ಧಾರವಾಡ: ಮಹಾಮಾರಿ ಕೊರೊನಾ ವೈರಸ್ ಕೋಟೂರ ಗ್ರಾಮಕ್ಕೂ ಕಾಲಿಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಕೋಟೂರಿನ ದೇಸಾಯಿ ಓಣಿಯ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಈತ ಬೇಲೂರ ಕೈಗಾರಿಕಾ ಪ್ರದೇಶದ ಟಾಟಾ ಮಾರ್ಕೋಪೋಲೋ ನೌಕರನಾಗಿದ್ದಾನೆ.
ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸ್ಥಳ ಪರಿಶೀಲನೆ ನಡೆಸಿ ನಿಯಂತ್ರಿತ ಪ್ರದೇಶ ಎಂದು ಘೋಷಿಸಿದ್ದಾರೆ. ಜೊತೆಗೆ ಯಾರೂ ಓಡಾಡದಂತೆ ಮುಳ್ಳಿನ ಬೇಲಿ ಹಾಕಿ ಸೀಲ್ ಡೌನ್ ಮಾಡಿದ್ದಾರೆ. ಆದರೂ ಸಹ ಕೆಲವರು ಮಾಸ್ಕ್ ಹಾಕದೆ ಹಾಗೆಯೇ ಓಡಾಡುತ್ತಿದ್ದು, ಗ್ರಾಮ ಪಂಚಾಯತ್ ಪಿಡಿಒ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.