ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್‌ಗೆ ಚುಚ್ಚುಮದ್ದು ಕೊರತೆ ಇದ್ದು, ಅಂಪೊಟೋರಿಸಿಯನ್ 2 ಸಾವಿರ ವಯಲ್‌ಗೆ ಬೇಡಿಕೆ ಇದೆ ಎಂದು ಕಿಮ್ಸ್ ಅಧೀಕ್ಷಕ ಡಾ.ಅರುಣಕುಮಾರ ಚವ್ಹಾಣ್ ಹೇಳಿದ್ದಾರೆ.
ನಗರದಲ್ಲಿ ಮಾಹಿತಿ ನೀಡಿದ ಅವರು, ಬ್ಲಾಕ್ ಫಂಗಸ್ನಿಂದ ಬಳಲುವವರ ಸಂಖ್ಯೆ ಇದೀಗ 50ಕ್ಕೆ ಏರಿಕೆಯಾಗಿದೆ. ಇಂತಹ ಆತಂಕಕಾರಿ ಬೆಳವಣಿಗೆ ನಡುವೆಯೇ ಅಗತ್ಯ ಔಷಧದ ಕೊರತೆ ಇದೆ. ರೋಗಿಗಳ ಚಿಕಿತ್ಸೆಗೆ ವೈದ್ಯರು ಹರಸಾಹಸಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಔಷಧ ಪೂರೈಸುವಂತೆ ಸರ್ಕಾಕ್ಕೆ ಮನವಿ ಮಾಡಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಉತ್ತರ ಕರ್ನಾಟಕ ಭಾಗದ ಬೇರೆ ಬೇರೆ ಜಿಲ್ಲೆಗಳಿಂದ ಬ್ಲಾಕ್ ಫಂಗಸ್ ರೋಗಿಗಳು ಕಿಮ್ಸ್ಗೆ ದಾಖಲಾಗುತ್ತಿದ್ದು, ಬರೋಬ್ಬರಿ 50 ಕೇಸ್ ಗಳು ಇವೆ. ಡಯಾಬಿಟಿಸ್ ರೋಗಿಗಳಲ್ಲಿ ಹೆಚ್ಚಾಗಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ.