರುವೆವು. ಹೀಗಾಗಿ ದಡ ಸೇರಲು ಯಾವ ಯಾವ ತಯಾರಿ ಬೇಕೋ ಅದನ್ನು ಮಾಡಲಾಗುವುದು ಎಂದರು.

_________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.