ಹುಬ್ಬಳ್ಳಿ: ಪಾಲಿಕೆ ಕಚೇರಿಯ ಪಕ್ಕದ ಉದ್ಯಾನವನದಲ್ಲಿ ಅರ್ಧ ಕತ್ತರಿಸಿ ಬಿಟ್ಟಿದ್ದ ಮರವನ್ನು ಇಂದು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ಹು-ಧಾ ಮಹಾನಗರ ಪಾಲಿಕೆ ಕಚೇರಿಯ ಪಕ್ಕದ ಉದ್ಯಾನವನದಲ್ಲಿ ಪಾಲಿಕೆ ಸಿಬ್ಬಂದಿ ಮರವನ್ನು ಅರ್ಧ ಕಡಿಸಿ ಹಾಗೆ ಬಿಟ್ಟ ಪರಿಣಾಮ ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ''ಪಾಲಿಕೆಯ ಪಾರ್ಕ್‌ನಲ್ಲಿ ಅರ್ಧಂಬರ್ಧ ಮರ ಕಡಿದು ಎಡವಟ್ಟು'' ಎಂಬ ಶೀರ್ಷಿಕೆ ಅಡಿಯಲ್ಲಿ ನಿನ್ನೆ 'ಈಟಿವಿ ಭಾರತ'ನಲ್ಲಿ ಸುದ್ದಿ ಬಿತ್ತರಿಸಲಾಗಿತ್ತು.
ಪಾಲಿಕೆಯ ಪಾರ್ಕ್‌ನಲ್ಲಿ ಅರ್ಧಂಬರ್ಧ ಮರ ಕಡಿದು ಎಡವಟ್ಟು..
ಸುದ್ದಿ ನೋಡಿದ ತಕ್ಷಣವೇ ಎಚ್ಚೆತ್ತಕೊಂಡ ಅಧಿಕಾರಿಗಳು ಮರವನ್ನು ಸಂಪೂರ್ಣ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಆತಂಕ ದೂರ ಮಾಡಿದ್ದಾರೆ. ಸುದ್ದಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಹಾಗೂ ಈಟಿವಿ ಭಾರತಕ್ಕೆ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.