ETV Bharat / state

ಬೆಳಗಾವಿ ಗಡಿ ವಿವಾದ.. ಸಿಎಂ ಸರ್ವಪಕ್ಷ ಸಭೆಗೆ ಚಿಂತಕರನ್ನು ಆಹ್ವಾನಿಸಬೇಕು: ಬಸವಪ್ರಭು ಹೊಸಕೇರಿ - Karnataka Vidyavardhak Sangh

1956ರಲ್ಲಿ ಕರ್ನಾಟಕಕ್ಕೆ ನಾಲ್ಕು ಜಿಲ್ಲೆ ಸೇರಿಸಲಾಗಿತ್ತು. ಬಳಿಕ ಕೆಲವು ಸಮಸ್ಯೆಗಳು ಹಾಗೆಯೇ ಉಳಿದಿವೆ. ಮಹಾಜನ ಆಯೋಗ ಸಮಿತಿ ವರದಿ ನೀಡಿತ್ತು. ವರದಿಗೆ ಅನುಗುಣವಾಗಿ ನಡೆದುಕೊಂಡಿದ್ರೆ ಇಂದು ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅವರು ತಿಳಿಸಿದ್ದಾರೆ.

ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ

author img

By

Published : Nov 27, 2022, 8:56 PM IST

ಧಾರವಾಡ: ಬೆಳಗಾವಿ ಗಡಿ ವಿವಾದ ಹಿನ್ನೆಲೆ ಸಿಎಂ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಗೆ ಗಡಿ‌ ಸಮಸ್ಯೆ ಅರಿತುಕೊಂಡ ಚಿಂತಕರನ್ನು ಆಹ್ವಾನಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಆಗ್ರಹಿಸಿದರು.

ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ, ಮಹಾರಾಷ್ಟ್ರ ಹಾಗೂ ರಾಜ್ಯ ಸರ್ಕಾರ ಒಂದೇ ಪಕ್ಷ ಆಗಿರುವ ಹಿನ್ನೆಲೆ ಸೌಹಾರ್ದ ವಾತಾವರಣ ನಿರ್ಮಾಣ ಮಾಡಬೇಕು. ಸಾರ್ವಜನಿಕ ಆಸ್ತಿಗಳಿಗೆ ಧಕ್ಕೆ ಆಗುವುದನ್ನು ತಡೆಯಬೇಕು. ಕೇಂದ್ರ ಗೃಹ ಸಚಿವರು ಮಧ್ಯಸ್ಥಿಕೆ ವಹಿಸಿ ಈ ವಾತಾವರಣ ತಿಳಿಗೊಳಿಸುವಂತೆ‌ ಒತ್ತಾಯಿಸಬೇಕು ಎಂದರು.

ಇದೇ‌ ರೀತಿ‌ ನಿರಂತರವಾಗಿ ಮುಂದುವರೆದರೆ ವಿದ್ಯಾವರ್ಧಕ ಸಂಘ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. 1956ರಲ್ಲಿ ಕರ್ನಾಟಕಕ್ಕೆ ನಾಲ್ಕು ಜಿಲ್ಲೆಗಳನ್ನು ಸೇರಿಸಲಾಗಿತ್ತು. ಬಳಿಕ ಕೆಲವು ಸಮಸ್ಯೆಗಳು ಹಾಗೆಯೇ ಉಳಿದಿವೆ. ಮಹಾಜನ ಆಯೋಗ ಸಮಿತಿ ವರದಿ ನೀಡಿತ್ತು. ವರದಿಗೆ ಅನುಗುಣವಾಗಿ ನಡೆದುಕೊಂಡಿದ್ರೆ ಇಂದು ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಜತ್ತ ತಾಲೂಕಿನ ಕೆಲವು ಗ್ರಾಮಗಳ ಸಮಸ್ಯೆ ಅಲ್ಲ, ಮಹಾಜನ ಆಯೋಗದ ವರದಿ ಜಾರಿ ಆದ್ರೆ ಜತ್ತ, ಅಕ್ಕಲಕೋಟ್, ಸೊಲ್ಲಾಪುರ ಪ್ರದೇಶಗಳು ಕರ್ನಾಟಕ ಸೇರುವಂತವೇ.

ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ

ಅವುಗಳಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಸಂಕಟ ಉದ್ಭವ ಆಗುತ್ತದೆ. ಮಹಾರಾಷ್ಟ್ರ ರಾಜಕಾರಣಿಗಳು ಕೆಲವರನ್ನು ಪ್ರೋತ್ಸಾಹಿಸಿ ಕನ್ನಡಿಗರ ವಿರುದ್ಧ ಹೇಳಿಕೆ‌ ಕೊಡಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತ ಬಂದಿವೆ. ಈ ವಿಚಾರವಾಗಿ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಅವರನ್ನು ಭೇಟಿ ಮಾಡಿ ಗಡಿ ವಿವಾದದ ಕುರಿತು ಸಮಾಲೋಚನೆ ನಡೆಸುವುದಾಗಿ ಹೇಳಿದರು.

ಓದಿ: ಜತ್ತ ತಾಲೂಕಿಗೆ ಕರ್ನಾಟಕ ಸಿಎಂ ಆದಷ್ಟು ಬೇಗನೆ ಭೇಟಿ ನೀಡಲಿ : ಮಹಾ ಕನ್ನಡಿಗರ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.