ಧಾರವಾಡ: ದೇಶದೆಲ್ಲೆಡೆ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೊನಾ ಸೋಂಕು ಪ್ರಕರಣಗಳು ದಿನೇ-ದಿನೆ ಏರಿಕೆ ಕಾಣುತ್ತಿವೆ. ಹಾಗಾಗಿ ನಗರದ ಹಲವೆಡೆ ರೋಟರಿ ಕ್ಲಬ್, ನಾಗರಿಕ ರಕ್ಷಣಾ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸದಸ್ಯರು, ಹೆಚ್‌ಡಿಎಂಸಿ, ಆರೋಗ್ಯ ಅಧಿಕಾರಿಗಳು ಸೇರಿ ಕೊರೊನಾ ಜಾಗೃತಿಗೆ ಮುಂದಾಗಿದ್ದಾರೆ.
ನಗರದ ಸುಭಾಷ್ ರೋಡ್, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಇರುವ ಜನರಿಗೆ ಧ್ವನಿ ವರ್ಧಕಗಳನ್ನು ಬಳಸಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇನ್ನೂ ನಗರದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಸಹ ಈ ಜಾಗೃತಿ ನಡೆಸಲು ನಿರ್ಧಾರವನ್ನು ಕೈಗೊಂಡಿದ್ದಾರೆ.