ETV Bharat / state

ಕಾಂಗ್ರೆಸ್ ಕೇವಲ ಪ್ರಚಾರ, ವೋಟ್ ಬ್ಯಾಂಕ್​ಗಾಗಿ ಪಾದಯಾತ್ರೆ ಮಾಡುತ್ತಿದೆ : ಮಾಜಿ ಸಿಎಂ ಶೆಟ್ಟರ್ - Jagadish Shettar speak aganist Congress in hubli

ಮಹಾದಾಯಿ ವಿಚಾರದಲ್ಲಿಯೂ ಕಾಂಗ್ರೆಸ್​ನಿಂದ ದ್ವಂದ್ವ ನಿಲುವಿದ್ದು, ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ನೀರು ಬಿಡೋದಿಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಆದರೆ, ಇಲ್ಲಿನ ಕಾಂಗ್ರೆಸಿಗರು ಮಹಾದಾಯಿಗಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳ್ತಾ ಇದ್ದಾರೆ..

Former CM Shetter
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್
author img

By

Published : Feb 27, 2022, 2:57 PM IST

Updated : Feb 27, 2022, 3:45 PM IST

ಹುಬ್ಬಳ್ಳಿ : ಕಾಂಗ್ರೆಸ್ ಕೇವಲ ಪ್ರಚಾರ, ವೋಟ್ ಬ್ಯಾಂಕ್​​ಗಾಗಿ ಪಾದಯಾತ್ರೆ ನಡೆಸುತ್ತಿದೆ. ಅವರಿಗೆ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ, ವಿಧಾನಮಂಡಲದಲ್ಲಿ ಚರ್ಚಿಸಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಯೋಜನೆ ವಿಚಾರ ಅತ್ಯಂತ ಸೂಕ್ಷ್ಮವಾಗಿದೆ. ಆದರೆ, ಇದನ್ನು ಕಾಂಗ್ರೆಸ್ ರಾಜಕಾರಣಕ್ಕೆ ಬಳಸುತ್ತಿದೆ. ಈ ಮೂಲಕ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ‌.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

ವಿಧಾನಸಭೆ ಕಲಾಪ ನಡೆದಾಗ ಅಲ್ಲಿ ಇವರು ಚರ್ಚೆ ಮಾಡೋದಿಲ್ಲ. ಅದನ್ನು ಬಿಟ್ಟು ಇದೀಗ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಸದನದಲ್ಲಿ ಕಾಂಗ್ರೆಸ್ ವಿನಾಕಾರಣ ಕಾಲಹರಣ ಮಾಡಿ, ಇದೀಗ ಪಾದಯಾತ್ರೆ ಮಾಡುವ ಮೂಲಕ ಹೊರಗೂ ಕಾಲಹರಣ ಮಾಡುತ್ತಿದೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಬಿಎಸ್​ವೈ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇವೆ: ಸಿಎಂ ಬೊಮ್ಮಾಯಿ

ಮಹಾದಾಯಿ ವಿಚಾರದಲ್ಲಿಯೂ ಕಾಂಗ್ರೆಸ್​ನಿಂದ ದ್ವಂದ್ವ ನಿಲುವಿದ್ದು, ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ನೀರು ಬಿಡೋದಿಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಆದರೆ, ಇಲ್ಲಿನ ಕಾಂಗ್ರೆಸಿಗರು ಮಹಾದಾಯಿಗಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗಾಗಿ, ಕಾಂಗ್ರೆಸ್​ನವರು ಮೊದಲು ದ್ವಂದ್ವ ನಿಲುವನ್ನು ಬಿಡಲಿ. ಮುಂದೆ ಬಜೆಟ್ ಅಧಿವೇಶನವಿದ್ದು, ಅಲ್ಲಿ ಬಂದು ಚರ್ಚೆ ಮಾಡಲಿ ಎಂದು ಹೇಳಿದರು.

Last Updated : Feb 27, 2022, 3:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.