ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಕೋರ್ಟ್ ಸರ್ಕಲ್ನಲ್ಲಿ ಇರುವ ಪ್ರತಿಷ್ಠಿತ ಸಾಯಿ ಮಂದಿರಕ್ಕೆ ಶೀಘ್ರವಾಗಿ ಹೊಸ ಆಡಳಿತ ಅಧಿಕಾರಿಗಳನ್ನು ನೇಮಿಸುವಂತೆ ಕರ್ನಾಟಕ ಸಂಗ್ರಾಮ ಸೇನೆ ಅಧ್ಯಕ್ಷ ಸಂಜೀವ ದುಮ್ಮಕನಾಳ ಆಗ್ರಹಿಸಿದರು.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಾಯಿ ಮಂದಿರದ ಅವ್ಯವಹಾರದ ಕುರಿತು ಧಾರವಾಡದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಶಾಸನ ಬದ್ದ ವಿಚಾರಣೆ ನಡೆಸಿ ತಮಗೆ ಏಪ್ರಿಲ್ 24ರಂದು ವರದಿ ಸಲ್ಲಿಸಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ಪವಿತ್ರವಾದ ಮಂದಿರ ಬಳಕೆಯಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಹೀಗಾಗಿ ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಿ ಸಾಯಿ ಮಂದಿರಕ್ಕೆ ನೂತನ ಆಡಳಿತ ಅಧಿಕಾರಿ ನೇಮಕ ಮಾಡಬೇಕು ಇಲ್ಲವಾದರೆ ಮಂದಿರವನ್ನು ಜಿಲ್ಲಾಡಳಿತದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.