ETV Bharat / state

ನಾಳೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ತೀರ್ಮಾನ: ಬಿಎಸ್​ವೈ​

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

Former CM BS Yeddyurappa
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ
author img

By

Published : Apr 30, 2023, 10:35 PM IST

ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಬಿಎಸ್​ವೈ.​

ಧಾರವಾಡ : ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಬೇಕಿದ್ದು, ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ತೀರ್ಮಾನವನ್ನು ನಾಳೆ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರ ನಾಯಕ ರಾಹುಲ್ ಗಾಂಧಿ ನಮ್ಮ ನಾಯಕ ಪ್ರಧಾನಿ ಮೋದಿ ಮುಂದೆ ನಿಲ್ಲೋಕೆ ಸಾಧ್ಯವಾ ಎಂದು ಪ್ರಶ್ನಿಸಿದರು.

ಈ ಬಾರಿ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಂದ ಅಮೃತ್ ದೇಸಾಯಿ ಗೆಲ್ಲುತ್ತಾರೆ. ತುಪ್ಪರಿ ಹಳ್ಳದಲ್ಲಿ ಮಳೆ ಬಂದಾಗ ಸಾಕಷ್ಟು ಅನಾಹುತ ಆಗುತ್ತಿತ್ತು. 312 ಕೋಟಿ ರೂ ನೀಡಿ ಅದಕ್ಕೆ ಪರಿಹಾರ ಕಂಡುಕೊಂಡಿದ್ದೇವೆ. ಮಾಜಿ ಸಿಎಂ ವೀರೇಂದ್ರ ಪಾಟೀಲ್‌ರನ್ನು ರಾಜೀವ್ ಗಾಂಧಿಯವರು ವಿಮಾನ ನಿಲ್ದಾಣಕ್ಕೆ ಹೋಗಿ ರಾಜೀನಾಮೆ ಕೊಡಿ ಅಂತ ಹೇಳಿದರು. ವೀರೇಂದ್ರ ಪಾಟೀಲ್‌ರನ್ನು ಯಾವ ಕಾರಣಕ್ಕೆ ಅಧಿಕಾರದಿಂದ ಕೆಳಗೆ ಇಳಿಸಿದ್ದೀರಿ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಎಲ್ಲಿದೆ, ಇದು ನಿಮ್ಮ ಯೋಗ್ಯತೆ ಎಂದು ಹರಿಹಾಯ್ದರು.

ಎಲ್ಲ ರಾಜ್ಯಗಳಲ್ಲೂ ನೀವು ಸೋತಿದ್ದೀರಿ. ಚುನಾವಣೆ ನಂತರ ಕಾಂಗ್ರೆಸ್ ದಿವಾಳಿಯಾಗಲಿದೆ. ರೈತರಿಗೆ ಉಚಿತ ವಿದ್ಯುತ್ ನೀಡಿದ್ದು ನಾವು. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಅಲ್ಲೊಬ್ಬ ಇಲ್ಲೊಬ್ಬ ಹಗುರವಾಗಿ ಮಾತನಾಡುತ್ತಾರೆ. ಖರ್ಗೆಯವರು ಮೋದಿಜಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ರಾಷ್ಟ್ರೀಯ ಅಧ್ಯಕ್ಷ ಈ ರೀತಿ ಕೆಳಮಟ್ಟದ ಮಾತು ಹೇಳಿದ್ದಾರೆ. ಕಾಂಗ್ರೆಸ್​ ಪಕ್ಷವನ್ನು ಅಡ್ರೆಸ್ ಇಲ್ಲದ ಹಾಗೆ ಓಡಿಸಬೇಕು.‌ ಕೌಂಟಿಂಗ್ ಏಜೆಂಟ್‌ಗಳು ಅಲ್ಲಿಂದಲೇ ಓಡಬೇಕು ಹಾಗೆ ಮತ ಹಾಕಿ ಬಿಎಸ್​ವೈ ಮನವಿ ಮಾಡಿದರು.

ನನಗೆ 80 ವರ್ಷ. ಆದರೆ ನಾನು ಮನೆಯಲ್ಲಿ ಕುಳಿತಿಲ್ಲ. ಸರ್ಕಾರ ಬರುವ ಹಾಗೆ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಹಣ, ತೋಳು ಬಲ, ಹೆಂಡದ ಬಲ ತೋರಿಸಿ ಜನರನ್ನು ಮೋಸ ಮಾಡಿದ್ದರು. ಆದರೆ ಇನ್ನು ಮುಂದೆ ಅದೆಲ್ಲ ಆಗಲ್ಲ. ಮನೆ ಹೆಣ್ಣು ಮಕ್ಕಳಿಗೆ ಬೇಗನೆ ಮದುವೆ ಮಾಡಬೇಡಿ. ಅವಳೂ ಸಹ ಕಲಿಯಲು ಅವಕಾಶ ನೀಡಿ ಎಂದು ಇದೇ ವೇಳೆ ಬಿಎಸ್​ವೈ ಕರೆ ಕೊಟ್ಟರು.

ಶಾಸಕ ಅಮೃತ್ ದೇಸಾಯಿ ಮಾತನಾಡಿ, 5 ವರ್ಷಗಳ ಹಿಂದೆ ಯಡಿಯೂರಪ್ಪನವರು ಇಲ್ಲಿಗೆ ಬಂದು ನನಗೆ ಆಶೀರ್ವಾದ ಮಾಡುವಂತೆ ಹೇಳಿದ್ದರು. ಅದರಂತೆ ನೀವು ನನ್ನನ್ನು ಗೆಲ್ಲಿಸಿದ್ದೀರಿ. ಅದಾದ ಮೇಲೆ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ತುಪ್ಪರಿ ಹಳ್ಳ ಡಿಪಿಆರ್‌ಗೆ ಅನುಮತಿ ಸಿಕ್ಕಿತು. ಈಗಾಗಲೇ ಕೆಲಸ ಆರಂಭವಾಗಿದೆ. ಮೊದಲ ಬಾರಿಗೆ ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದು ಯಡಿಯೂರಪ್ಪ ಎಂದು ಹೊಗಳಿದರು.

ಇದನ್ನೂ ಓದಿ : ಕಾಂಗ್ರೆಸ್ ಸದ್ಯದಲ್ಲೇ ಧೂಳೀಪಟ: ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.