ಧಾರವಾಡ: ಮಹಿಳಾ ಬ್ಯೂಟಿಷಿಯನ್ ಜೊತೆ ಕಾಂಗ್ರೆಸ್ ಮುಖಂಡನೋರ್ವ ಅನುಚಿತವಾಗಿ ವರ್ತಿಸಿದ ಘಟನೆ ಧಾರವಾಡದ ವಿದ್ಯಾಗಿರಿ ಬಡಾವಣೆಯಲ್ಲಿ ನಡೆದಿದೆ.
ಸೆಲೂನ್ ಹಾಗೂ ಸ್ಪಾ ಮಾಲೀಕನೂ ಆಗಿರುವ ಮನೋಜ್ ಕರ್ಜಗಿ (54) ಎಂಬಾತ ಆರೋಪಿ. ಸಿದ್ದರಾಮಯ್ಯ ಸರ್ಕಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕನಾಗಿದ್ದ ಈತ, ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಎಂದು ಹೇಳಲಾಗಿದೆ.
ತನ್ನ ಸ್ಪಾದಲ್ಲಿ ಕೆಲಸಕ್ಕಿದ್ದ 19 ವರ್ಷದ ಬ್ಯೂಟಿಷಿಯನ್ ಜತೆ ಅನುಚಿತವಾಗಿ ವರ್ತಿಸಿದ್ದು, ಯುವತಿ ಕೂಗಿಕೊಂಡು ಹೊರಬಂದಿದ್ದಳು. ಬಳಿಕ ಸ್ನೇಹಿತರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ವಿದ್ಯಾಗಿರಿ ಪೊಲೀಸರು ಕರ್ಜಗಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿಗೆ ವಿದ್ಯಾರ್ಥಿಗಳಿಬ್ಬರಿಂದ ಚೂರಿ ಇರಿತ