ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್ ಜಾಗೃತಿಗಾಗಿ ನಗರದ ಸ್ವರಾಂಗಿನಿ ಸಿಂಗಿಂಗ್ ಗ್ರೂಪ್ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ತಂಡವು ಹಿಂದಿ ಹಾಡಿನ ಸಂಗೀತಕ್ಕೆ ಕೊರೊನಾ ಸಂಬಂಧ ಲಿರಿಕ್ಸ್ ಹಾಕಿ ಹಾಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ.
ಗಾಯಕ ಶಿಬಾಜಿ ಚಕ್ರಬೊತ್ರಿ ಹಾಡಿರುವ ಈ ಹಾಡಿನಲ್ಲಿ ಮೇರೆ ದೇಶ ವಾಸಿಯೋ, ಮಾತಾ ಪಿತಾಓ. ಕೊರೊನಾ ಸೇ ಬಚಾನತೋ ಗರ್ ಮೇ ರೆಹನಾ ಹೈ ಪ್ಯಾರೇ ನಹಿತೋ ಹೇ ಕೊರೊನಾ ಗರ್ಮೆ ಗುಸೇಗಾ ಗರ್ ಮೇ ಗುಸೇಗತೋ ಜೀನೆ ನಹೀ ದೇಗಾ ಎಂದು ಕರೋಕೆ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹಿಂದಿ ಚಲನಚಿತ್ರ 'ಹಾತಿ ಮೇರೆ ಸಾತಿ' ಸಿನಿಮಾ ಹಾಡಿಗೆ ಕೊರೊನಾ ಟಚ್ ನೀಡಿ ಹಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.