ETV Bharat / state

ಧಾರವಾಡ: ಲಾಕ್‍ಡೌನ್ ತೆರವು, ಅನ್‍ಲಾಕ್ ಮಾರ್ಗಸೂಚಿ ಪ್ರಕಟ - Lockdown Clearance

ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಲಾಕ್​ಡೌನ್​ ತೆರವುಗೊಳಿಸಿ, ಅನ್‍ಲಾಕ್-2ರಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​
author img

By

Published : Jul 22, 2020, 9:31 PM IST

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ-2005 ರ ಅಡಿಯಲ್ಲಿ ಅಧಿಕಾರ ಬಳಸಿ, ಅನ್‍ಲಾಕ್-2 ರ ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ಪ್ರಕಟಿಸಿದ್ದಾರೆ.

ಅನ್‍ಲಾಕ್ ಮಾರ್ಗಸೂಚಿ ಪ್ರಕಟ
ಅನ್‍ಲಾಕ್ ಮಾರ್ಗಸೂಚಿ ಪ್ರಕಟ

ಈ ಮಾರ್ಗಸೂಚಿಗಳು ಜುಲೈ 22ರ ಬೆಳಗ್ಗೆ 5 ಗಂಟೆಯಿಂದ ಜುಲೈ 31ರ ವರೆಗೆ ಜಾರಿಯಲ್ಲಿರುತ್ತವೆ. ಕೋವಿಡ್ ಹರಡುವಿಕೆ ನಿಯಂತ್ರಿಸಲು, ಸೋಂಕು ಪತ್ತೆ ಹಚ್ಚುವಿಕೆ, ಪರೀಕ್ಷೆ, ಟ್ರ್ಯಾಕಿಂಗ್, ತಾಂತ್ರಿಕತೆ ಉಪಯೋಗಿಸಿ ಚಿಕಿತ್ಸೆ ನೀಡುವುದು ಮತ್ತು ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಇತರೆ ಸಿಬ್ಬಂದಿಗಳನ್ನೊಳಗೊಂಡ ಮಾನವ ಸಂಪನ್ಮೂಲವನ್ನು ನಿಯೋಜಿಸುವ ಮೂಲಕ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಸೇವಾ ಸೌಲಭ್ಯವನ್ನು ಹೆಚ್ಚಿಸಲಾಗಿದೆ.

ರಾತ್ರಿ ಕರ್ಫ್ಯೂ:

ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಭಾನುವಾರದ ಲಾಕ್‍ಡೌನ್ ಮುಂದುವರಿಕೆ:

ಪ್ರಸ್ತುತ ಚಾಲ್ತಿಯಲ್ಲಿರುವ ಪ್ರತಿ ಭಾನುವಾರ ಲಾಕ್‍ಡೌನ್ ಮುಂದುವರೆಯಲಿದೆ.

ಜನ ಸಂದಣಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಗಳನ್ನು ಎಪಿಎಂಸಿ ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸುವುದು. ಉದ್ಯಾನವನಗಳಲ್ಲಿ ಜಿಮ್, ಸಲಕರಣೆಗಳು ಮತ್ತು ಕುಳಿತುಕೊಳ್ಳುವ ಬೆಂಚ್‍ಗಳ ಬಳಸುವಿಕೆ ನಿಷೇಧ ಜಿಲ್ಲೆಯಾದ್ಯಂತ ಯಾವುದೇ ದೇವಸ್ಥಾನ, ಚರ್ಚ್, ಮಸೀದಿ, ಧಾರ್ಮಿಕ ಮಂದಿರಗಳು, ಪ್ರಾರ್ಥನಾ ಮಂದಿರಗಳು ಹಾಗೂ ಉತ್ಸವ, ಉರುಸು, ಮೆರವಣಿಗೆ, ಧಾರ್ಮಿಕ ಆಚರಣೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಕಂಟೈನ್‌ಮೆಂಟ್‌ ವಲಯಗಳಲ್ಲಿ ಈ ಹಿಂದೆ ಹೊರಡಿಸಿದ ನಿರ್ಬಂಧಗಳು ಮುಂದುವರೆಯುವುದು. ಅಂಗಡಿಗಳಲ್ಲಿ 5 ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆ ನೀಡಬೇಕು. ಶಾಲೆಗಳು, ಕಾಲೇಜುಗಳು, ಶಿಕ್ಷಣ, ತರಬೇತಿ, ಕೋಚಿಂಗ್ ಸ್ಟಡಿ ಸೆಂಟರ್ ಮುಂತಾದ ಸಂಸ್ಥೆಗಳು ಮುಚ್ಚಿರಬೇಕು. ಆನ್‍ಲೈನ್ ಅಥವಾ ದೂರ ಶಿಕ್ಷಣ ಕಲಿಕೆಗೆ ಅವಕಾಶವನ್ನು ಮುಂದುವರೆಸಿವೆ.

ಎಲ್ಲಾ ಸಿನಿಮಾ ಮಂದಿರಗಳು, ಜಿಮ್ನಾಷಿಯಮ್‍ಗಳು, ಈಜು ಕೊಳಗಳು, ರಂಗ ಮಂದಿರಗಳ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ಸಾಮಾಜಿಕ, ರಾಜಕೀಯ ಕ್ರೀಡಾ ಮನರಂಜನಾ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು ಇತರೆ ಸಭೆಗಳು ಹಾಗೂ ಬೃಹತ್ ಜನಸ್ತೋಮಗಳು ಸಂಪೂರ್ಣ ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿನ ಮದುವೆ ಹಾಗೂ ಶವ ಸಂಸ್ಕಾರ ಕಾರ್ಯದಲ್ಲಿ ಕೇವಲ 20 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.