ಹುಬ್ಬಳ್ಳಿ : ಪತಿಯೋರ್ವ ಕುಡಿದ ಅಮಲಿನಲ್ಲಿ ಹೆಂಡತಿ ಹಾಗೂ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಸುಳ್ಳ ಗ್ರಾಮ ಪಕ್ಕೀರಪ್ಪ ಮಾದರ ಎಂಬಾತನೇ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಪತ್ನಿ ಮುದುಕವ್ವ ಮತ್ತು 8 ವರ್ಷದ ಮಗಳು 6 ವರ್ಷದ ಮಗ ಮತ್ತು ನಾಲ್ಕು ವರ್ಷದ ಮತ್ತೋರ್ವ ಮಗಳ ಮೇಲೆ ಹಲ್ಲೆ ಮಾಡಿದ್ದು, ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಕ್ಕೀರಪ್ಪ ಮಾದರ ಇಂದು ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಮನೆಯಲ್ಲಿನ ಟಿವಿ ಹೆಚ್ಚು ಸೌಂಡ್ ಇಟ್ಟು ಮಾರಕಾಸ್ತ್ರದಿಂದ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮುದಕವ್ವ ಜೋರಾಗಿ ಕಿರುಚಿಕೊಂಡಿದ್ದು, ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಎದ್ದು ಅಳಲು ಶುರು ಮಾಡಿದ್ದಾರೆ. ಈ ವೇಳೆ ಮಕ್ಕಳ ಮೇಲೂ ಹಲ್ಲೆ ಮಾಡಿದ್ದು, ಮೂವರು ಪ್ರಜ್ಞಾ ಹೀನರಾಗಿದ್ದಾರೆ. ಬಳಿಕ ಪಕ್ಕೀರಪ್ಪ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಅಕ್ಕಪಕ್ಕದ ಮನೆಯವರು ಟಿವಿ ಸೌಂಡ್ ಕೇಳಿ ಬಾಗಿಲು ಬಡಿದಾಗ ಯಾರೂ ಬಾಗಿಲು ತೆರೆದಿಲ್ಲ.ಹೀಗಾಗಿ ಅನುಮಾನಗೊಂಡು ಬಾಗಿಲು ಒಡೆದಿದ್ದಾರೆ. ಆಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂರು ಮಕ್ಕಳು ಹಾಗೂ ಮುದಕವ್ವನನ್ನು ಕಂಡಿದ್ದಾರೆ. ತಕ್ಷಣ ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಮಾಜಿ ಪತಿ ಹತ್ಯೆಗೆ ವಿಚ್ಛೇದಿತ ಪತ್ನಿಯಿಂದ ಸುಪಾರಿ.. ವಿಚ್ಛೇದಿತ ಪತಿಯ ಹತ್ಯೆಗೆ ಮಾಜಿ ಪತ್ನಿಯೇ ಸುಪಾರಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರ್.ಟಿ ನಗರದಲ್ಲಿ ಈ ಪ್ರಕರಣ ನಡೆದಿದೆ. ಪ್ರವೀಣ್ ಎಂಬಾತನನ್ನ ಮುಗಿಸಲು ಮನ್ಸೂರ್ ಆಲಿಯಾಸ್ ದೂನ್ ಮನ್ಸೂರ್ ಎಂಬಾತನಿಗೆ ಸಂಧ್ಯಾ ಸೂರ ಎಂಬುವರು 10 ಲಕ್ಷ ರೂ ಹಣ ನೀಡಿದ್ದಾರೆ ಎಂದು ಮಾಜಿ ಪತಿ ಪ್ರವೀಣ್ ದೂರು ನೀಡಿದ್ದಾರೆ.
ಡ್ರ್ಯಾಗರ್ನಿಂದ ಹಲ್ಲೆ: ಕೌಟುಂಬಿಕ ಕಲಹ ಕಾರಣ ಸಂಧ್ಯಾ ಹಾಗು ಪ್ರವೀಣ್ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ಪತ್ನಿ ಸಂಧ್ಯಾ ಮಾಜಿ ಪತಿ ಮೇಲೆ ಇನ್ನಿತರ ಆರೋಪ ಹೊರೆಸಿ ಪ್ರಕರಣ ದಾಖಲಿಸಿದ್ದರು. ಇನ್ನು, ಸುಪಾರಿ ಪಡೆದಿದ್ದ ಮನ್ಸೂರ್, ಪ್ರವೀಣ್ ಬಳಿ ಬಂದು ನಿಮ್ಮ ಮಾಜಿ ಪತ್ನಿ ಕೇಸ್ ವಾಪಸ್ ತೆಗೆದುಕೊಳ್ಳಲು ಒಪ್ಪಿದ್ದಾರೆ. ಅವರ ಜತೆ ಮಾತುಕತೆ ನಡೆಸಬೇಕು ಎಂದು ಆರ್.ಟಿ ನಗರದ ಚಾಮುಂಡಿ ನಗರದ ಮನೆಯೊಂದಕ್ಕೆ ಕರೆದೊಯ್ದಿದ್ದ. ನಂತರ ರೂಂನಲ್ಲಿ ಲಾಕ್ ಮಾಡಿ ಡ್ರ್ಯಾಗರ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರವೀಣ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಕೆಳಮನೆ 'ಪತ್ನಿ' ಮೇಲ್ಮನೆ 'ಗಂಡ'ಪರಾರಿ ಪ್ರಕರಣ: ವಕೀಲರ ಮೂಲಕ ಪೊಲೀಸರ ಮುಂದೆ ಹಾಜರಾದ ಮೇಲ್ಮನೆ ಗಂಡ