ಧಾರವಾಡ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸಿ ಹೇಳಿಕೆ ನೀಡಿದ್ದ ವಿಡಿಯೋ ಹಾಕಿದ್ದ ಶೃತಿ ಬೆಳ್ಳಕ್ಕಿಗೆ ಧಾರವಾಡದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಾಜಿ ಸಚಿವ ವಿನಯ ಕುಲಕರ್ಣಿ, ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಶೃತಿ ಬೆಳ್ಳಕ್ಕಿ ವಿಡಿಯೋ ಹರಿಬಿಟ್ಟಿದ್ದರು. ಇದೀಗ ನ್ಯಾ. ಅಚ್ಚಪ್ಪ ದೊಡ್ಡಬಸವರಾಜ ಅವರಿಂದ ಜಾಮೀನು ಮಂಜೂರು ಮಾಡಿದೆ. ಷರತ್ತುಬದ್ಧ ಜಾಮೀನು ಮಂಜೂರು, 50 ಸಾವಿರ ಬಾಂಡ್, ಒಬ್ಬರ ಶ್ಯೂರಿಟಿ, ಸಾಕ್ಷಿ ನಾಶ ಮಾಡಬಾರದು, ವಿಚಾರಣೆಗೆ ಸಹಕರಿಸಲು ಸೂಚಿಸಿ ಜಾಮೀನು ನೀಡಲಾಗಿದೆ.
ವಿಡಿಯೋ ಹರಿಬಿಟ್ಟದ್ದಕ್ಕೆ ನಿನ್ನೆ ಧಾರವಾಡ ಜಿಲ್ಲೆಯ ಗರಗ ಠಾಣಾ ಪೊಲೀಸರು ಬಂಧಿಸಿದ್ದರು. ಶೃತಿ ಮೇಲೆ ಕಾಂಗ್ರೆಸ್ ಮುಖಂಡ ದಶರಥ ದೇಸಾಯಿ ದೂರು ನೀಡಿದ್ದರು. ಫೇಸ್ಬುಕ್ನಲ್ಲಿನ ವೀಡಿಯೋಗೆ ಆಕ್ಷೇಪ ವ್ಯಕ್ತಪಡಿಸಿ ಈ ದೂರು ನೀಡಿದ್ದರು. ವಿನಯ ಕುಲಕರ್ಣಿ, ಎಂ.ಬಿ.ಪಾಟೀಲ್ ಸೇರಿದಂತೆ ಹಲವರ ವಿರುದ್ಧ ಹರಿಹಾಯ್ದಿದ್ದ ಮಹಿಳೆ ಹಿಂದೂ ಧರ್ಮ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಳು.