ETV Bharat / state

ಅಸಮಾನತೆ ಇರೋವರೆಗೂ ಸಮಾಜದಲ್ಲಿ ನೆಮ್ಮದಿಯಿರುವುದಿಲ್ಲ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Dec 17, 2023, 6:43 AM IST

Updated : Dec 17, 2023, 6:58 AM IST

ಸಮಾಜದಲ್ಲಿನ ಅಸಮಾನತೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಧಾರವಾಡ: ಈ ದೇಶದ ಸಂಪತ್ತು ಉತ್ಪಾದನೆ ಮಾಡುವ ಕಾಯಕ ಜೀವಿಗಳು. ಅದನ್ನೇ ಬಸವಾದಿ ಶರಣರು ಕಾಯಕ ಮತ್ತು ದಾಸೋಹ ಅಂತಾ ಕರೆದರು. ಉತ್ಪಾದನೆ ಪಕ್ರಿಯೆಯಲ್ಲಿ ಇರುವ ಕಾಯಕ ಜೀವಿಗಳು ಮಾಡಿದ ಉತ್ಪಾದನೆಯನ್ನು ಎಲ್ಲರಿಗೂ ಹಂಚುವುದು ದಾಸೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ಕಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷಚೇತನರಿಗೆ ವಾಹನ ವಿತರಣೆ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್​​​ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಸಮಾಜದಲ್ಲಿಂದು ಶೇ. 90ರಷ್ಟು ಸಂಪತ್ತು ಕೇವಲ ಶೇ. 10ರಷ್ಟು ಜನರಲ್ಲಿ ಕೇಂದ್ರೀಕೃತವಾಗಿದೆ. ಇದರಿಂದಾಗಿಯೇ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ. ಈ ಅಸಮಾನತೆ ತೊಲಗಿಸುವ ಬಗ್ಗೆ ಅಂಬೇಡ್ಕರ್ ಹೇಳಿದ್ದರು. ಅಸಮಾನತೆ ಇರೋವರೆಗೂ ಸಮಾಜದಲ್ಲಿ ನೆಮ್ಮದಿ, ಶಾಂತಿ ಇರಲು ಸಾಧ್ಯವಿಲ್ಲ. ಅಸಮಾನತೆಯಿಂದ ಬಳಲುವವರು ಮುಖ್ಯವಾಹಿನಿಗೆ ಬರಬೇಕು. ಇಲ್ಲದೇ ಹೋದರೆ ಅಸಮಾನತೆ ಮುಂದುವರೆಯುತ್ತದೆ ಎಂದರು.

ಅಂಬೇಡ್ಕರ್ ಅವರು 1949ರ ನ. 25ರಂದು ಭಾಷಣ ಮಾಡಿದ್ದರು. 1950ರ ಜನವರಿ 26ರಿಂದ ವೈವಿಧ್ಯತೆಯ ಸಮಾಜಕ್ಕೆ ಕಾಲಿಡುತ್ತೇವೆ ಎಂದು ಹೇಳಿದ್ದರು. ಇಂದು ನಮಗೆ ಸ್ವಾತಂತ್ರ್ಯ ಬಂದಿದೆ. ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ. ಅದು ಯಶಸ್ವಿಯಾಗಲು ಅಸಮಾನತೆಯನ್ನು ತೊಡೆದು ಹಾಕಲೇಬೇಕು. ಆದ್ರೆ ಸ್ವಾತಂತ್ರ್ಯ ಬಂದ ಮೇಲೂ ಅಸಮಾನತೆಯಿಂದ ಜನರು ನರಳುತ್ತಿದ್ದಾರೆ. ಈ ರಾಜಕೀಯ, ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕು ಎಂದು ತಿಳಿಸಿದರು.

ಅಸಮಾನತೆ ಉಳಿದರೆ ಅದರಿಂದ ನರಳುವ ಜನರೇ ಪ್ರಜಾಪ್ರಭುತ್ವದ ಸೌಧ ದ್ವಂಸ ಮಾಡುತ್ತಾರೆ ಎಂದು ಅಂದು ಅಂಬೇಡ್ಕರ್ ಅವರು ಹೇಳಿದ್ದರು. ಸಮಾಜದಲ್ಲಿ ಬಡವರು, ದಲಿತರು, ಮಹಿಳೆಯರು, ಹಿಂದುಳಿದವರು, ವಿಕಲಚೇತನರು ಇದ್ದಾರೆ. ಅವರಿಗೆಲ್ಲ ರಾಜಕೀಯ ಸ್ವಾತಂತ್ರ್ಯದ ಲಾಭ ಸಿಗಬೇಕಲ್ವಾ? ಆ ನಿಟ್ಟಿನಲ್ಲಿ ಉಳ್ಳವರು ಇಲ್ಲದವರ ಸಹಾಯಕ್ಕೆ ಬರಬೇಕು ಎಂದು ಸಿಎಂ ಕರೆ ನೀಡಿದರು.

ಇದನ್ನೂ ಓದಿ: ವಂಟಮೂರಿ ಘಟನೆ ಸಂಬಂಧ ನಡ್ಡಾ ರಾಜಕೀಯ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಶಕ್ತಿ ಯೋಜನೆ, ಗೃಹಲಕ್ಷ್ಮೀ ಹಾಗೂ ಹೆಚ್ಚುವರಿ ಅಕ್ಕಿಯ ಹಣ ಎಲ್ಲವೂ ಕಾರ್ಮಿಕರಿಗೆ ಅನುಕೂಲ ಆಗುತ್ತಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಇದು ಸಹ ಕಾರ್ಮಿಕ ವಲಯಕ್ಕೆ ಪ್ರಯೋಜನ ಆಗುತ್ತಿದೆ. ಮುಂದಿನ ತಿಂಗಳಿನಿಂದ ಯುವನಿಧಿ ಯೋಜನೆ ಆರಂಭ ಆಗುತ್ತದೆ. ವಿದ್ಯಾವಂತ ಯುವಕರಿಗೆ ನಿರುದ್ಯೋಗ ಭತ್ಯೆ ಮುಂದಿನ ತಿಂಗಳಿನಿಂದ ನೀಡುತ್ತೇವೆ. ವಿಕಲಚೇತನರು ಯಾರೂ ಖಿನ್ನರಾಗಬಾರದು. ಖಿನ್ನತೆ ಬೆಳೆಸಿಕೊಳ್ಳಬಾರದು. ಅನೇಕ ವಿಕಲಚೇತನರು ತಮ್ಮ ಸಾಧನೆಗೆ ಪದಕಗಳನ್ನು ಪಡೆದಿದ್ದಾರೆ ಎಂದು ಹೇಳುವ ಮೂಲಕ ಹುರಿದುಂಬಿಸಿದರು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪದಕ ಗೆಲ್ಲುತ್ತಿದ್ದಾರೆ. ವಿಕಲಚೇತನರೂ ಸಹ ಸಮಾಜದ ಒಂದು ಅಂಗ, ಸಮಾಜದ ಕಾಯಕ ಜೀವಿಗಳು ಸಿಎಂ ಹುರಿದುಂಬಿಸಿದರು.

ಇದನ್ನೂ ಓದಿ: ಭ್ರೂಣ ಹತ್ಯೆ ಪ್ರಕರಣ: ಮಂಡ್ಯದ ಆಲೆಮನೆಗೆ ಮಾಜಿ ಸಚಿವ ಅಶೋಕ್ ಭೇಟಿ, ಅಧಿಕಾರಿಗಳಿಗೆ ತರಾಟೆ

Last Updated : Dec 17, 2023, 6:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.